You cannot copy content of this page
+91 94482 26377
Koramangala, Bengaluru

Current-affairs 7th october

8 Oct 2019

Current Affairs – 7th October

ರಫೇಲ್ ಯುದ್ಧ ವಿಮಾನಕ್ಕೆ ಆಯುಧಪೂಜೆ 

ಸುದ್ಧಿಯಲ್ಲಿ ಏಕಿದೆ ?

 ಭಾರತದ ವಾಯುಪಡೆಗೆ ಸೇರ್ಪಡೆಯಾಗಲಿರುವ ಫ್ರಾನ್ಸ್ ನಿರ್ವಿುತ ರಫೇಲ್ ಯುದ್ಧ ವಿಮಾನಕ್ಕೆ 

ರಕ್ಷಣಾ ಸಚಿವ ರಾಜನಾಥ ಸಿಂಗ್ ಆಯುಧಪೂಜೆ ನೆರವೇರಿಸಲಿದ್ದಾರೆ.

 • ಪ್ಯಾರಿಸ್​ಗೆ ತೆರಳುವ ಸಿಂಗ್, ಫ್ರೆಂಚ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರಾನ್​ರನ್ನು ಭೇಟಿಯಾಗಿ ಆನಂತರ, ಮೊದಲ ರಫೇಲ್ ಯುದ್ಧ ವಿಮಾನ ಪಡೆಯಲು ಬೊರ್ಡೆಕ್ಸ್​ಗೆ ತೆರಳುವರು. ಫ್ರಾನ್ಸ್​ನ ಪ್ರಮುಖ ಏರೋಸ್ಪೇಸ್ ಸಂಸ್ಥೆ ಡಸಾಲ್ಟ್ ಏವಿಯೇಷನ್ ನಿರ್ವಿುತ ರಫೇಲ್ ಖರೀದಿಗೆ ಒಪ್ಪಂದ ಅಂತಿಮವಾದ ಮೂರು ವರ್ಷಗಳ ನಂತರ ಮೊದಲ ವಿಮಾನ ಭಾರತದ ಕೈ ಸೇರಲಿದೆ. ಒಟ್ಟು 59,000 ಕೋಟಿ ರೂಪಾಯಿ ವೆಚ್ಚದಲ್ಲಿ 36 ರಫೇಲ್ ಜೆಟ್​ಗಳನ್ನು ಭಾರತ ಕೊಳ್ಳಲಿದೆ.

ವಾಯುಪಡೆಗೆ ಬಲ

 • ಮೀಟಿಯರ್’ ಮತ್ತು ‘ಸ್ಕಾಲ್ಪ್’ ಕ್ಷಿಪಣಿಗಳಿಂದ ಸಜ್ಜಿತವಾದ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನಗಳು ಭಾರತದ ದಾಳಿ ಸಾಮರ್ಥ್ಯ ಮತ್ತು ವಲಯದಲ್ಲಿನ ವೈಮಾನಿಕ ಕ್ಷೇತ್ರದ ಪಾರಮ್ಯಕ್ಕೆ ಬಲ ತುಂಬಲಿದೆ ಎಂದು ಯುರೋಪ್​ನ ಕ್ಷಿಪಣಿ ತಯಾರಕ ಸಂಸ್ಥೆ ಎಂಬಿಡಿಎ ಹೇಳಿದೆ.
 • ಸ್ಕಾಲ್ಪ್ ಕ್ಷಿಪಣಿಯನ್ನು ಕೊಲ್ಲಿ ಯುದ್ಧದಲ್ಲಿ ಬಳಸಲಾಗಿತ್ತು. ರಫೇಲ್ ಸೇರ್ಪಡೆ ಭಾರತೀಯ ವಾಯು ಪಡೆಯ ಬಲವನ್ನು ಹೆಚ್ಚಿಸಲಿದೆ. ಎಂಬಿಡಿಎ ನಿರ್ಮಾಣದ ಮೆಟೆರೋ”ಬಿಯಾಂಡ್ ವಿಷುವಲ್ ರೇಂಜ್ ಕ್ಷಿಪಣಿ ” ಹಾಗೂ “ಸ್ಕಾಲ್ಫ್​ ಕ್ರೂಯಿಸ್ ಕ್ಷಿಪಣಿ”ಗಳು ರಫೆಲ್ ವಿಮಾನವನ್ನು ಮತ್ತಷ್ಟು ಡೆಡ್ಲಿಯನ್ನಾಗಿ ಪರಿವರ್ತಿಸಲಿವೆ. ಮೆಟೆರೋ ಕ್ಷಿಪಣಿ ಏರ್​ ಟು ಏರ್ ಕ್ಷಿಪಣಿಯಾಗಿದ್ದು, ಶತ್ರು ದೇಶಗಳ ವಿಮಾನಗಳನ್ನು ಸುದೂರದಿಂದಲೇ ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಸ್ಕಾಲ್ಫ್ ಕ್ರೂಯಿಸ್ ಕ್ಷಿಪಣಿ ಶತ್ರು ದೇಶ ಗಡಿ ಪ್ರವೇಶಿಸದೇ ಶತ್ರು ನೆಲೆಗಳಳನ್ನು ಧ್ವಂಸಗೊಳಿಸುವ ಶಕ್ತಿ ಹೊಂದಿದೆ.

