You cannot copy content of this page
+91 94482 26377
Koramangala, Bengaluru

Current-affairs 2nd october

3 Oct 2019

Current Affairs – 2nd October

Navaratri 2019: ನವರಾತ್ರಿಯ ಐದನೇ ದಿನ ಸ್ಕಂದಮಾತೆಯ ಪೂಜೆ ಹೀಗೆ ಮಾಡಿ

ಸುದ್ಧಿಯಲ್ಲಿ ಏಕಿದೆ ?  

ನವರಾತ್ರಿಯ ಐದನೇ ದಿನ ಪಂಚಮಿ ತಿಥಿಯಂದು ದುರ್ಗಾಮಾತೆಯ ಅವತಾರವಾದ ಸ್ಕಂದ ಮಾತೆಯನ್ನು ಆರಾಧಿಸಲಾಗುತ್ತದೆ. ಭಗವಾನ್‌ ಸ್ಕಂದನ ಮಾತೆಯಾಗಿ ದುರ್ಗೆಯು ಅವತರಿಸಿದ್ದರಿಂದ ‘ಸ್ಕಂದಮಾತಾ’ ಎಂದು ಪ್ರಸಿದ್ಧಳಾಗಿದ್ದಾಳೆ. ದೇವಿಯ ಈ ರೂಪವನ್ನು ಆರಾಧಿಸಿದರೆ ನಮ್ಮಲ್ಲಿರುವ ದೈವತ್ವವನ್ನು ಪೋಷಿಸುತ್ತಾಳೆ ಎಂಬ ನಂಬಿಕೆ ಇದೆ.

ಸ್ಕಂದ ಮಾತೆಯ ಮಹತ್ವ

ಮಗನಾದ ಸ್ಕಂದನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡಿರುವ ದುರ್ಗಾದೇವಿಯ ಈ ಅವತಾರ ಅತ್ಯಂತ ಪವಿತ್ರ ಹಾಗೂ ಅದ್ಭುತ ರೂಪ ಎಂದು ಹೇಳಲಾಗುತ್ತದೆ. ಈ ರೂಪದಲ್ಲಿ ತಾಯಿಯು ಸಂತೋಷದಿಂದ ಹಾಗೂ ಹಿತಕರವಾದ ಭಾವನೆಯೊಂದಿಗೆ ಕಾಣಿಸಿಕೊಳ್ಳುತ್ತಾಳೆ. ದೇವಿಯನ್ನು ಆರಾಧಿಸುವ ಭಕ್ತರು ಮಾತೆಯ ಆಶೀರ್ವಾದ ಮಾತ್ರವಲ್ಲದೇ ಮಗನಾದ ಸ್ಕಂದನ ಆಶೀರ್ವಾದವನ್ನೂ ಪಡೆಯಬಹುದು. ಈ ಅವತಾರವನ್ನು ಪೂಜಿಸುವುದರಿಂದ ಭಕ್ತರು ಎಲ್ಲಾ ಕಷ್ಟಗಳಿಂದ ಮುಕ್ತರಾಗಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.

ಸ್ಕಂದ ಮಾತೆಯು ಬುಧಗ್ರಹದ ಮೇಲೆ ಅಧಿಪತ್ಯವನ್ನು ಹೊಂದಿರುತ್ತಾಳೆ. ಶುದ್ಧಮನಸ್ಸಿನಿಂದ, ಭಕ್ತಿಯಿಂದ ಯಾರು ಆರಾಧನೆ ಮಾಡುತ್ತರೋ ಅವರಿಗೆ ದೇವಿಯು ಹೆಸರು, ಸಂಪತ್ತು ಹಾಗೂ ಸಮೃದ್ಧಿಯನ್ನು ನೀಡುತ್ತಾಳೆ. ಜನ್ಮ ಕುಂಡಲಿಯಲ್ಲಿ ಬುಧನು ಪ್ರತಿಕೂಲ ಸ್ಥಾನದಲ್ಲಿದ್ದರೆ ಉಂಟಾಗುವ ತೊಂದರೆಯನ್ನು ದೇವಿಯು ನಿವಾರಿಸುತ್ತಾಳೆ.

ಸ್ಕಂದ ಮಾತೆಯ ರೂಪ

ಸ್ಕಂದ ಮಾತೆಗೆ ನಾಲ್ಕು ಭುಜಗಳಿದ್ದು ಒಂದು ಕೈಯಲ್ಲಿ ಸ್ಕಂದನನ್ನು ಹಾಗೂ ಎರಡು ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು, ಸದಾ ತನ್ನ ಭಕ್ತರನ್ನು ಆಶೀರ್ವಾದ ಮಾಡುತ್ತಾಳೆ. ಇವಳ ಶರೀರದ ಬಣ್ಣವೂ ಸಂಪೂರ್ಣವಾಗಿ ಬೆಳ್ಳಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಈ ಕಾರಣಕ್ಕಾಗಿ ಇವಳನ್ನು ಪದ್ಮಾಸನಾ ದೇವಿ ಎಂದು ಕರೆಯುತ್ತಾರೆ. ಸಿಂಹವು ಸ್ಕಂದಮಾತೆಯ ವಾಹನವಾಗಿದೆ.