ಭಾರತಕ್ಕೆ ರಫೇಲ್ ಯಾಕೆ ಪ್ರಮುಖ?

 • ವಾಯುಪಡೆಯಲ್ಲಿ ೩೫ ಸ್ಕ್ವಾಡ್ರನ್ ಯುದ್ಧವಿಮಾನಗಳಿದ್ದು, ಒಟ್ಟು ಸಾಮರ್ಥ್ಯ 44 ಸ್ಕ್ವಾಡ್ರನ್   ಇರಬೇಕಾದ್ದು ಅಗತ್ಯ. ಸುಖೋಯ್, ಜಾಗ್ವಾರ್ ಯುದ್ಧವಿಮಾನಗಳು ಬಳಕೆಗೆ ಸೂಕ್ತವಾಗಿಲ್ಲ. ಮಿಗ್ ಯುದ್ಧವಿಮಾನಗಳು ಪದೇಪದೆ ಅಪಘಾತಕ್ಕೀಡಾಗುತ್ತಿರುವುದರಿಂದ ಮುಂದಿನ ಕೆಲವು ವರ್ಷಗಳಲ್ಲಿ ಸ್ಕ್ವಾಡ್ರನ್   ಸಂಖ್ಯೆ 22ಕ್ಕೆ ಇಳಿಯಲಿವೆ. ಹೀಗಾಗಿ ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. ಆದರೂ ವಾಯುಪಡೆಗೆ ಇನ್ನೂ 124 ಯುದ್ಧವಿಮಾನಗಳ ಅಗತ್ಯವಿದೆ.

ಆಫ್​ಸೆಟ್ ಒಪ್ಪಂದ

 • ರಫೇಲ್ ಒಪ್ಪಂದದ ಪ್ರಮುಖ ಅಂಶವೆಂದರೆ ಆಫ್​ಸೆಟ್ ನೀತಿ. ಇದರ ಅಂಗವಾಗಿ ಭಾರತದ ದೊಡ್ಡ ಹಾಗೂ ಸಣ್ಣ ಉದ್ಯಮಗಳು ಹಾಗೂ ಸಂಶೋಧನೆ ಸಂಸ್ಥೆಗಳಿಗೆ ಒಟ್ಟು 30 ಸಾವಿರ ಕೋಟಿ ರೂ. ಮೊತ್ತದ ವಹಿವಾಟು ನಡೆಸಲು ಅವಕಾಶ ಲಭ್ಯವಾಗಲಿದೆ. ಒಟ್ಟು ಒಪ್ಪಂದ ಮೊತ್ತ 58 ಸಾವಿರ ಕೋಟಿ ರೂ. ಪೈಕಿ ಅರ್ಧದಷ್ಟನ್ನು ಭಾರತದಲ್ಲೇ ವೆಚ್ಚ ಮಾಡಬೇಕಿದೆ. ರಫೇಲ್ ಜೆಟ್​ಗಳಿಗೆ ಅಗತ್ಯವಿರುವ ಅರ್ಧದಷ್ಟು ಮೊತ್ತದ ಸಾಮಗ್ರಿಗಳನ್ನು ಫ್ರಾನ್ಸ್ ಭಾರತದಿಂದಲೇ ಖರೀದಿಸಲಿದೆ. 2021ರ ವೇಳೆಗೆ ಎಲ್ಲ 36 ಯುದ್ಧವಿಮಾನಗಳೂ ವಾಯುಪಡೆಗೆ ಸೇರಲಿವೆ.

5 ವರ್ಷಗಳವರೆಗೆ ನಿರ್ವಹಣೆ

 • ಫ್ರಾನ್ಸ್​ನ ಡಸ್ಸಾಲ್ ಕಂಪನಿ ಐದು ವರ್ಷಗಳವರೆಗೆ ರಫೇಲ್ ಜೆಟ್​ಗಳ ನಿರ್ವಹಣೆ ಮಾಡಲಿದೆ. ಯಾವುದೇ ಸಮಯದಲ್ಲೂ 36 ಯುದ್ಧವಿಮಾನಗಳ ಪೈಕಿ ಕನಿಷ್ಠ ಶೇ.75 ಯುದ್ಧವಿಮಾನಗಳು ಕಾರ್ಯಾಚರಣೆ ಸ್ಥಿತಿಯಲ್ಲಿರಬೇಕು ಎಂಬ ಷರತ್ತು ವಿಧಿಸಲಾಗಿದೆ.
 • ಈಗಾಗಲೇ ಭಾರತದ ಬಳಿ ಇರುವ ಸುಖೋಯ್ ಯುದ್ಧವಿಮಾನಗಳ ಪೈಕಿ ಶೇ.55 ಜೆಟ್​ಗಳು ಮಾತ್ರ ಕಾರ್ಯಾಚರಣೆ ಸ್ಥಿತಿಯಲ್ಲಿವೆ. ವಾಯುಪಡೆಯ ಪೈಲಟ್​ಗಳಿಗೆ ತರಬೇತಿ ನೀಡುವುದು ಹಾಗೂ ಭಾರತದಲ್ಲಿ ಶಸ್ತ್ರಾಸ್ತ್ರ ಸಂಗ್ರಹಾಗಾರ ಲಭ್ಯವಿಲ್ಲದಿದ್ದರೆ ಆರು ತಿಂಗಳವರೆಗೆ ಉಚಿತವಾಗಿ ಶಸ್ತ್ರಾಸ್ತ್ರ ಸಂಗ್ರಹ ಸೌಲಭ್ಯ ಒದಗಿಸಲೂ ಡಸ್ಸಾಲ್ಟ್ ಒಪ್ಪಿದೆ.

ಒಂದೇ ಬಾರಿಗೆ ಎರಡು ವಿಧದ ಕ್ಷಿಪಣಿ ಉಡಾವಣೆ

 • ರಫೇಲ್ ಯುದ್ಧವಿಮಾನಗಳು ಒಂದೇ ಬಾರಿಗೆ ಎರಡು ವಿಧದ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿವೆ. ಶತ್ರು ಯುದ್ಧವಿಮಾನವನ್ನು ಹೊಡೆದುರುಳಿಸಲು ಕ್ಷಿಪಣಿ ಉಡಾಯಿಸುವುದರ ಜತೆಗೇ ಭೂಮಿಯ ಮೇಲಿನ ಶತ್ರು ಪಡೆಗಳ ಮೇಲೆ ಕ್ಷಿಪಣಿಯನ್ನೂ ಹಾರಿಸಬಲ್ಲದು. ಅಲ್ಲದೆ ದಿನಕ್ಕೆ ಐದು ಬಾರಿ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.
 • ಸದ್ಯ ವಿಶ್ವದಲ್ಲಿ ಚಾಲ್ತಿಯಲ್ಲಿರುವ ಎಲ್ಲ ಯುದ್ಧವಿಮಾನಗಳೂ ಕೇವಲ ಎರಡು ಬಾರಿಯಷ್ಟೇ ಹಾರಾಟ ನಡೆಸಬಲ್ಲವು. ರಫೇಲ್ ಯುದ್ಧವಿಮಾನಗಳ ಇಂಜಿನ್ ಕೇವಲ ಅರ್ಧಗಂಟೆಯಲ್ಲಿ ಬದಲಿಸಬಹುದು. ಹೀಗಾಗಿ ಶೀಘ್ರ ಮತ್ತೊಂದು ಹಾರಾಟಕ್ಕೆ ವಿಮಾನ ಸಜ್ಜಾಗುತ್ತದೆ. ಸುಖೋಯ್ 30 ಯುದ್ಧವಿಮಾನಕ್ಕೆ ಇಂಜಿನ್ ಬದಲಿಸಲು 8 ತಾಸು ಕಾಲಾವಕಾಶ ಬೇಕಿದೆ.

ಪರಿಸರಕ್ಕೆ ಹಾನಿಯಾಗದಂತೆ ಹಸಿರು ಪಟಾಕಿಗಳು

ಸುದ್ಧಿಯಲ್ಲಿ ಏಕಿದೆ ? 