ಬಂಡೀಪುರ ರಾತ್ರಿ ಸಂಚಾರಕ್ಕೆ ಅವಕಾಶ ನೀಡಲ್ಲ: ಯಡಿಯೂರಪ್ಪ ಸ್ಪಷ್ಟನೆ

ಸುದ್ಧಿಯಲ್ಲಿ ಏಕಿದೆ ?  

ಬಂಡೀಪುರ ರಸ್ತೆ ಮಾರ್ಗದಲ್ಲಿರಾತ್ರಿ ಸಂಚಾರ ನಿಷೇಧ ಮುಂದುವರಿಯಲಿದೆ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು. ನ್ಯಾಯಾಲಯವು ಬಂಡೀಪುರ ರಸ್ತೆಯಲ್ಲಿರಾತ್ರಿ ಸಂಚಾರವನ್ನು ನಿಷೇಸಿ ಆದೇಶಿಸಿದೆ. ಕೇರಳದ ವಯನಾಡು ಕ್ಷೇತ್ರದ ಲೋಕಸಭಾ ಸದಸ್ಯ ರಾಹುಲ್‌ ಗಾಂ ಅವರಿಗೆ ಈ ವಿಚಾರ ತಿಳಿದಿರಬಹುದು” ಎಂದು ಯಡಿಯೂರಪ್ಪ ಬುಧವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು

‘ರಾಜ್ಯದಲ್ಲಿಉಂಟಾದ ನೆರೆಯ ಪರಿಹಾರಕ್ಕೆ ಯಾರ ಪ್ರಭಾವವೂ ಬೇಕಾಗಿಲ್ಲ. ಯಾವ ಪಕ್ಷದವರೂ ಗೊಂದಲ ಉಂಟು ಮಾಡಿಕೊಳ್ಳುವ ಅಗತ್ಯವಿಲ್ಲ. ಕೇಂದ್ರ ಸರಕಾರ ಈವರೆಗೂ ದೇಶದ ಯಾವ ರಾಜ್ಯಕ್ಕೂ ನೆರೆ ಪರಿಹಾರ ಬಿಡುಗಡೆ ಮಾಡಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈಗಷ್ಟೇ ಅಮೆರಿಕ ಪ್ರವಾಸ ಮುಗಿಸಿ ವಾಪಸಾಗಿದ್ದಾರೆ. ಇನ್ನೆರಡು ಮೂರು ದಿನಗಳಲ್ಲಿಪರಿಹಾರ ಘೋಷಣೆಯಾಗುವ ಭರವಸೆ ಇದೆ. ಯಾರೂ ದಿಲ್ಲಿಗೆ ಹೋಗಬೇಕಾಗಿಲ್ಲ. ಪ್ರಧಾನಿ ಮೋದಿ ಅವರಿಗೆ ಎಲ್ಲರಾಜ್ಯದ ಪರಿಸ್ಥಿತಿ ಗೊತ್ತಿದೆ” ಎಂದು ಹೇಳಿದರು.

”ರಾಜ್ಯದ ಸಮ್ಮಿಶ್ರ ಸರಕಾರದ ಅವಯಲ್ಲಿಸುತ್ತೂರು ಶ್ರೀಗಳ ಫೋನ್‌ ಕದ್ದಾಲಿಕೆ ಮಾಡಿರುವ ಆರೋಪದ ಬಗ್ಗೆ ಪ್ರಶ್ನಿಸಿದಾಗ, ಯಾರ ಫೋನ್‌ ಕದ್ದಾಲಿಕೆ ಆಗಿದ್ದರೂ ಸತ್ಯ ಹೊರಬರಲಿದೆ. ಸಿಬಿಐ ತನಿಖೆಯ ಸಂಪೂರ್ಣ ವರದಿ ಬಂದ ನಂತರ ಆ ಬಗ್ಗೆ ಮಾತನಾಡುತ್ತೇನೆ” ಎಂದರು.

ಯಾವ ಕಾರಣಕ್ಕೂ ರಾತ್ರಿ ಸಂಚಾರಕ್ಕೆ ಅವಕಾಶವಿಲ್ಲ: ಸಿ.ಸಿ.ಪಾಟೀಲ್‌

ಯಾವುದೇ ಕಾರಣಕ್ಕೂ ಬಂಡೀಪುರ ಹಾಗೂ ಕೇರಳ ನಡುವೆ ರಾತ್ರಿ ಸಂಚಾರಕ್ಕೆ ಅವಕಾಶ ನೀಡುವುದಿಲ್ಲಎಂದು ಅರಣ್ಯ ಸಚಿವ ಸಿ.ಸಿ.ಪಾಟೀಲ್‌ ತಿಳಿಸಿದ್ದಾರೆ.