ಶೇಕಡಾ 30 ರಷ್ಟು ಕಡಿಮೆ ಮಾಲಿನ್ಯದೊಂದಿಗೆ ಹಸಿರು ಪಟಾಕಿಗಳು ಈಗ ಮಾರುಕಟ್ಟೆ ಪ್ರವೇಶಿಸಿವೆ ಎಂದು  ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪ್ರಕಟಿಸಿದರು, ಪರಿಸರಕ್ಕೆ ಹಾನಿಯಾಗದಂತೆ ಜನರ ಭಾವನೆಗಳಿಗೂ ನೋವಾಗದಂತೆ ಈ ಉಪಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಏನಿದು ಹಸಿರು ಪಟಾಕಿ?

 • ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಕೌನ್ಸಿಲ್​ ಆಫ್​ ಸೈನ್ಸ್​ ಆ್ಯಂಡ್​ ಇಂಡಸ್ಟ್ರಿಯಲ್​ ರಿಸರ್ಚ್​-ಸಿಎಸ್​ಐಆರ್​) ವಿಜ್ಞಾನಿಗಳು ಹಸಿರು ಪಟಾಕಿಯನ್ನು ಶೋಧಿಸಿದವರು. ಅದು ಕೂಡ ವಾಯುಮಾಲಿನ್ಯ ತಡೆಗಟ್ಟುವಂತ ಪಟಾಕಿಗಳನ್ನು ಶೋಧಿಸುವಂತೆ ಸುಪ್ರೀಂಕೋರ್ಟ್​ ನೀಡಿದ್ದ ನಿರ್ದೇಶನದ ಮೇರೆ ಈ ಪಟಾಕಿಗಳನ್ನು ಶೋಧಿಸಲಾಗಿದೆ.
 • ಈ ಪಟಾಕಿಗಳು ಕಡಿಮೆ ಬೆಳಕು ಮತ್ತು ಶಬ್ದವನ್ನು ಹೊಮ್ಮಿಸುತ್ತವೆ. ಇವುಗಳಲ್ಲಿ ಪೊಟಾಸಿಯಂ ನೈಟ್ರೇಟ್​ ಅನ್ನು ಆಕ್ಸಿಡೆಂಟ್​ ಆಗಿ ಬಳಸಿದ್ದು, ಸಿಡಿದ ಪಟಾಕಿಗಳಿಂದ ಪರಿಸರಕ್ಕೆ ಬಿಡುಗಡೆಯಾಗುವ ಪಾಟ್ರಿಕ್ಯುಲೇಟ್​ ಮ್ಯಾಟರ್​ನ ಪ್ರಮಾಣ ಶೇ.30 ಕಡಿಮೆಯಾಗಲಿದೆ.
 • ಹಸಿರು ಪಟಾಕಿಗಳನ್ನು ತಯಾರಿಸಲು 230 ಒಪ್ಪಂದಗಳು ಮತ್ತು 165 ಬಹಿರಂಗಪಡಿಸಲಾಗದ ಒಪ್ಪಂದಗಳ (ಎನ್​ಡಿಎ) ಮೂಲಕ ಹಸಿರು ಪಟಾಕಿಗಳ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ.

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ : ‘ಟ್ಯಾಗೋರ್ ಶಾಂತಿ ಪ್ರಶಸ್ತಿ 2018

ಸುದ್ಧಿಯಲ್ಲಿ ಏಕಿದೆ ? 

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರನ್ನು ಕೋಲ್ಕತಾ ಮೂಲದ ಏಷಿಯಾಟಿಕ್ ಸೊಸೈಟಿ ‘ಟ್ಯಾಗೋರ್ ಶಾಂತಿ ಪ್ರಶಸ್ತಿ 2018’ ನೀಡಿ ಗೌರವಿಸಿದೆ.

 • ಏಷ್ಯಾಟಿಕ್ ಸೊಸೈಟಿಯ ಅಧ್ಯಕ್ಷ ಇಶಾ ಮಹಮ್ಮದ್ ಈ ಪ್ರಶಸ್ತಿಯನ್ನು ಪ್ರಧಾನಿ ಹಸೀನಾ ಅವರಿಗೆ ಹಸ್ತಾಂತರಿಸಿದರು.
 • “ಮಾನವ ತಿಳುವಳಿಕೆ ಮತ್ತು ಶಾಂತಿಗಾಗಿ ನೀಡಿದ ಕೊಡುಗೆಗಾಗಿ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರಿಗೆ ‘ಟ್ಯಾಗೋರ್ ಶಾಂತಿ ಪ್ರಶಸ್ತಿ 2018’ ಅನ್ನು ನೀಡಿ ಗೌರವಿಸಲಾಗಿದೆ” ಎಂದು ಏಷಿಯಾಟಿಕ್‌ ಸೊಸೈಟಿ ತಿಳಿಸಿದೆ.
 • ಈ ಹಿಂದೆ, ಖ್ಯಾತ ವಿಶ್ವ ನಾಯಕ ನೆಲ್ಸನ್ ಮಂಡೇಲಾ ಮತ್ತು ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತಾ ಸೇನ್ ಇತರರು ಪ್ರಶಸ್ತಿ ಸ್ವೀಕರಿಸಿದ್ದಾರೆ.
 • ಮಾನವತಾವಾದದ ಉನ್ನತ ಆದರ್ಶಗಳು ಮತ್ತು ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿವಾದದ ಆಧಾರದ ಮೇಲೆ ಜಾಗತಿಕ ಶಾಂತಿಯನ್ನು ಉತ್ತೇಜಿಸುವ ಸಲುವಾಗಿ, ಶಾಂತಿಯ ಕಡೆಗೆ ಮಾನವ ತಿಳುವಳಿಕೆಯ ಬೆಳವಣಿಗೆಗೆ ಸೃಜನಶೀಲ ಕೊಡುಗೆ ನೀಡಿದ ವ್ಯಕ್ತಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಪೌತಿ ಖಾತೆ

ಸುದ್ಧಿಯಲ್ಲಿ ಏಕಿದೆ ? 

ರೈತರು ಎದುರಿಸುತ್ತಿರುವ ಪೌತಿ ಖಾತೆ ಸಮಸ್ಯೆಗೆ ಮೂರು ತಿಂಗಳ ಅವಧಿಯೊಳಗೆ ಮಂಗಳ ಹಾಡಲು ರಾಜ್ಯ ಸರ್ಕಾರ ವಿಶೇಷ ಆಂದೋಲನಕ್ಕೆ ಸಜ್ಜಾಗುತ್ತಿದೆ.

ಹೊಣೆ ಯಾರಿಗೆ?:

 • ಗ್ರಾಮ ಲೆಕ್ಕಾಧಿಕಾರಿ ಗಳಿಗೆ ಈ ಆಂದೋಲನದ ಹೊಣೆ ನೀಡ ಲಾಗುತ್ತದೆ. ಅವರೇ ಆಯಾ ಗ್ರಾಮಗಳಲ್ಲಿ ದಾಖಲೆ ಸಂಗ್ರಹಿಸಬೇಕು. ಆ ನಂತರ ತಾಲೂಕು ಕಚೇರಿಯಲ್ಲಿ ಭೂಮಿ ವಿಭಾಗಕ್ಕೆ ನೀಡಿ ಪಹಣಿಯ ಬದಲಾವಣೆ ಮಾಡಬೇಕು. ಪ್ರತಿ ಪಹಣಿಗೆ ಕನಿಷ್ಠ ದರ ಮಾತ್ರ ನಿಗದಿಯಾಗಲಿದೆ. ರೈತರಿಗೆ ಹೊಣೆ ಆಗದಂತೆ ಈ ಆಂದೋಲನ ನಡೆಯಲಿದೆ.

ಎಷ್ಟು ಅವಧಿ?:

 • ರಾಜ್ಯದಲ್ಲಿ ಎಲ್ಲ ಪೌತಿ ಖಾತೆಗಳನ್ನು ಮೂರು ತಿಂಗಳ ಅವಧಿಯಲ್ಲಿ ಮಾಡಿ ಮುಗಿಸಬೇಕೆಂಬ ಗಡುವು ವಿಧಿಸಲು ನಿರ್ಧರಿಸಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಪೌತಿ ಖಾತೆಗೆ ಸಂಬಂಧಿಸಿದ ಯಾವುದೇ ಪ್ರಕರಣಗಳು ಬಾಕಿ ಇರಬಾರದೆಂದು ವೀಡಿಯೋ ಕಾನ್ಪರೆನ್ಸ್ ಸಂದರ್ಭದಲ್ಲಿ ಸೂಚನೆ ನೀಡಲಾಗುತ್ತದೆ.

ಪ್ರಮುಖ ಉದ್ದೇಶ?:

 • ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ಕೇಂದ್ರ ಹಾಗೂ ರಾಜ್ಯದಿಂದ ಒಟ್ಟು 10 ಸಾವಿರ ರೂ. ನೀಡಲಾಗುತ್ತದೆ. ಪೌತಿ ಖಾತೆ ಮಕ್ಕಳ ಹೆಸರಿಗೆ ವರ್ಗಾವಣೆಯಾಗದಿದ್ದರೆ ರೈತರಿಗೆ ಅನುಕೂಲ ಆಗುವುದಿಲ್ಲ. ಯಾವುದೇ ಜಮೀನು ಎಷ್ಟು ಜನ ಮಕ್ಕಳಿಗೆ ವರ್ಗಾವಣೆಯಾಗುತ್ತದೆಯೋ ಅಷ್ಟು ಜನರಿಗೂ ಯೋಜನೆಯ ಲಾಭ ಸಿಗುತ್ತದೆ. ಆ ಉದ್ದೇಶದಿಂದ ಸರ್ಕಾರ ವಿಶೇಷ ಆಂದೋಲನ ನಡೆಸಲಿದೆ.

ಅನುಕೂಲಗಳೇನು?

 • ಮಧ್ಯವರ್ತಿಗಳ ಹಾವಳಿ ಇಲ್ಲದೆ ಖಾತೆಗಳ ವರ್ಗಾವಣೆ ಸುಲಭ
 • ಸರ್ಕಾರದ ಯೋಜನೆಗಳ ಫಲ ಖಾತೆದಾರರಿಗೆ ಸಿಗಲಿದೆ
 • ಪದೇಪದೆ ತಾಲೂಕು ಕಚೇರಿ ಅಲೆದಾಟ ತಪ್ಪಲಿದೆ

ಏನಿದು ಪೌತಿ ಖಾತೆ?

 • ರೈತರ ಹೆಸರಿನಲ್ಲಿ ಇರುವ ಪಿತ್ರಾರ್ಜಿತ ಜಮೀನನ್ನು ಅವರ ನಿಧನಾನಂತರ ಮಕ್ಕಳ ಹೆಸರಿಗೆ ಖಾತೆ ಮಾಡಿಕೊಡುವುದೇ ಪೌತಿ ಖಾತೆ. ಗ್ರಾಮ ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳೇ ಮೃತರ ಮನೆಯವರನ್ನು ಸಂರ್ಪಸಿ ಪೌತಿ ಖಾತೆ ಮಾಡಿಸಿಕೊಡಬೇಕು. ಆದರೆ ಆ ಕೆಲಸ ಆಗುತ್ತಿಲ್ಲ. ಈ ಪ್ರಕ್ರಿಯೆ ತಡವಾದರೆ ತಾಲೂಕು ಕಚೇರಿಗಳನ್ನು ಸುತ್ತಿ ಖಾತೆ ಬದಲಾವಣೆ ಮಾಡಿಸಿಕೊಳ್ಳುವುದು ಸುಲಭದ ಮಾತಾಗಿರುವುದಿಲ್ಲ. ಯಾವುದೇ ಜಮೀನು ಖಾತೆ ರೈತರ ಹೆಸರಿನಲ್ಲಿ ಇಲ್ಲದಿದ್ದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಿಕ್ಕುವುದಿಲ್ಲ. ಆದ್ದರಿಂದಲೇ ಸರ್ಕಾರ ರೈತರಿಗೆ ಯಾವುದೇ ಸೌಲಭ್ಯ ತಪ್ಪಬಾರದು ಎಂಬ ಕಾರಣಕ್ಕೆ ವಿಶೇಷ ಆಂದೋಲನ ನಡೆಸಲಿದೆ.

ಯಾವ ದಾಖಲೆಗಳು ಬೇಕು?

 • ಪೌತಿ ಖಾತೆ ಮಾಡಿಸಲು ಅರ್ಹ ರೈತರು ಪಹಣಿ, ವಂಶವೃಕ್ಷ, ರೈತರ ಮರಣ ಪತ್ರ ನೀಡಿದರೆ ಸಾಕು. ಹಾಗೆಯೇ ರೈತರಿಗೆ ಇರುವ ಮಕ್ಕಳು, ಯಾರ ಹೆಸರಿಗೆ ಎಷ್ಟು ಜಮೀನು ಎಂಬ ದಾಖಲೆ ನೀಡುವುದೂ ಕಡ್ಡಾಯ.

ವಿಶ್ವದಲ್ಲಿ ಭಾರತೀಯ ವಾಯುಪಡೆಗೆ  ನಾಲ್ಕನೇ ಸ್ಥಾನ

ಸುದ್ಧಿಯಲ್ಲಿ ಏಕಿದೆ ? 

ಭಾರತೀಯ ವಾಯುಪಡೆಗೆ ವಿಶ್ವದಲ್ಲಿಯೇ ನಾಲ್ಕನೇ ಸ್ಥಾನವಿದೆ. ಅಮೆರಿಕ, ಚೀನಾ  ಮತ್ತು ರಷ್ಯಾದ ನಂತರದ ಸ್ಥಾನ ಪಡೆದುಕೊಂಡಿರುವ  ಭಾರತೀಯ ವಾಯುಪಡೆಗೆ   ಈಗ 87ರ ಸಂಭ್ರಮ.

 • 1932ರ ಅಕ್ಟೋಬರ್‌ 8ರಂದು ಸ್ಥಾಪನೆಯಾದ ವಾಯುಪಡೆ ಅನೇಕ ಏಳುಬೀಳುಗಳ ನಡುವೆ ಜಗತ್ತಿನ ಪ್ರಮುಖ ಶಕ್ತಿಶಾಲಿ ಸಶಸ್ತ್ರ ಪಡೆಯಾಗಿ ರೂಪುಗೊಂಡಿದೆ.
 • ಭಾರತದಲ್ಲಿ ವಾಯುಪಡೆಯನ್ನು ಬ್ರಿಟಿಷರು ಸ್ಥಾಪಿಸಿದ್ದು, 1932 ಅಕ್ಟೋಬರ್ 8 ರಂದು ಆರಂಭವಾಗಿತ್ತು.ಬಳಿಕ 1933 ಏ .1ರಂದು ಮೊದಲ ಯುದ್ಧ ವಿಮಾನ ವಾಯು ಪಡೆಗೆ ಸೇರ್ಪಡೆಯಾಗಿತ್ತು.
 • ಆಗ ವಾಯುಪಡೆಯನ್ನು ರಾಯಲ್‌ ಇಂಡಿಯನ್‌ ಏರ್‌ಫೋರ್ಸ್‌ ಎಂದು ಕರೆಯಲಾಗುತ್ತಿತ್ತು ಸ್ವಾತಂತ್ರ್ಯದ ನಂತರ ಇದನ್ನು ಭಾರತೀಯ ವಾಯುಪಡೆ  ಎಂದು ಬದಲಾವಣೆ ಮಾಡಲಾಯಿತು .

ಕೃತಕ ರಕ್ತ

ಸುದ್ಧಿಯಲ್ಲಿ ಏಕಿದೆ ? 

ಕೃತಕ ರಕ್ತವನ್ನು ಶೋಧಿಸಬೇಕು ಎಂಬ ಮಾನವನ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಲಭ್ಯವಾಗಿದೆ. ಜಪಾನ್​ನ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ. ಯಾವುದೇ ಗುಂಪಿನವರಿಗೆ ಬೇಕಾದರೂ ಈ ರಕ್ತವನ್ನು ಕೊಡಬಹುದು ಎಂಬುದು ಮತ್ತೊಂದು ವಿಶೇಷವಾಗಿದೆ.

 • ರಾಷ್ಟ್ರೀಯ ರಕ್ಷಣಾ ವೈದ್ಯಕೀಯ ಕಾಲೇಜಿನ ವಿಜ್ಞಾನಿಗಳು ಕೆಂಪುರಕ್ತ ಕಣವಿರುವ ಹಾಗೂ ಆಮ್ಲಜನಕ, ಪ್ಲೇಟ್ಲೆಟ್​ಗಳನ್ನು ಪೂರೈಸಬಲ್ಲ ಕೃತಕ ರಕ್ತವನ್ನು ಶೋಧಿಸಿದ್ದಾರೆ. ಈ ರಕ್ತಕ್ಕೆ ಹೆಪ್ಪುಗಟ್ಟುವ ಗುಣವೂ ಇದೆ.
 • ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದ 10 ಮೊಲಗಳಿಗೆ ಕೃತಕ ರಕ್ತವನ್ನು ನೀಡಿ, ಬದುಕಿಸಲಾಗಿದೆ. ಮನುಷ್ಯರಿಗೂ ಈ ರಕ್ತ ನೀಡಬಹುದಾಗಿದೆ. ಗಂಭೀರವಾಗಿ ಗಾಯಗೊಂಡು ರಕ್ತಸ್ರಾವದಿಂದ ತೊಂದರೆಗೆ ಒಳಗಾದವರಿಗೆ ಅಥವಾ ರಕ್ತಹೀನತೆಯಿಂದ ಬಳಲುತ್ತಿದ್ದು, ಜೀವನ್ಮರಣದ ಹೋರಾಟ ನಡೆಸಿರುವವರಿಗೆ ಈ ರಕ್ತವನ್ನು ಅಗತ್ಯವಾಗಿ ನೀಡಬಹುದು ಎಂದು ವಿಜ್ಞಾನಿಗಳು ಭರವಸೆ ನೀಡಿದ್ದಾರೆ.

ಮಹಿಳಾ ತಂಡ ಬಾಹ್ಯಾಕಾಶಕ್ಕೆ 

ಸುದ್ಧಿಯಲ್ಲಿ ಏಕಿದೆ ?

 ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಇದೇ ಮೊದಲ ಬಾರಿಗೆ ಸಂಪೂರ್ಣ ಮಹಿಳಾ ತಂಡವನ್ನು ಬಾಹ್ಯಾಕಾಶಕ್ಕೆ ಕಳಿಸಲಿದೆ. 15 ಮಹಿಳಾ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ದುರಸ್ತಿ ಮತ್ತು ಅಭಿವೃದ್ಧಿ ಕಾರ್ಯ ನಡೆಸಲಿದ್ದಾರೆ.

 • ಅ.21ರಂದು ಈ ತಂಡ ವಿವಿಧ ಹಂತ ಹಾಗೂ ವಿಭಾಗಗಳಲ್ಲಿ ಅಂತರಿಕ್ಷದಲ್ಲಿ ಕೆಲಸ ನಿರ್ವಹಿಸಲಿದೆ. ನಾಸಾ ಕಳೆದ ಮಾರ್ಚ್ ನಲ್ಲೇ ಮಹಿಳಾ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಹಾಕಿಕೊಂಡಿತ್ತು.
 • ಸ್ಪೇಸ್ ಸೂಟ್​ಗಳ ಕೊರತೆಯಿಂದಾಗಿ ಯೋಜನೆಯನ್ನು ಕೆಲಕಾಲ ಮುಂದೂಡಬೇಕಾಯಿತು. ಈಗ ಯೋಜನೆಯನ್ನು ಹೊಸದಾಗಿ ರೂಪಿಸಲಾಗಿದೆ.
 • ಈ ಹಿಂದೆ ಬಾಹ್ಯಾಕಾಶಕ್ಕೆ ತೆರಳಿದ ಅನುಭವ ಹೊಂದಿರುವ ಜೆಸ್ಸಿಕಾ ಮಿರ್ ಹಾಗೂ ಕ್ರಿಸ್ಟಿನಾ ಕೋಚ್ ಈ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ನಾಸಾ ತಿಳಿಸಿದೆ. ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮತ್ತು ನಿರ್ವಹಣೆಗಾಗಿ ಈವರೆಗೆ 200ಕ್ಕೂ ಹೆಚ್ಚು ಬಾರಿ ಬಾಹ್ಯಾಕಾಶ ಯಾನ ಕೈಗೊಳ್ಳಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಕೇವಲ ಮಹಿಳಾ ಗಗನಯಾತ್ರಿಗಳನ್ನು ಒಳಗೊಂಡ ತಂಡ ಈ ಕೆಲಸ ನಿರ್ವಹಿಸಲಿದೆ.
 • ಗಗನಯಾತ್ರಿಗಳಾದ ಆಂಡ್ರೂ ಮೋರ್ಗಾನ್ ಮತ್ತು ಜೆಸ್ಸಿಕಾ ಮಿರ್ ಜತೆ ನಾಸಾದ ಇಬ್ಬರು ಹೊಸ ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಲಿದ್ದು, ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ಲುಕಾ ಪರ್ವೆಟಾನೋ ಕ್ರಿಸ್ಟಿನಾ ಜತೆಗೆ ಬಾಹ್ಯಾಕಾಶ ನಡಿಗೆ ಕೈಗೊಳ್ಳಲಿದ್ದಾರೆ. ಕ್ರಿಸ್ಟಿನಾ ಈವರೆಗೆ 7 ಗಂಟೆಗಳ ಕಾಲ ಬಾಹ್ಯಾಕಾಶ ನಡಿಗೆ ಕೈಗೊಂಡ ಅನುಭವ ಹೊಂದಿದ್ದಾರೆ. ನಾಸಾದ ಅಂತಾರಾಷ್ಟ್ರಿಯ ಬಾಹ್ಯಾಕಾಶ ನಿಲ್ದಾಣದ ದುರಸ್ತಿ ಹಾಗೂ ನವೀಕರಣಕ್ಕಾಗಿ ಈ ಯೋಜನೆ ಕೈಗೊಳ್ಳಲಾಗಿದ್ದು, ಸ್ಪೇಸ್ ವರ್ಕ್ ಡಿಸೆಂಬರ್​ವರೆಗೆ ನಡೆಯಲಿದೆ.

Leave a Reply