ಬುಧವಾರ ಮೈಸೂರಿನಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಆವರು, ”ರಾಹುಲ್‌ಗಾಂ ಅವರು ಬಂಡೀಪುರ ಹಾಗೂ ಕೇರಳ ನಡುವೆ ರಾತ್ರಿ ಸಂಚಾರಕ್ಕೆ ಅವಕಾಶ ನೀಡುವ ವಿಚಾರವನ್ನು ಒಬ್ಬ ಸಂಸದರಾಗಿ ಯೋಚನೆ ಮಾಡುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಅವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಅವರು ಹಿಂದಿನ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಯೋಚನೆ ಮಾಡಿದರೆ, ಅವರಿಗೆ ಸಮಸ್ಯೆಯ ನೈಜ ಅರಿವಾಗುತ್ತದೆ,” ಎಂದರು.

”ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವುದರಿಂದ ಪ್ರಾಣಿಗಳ ಬದುಕಿಗೆ ಧಕ್ಕೆಯಾಗುತ್ತದೆ. ಅಲ್ಲದೆ ಈಗಾಗಲೇ ರಾತ್ರಿ ವೇಳೆ ಸಂಚಾರದಿಂದ ಸಾಕಷ್ಟು ಪ್ರಾಣಿ ಪಕ್ಷಿಗಳು ಮೃತಪಟ್ಟಿವೆ. ಈ ಕಾರಣಕ್ಕೆ ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಬಂದ್‌ ಮಾಡಲಾಗಿದೆ. ಇದನ್ನು ಸಡಿಲಿಕೆ ಮಾಡುವ ಪ್ರಶ್ನೆಯೇ ಇಲ್ಲಿಉದ್ಭವವಾಗುವುದಿಲ್ಲ. ನ್ಯಾಯಾಲಯವೂ ರಾತ್ರಿ ಸಂಚಾರಕ್ಕೆ ಅನುವು ನೀಡದಂತೆ ಆದೇಶ ನೀಡಿದೆ. ಹೀಗಾಗಿ ಈ ವಿಚಾರದಲ್ಲಿಯಾವುದೇ ಕಾರಣಕ್ಕೂ ಬದಲಿ ನಿರ್ಧಾರ ಕೈಗೊಳ್ಳುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.

ಫೋನ್‌ ಕದ್ದಾಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ”ಯಾರೇ ಆದರೂ ನಿರ್ದಿಷ್ಟ ಉದ್ದೇಶವಿಲ್ಲದೆ ಅನ್ಯ ಕಾರಣಕ್ಕೆ ಫೋನ್‌ ಕದ್ದಾಲಿಕೆ ಮಾಡುವುದು ಅಕ್ಷಮ್ಯ ಅಪರಾಧ. ಈ ಪ್ರಕರಣದಲ್ಲಿಯಾರೇ ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು,” ಎಂದರು.

ಕಿತ್ತೂರು ಉತ್ಸವ

ಸುದ್ಧಿಯಲ್ಲಿ ಏಕಿದೆ ? ಪ್ರತಿ ವರ್ಷದಂತೆ ಈ ಬಾರಿಯೂ ಕಿತ್ತೂರು ಉತ್ಸವವನ್ನು ಅಕ್ಟೋಬರ್ 23 ರಿಂದ ಮೂರು ದಿನಗಳ ಕಾಲ ಆಚರಿಸಲು ನಿರ್ಧರಿಸಲಾಗಿದೆ ಎಂದು ಬೃಹತ್ ,ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಉದ್ದೇಶ

 • ಕಿತ್ತೂರು ಇತಿಹಾಸ, ಚೆನ್ನಮ್ಮ ಶೌರ್ಯ – ಸಾಹಸ ಯುವ ಪೀಳಿಗೆಗೆ ಸ್ಪೂರ್ತಿಯಾಗಬೇಕು ಎಂಬ ಉದ್ದೇಶದಿಂದ ಉತ್ಸವ ಆಚರಿಸಲಾಗುತ್ತಿದೆ.1824 ರ ಅಕ್ಟೋಬರ್ 23 ರಂದು ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಯೋಧ ರಾಣಿ ರಾಣಿ ಚೆನ್ನಮ್ಮರ ಪರಾಕ್ರಮವನ್ನು  ಗುರುತಿಸಲು ಸರ್ಕಾರವು ಕಿತ್ತೂರು ಉತ್ಸವವನ್ನು ಮೂಲಭೂತವಾಗಿ ‘ವಿಜಯೋತ್ಸವ’ ಎಂದು ಆಯೋಜಿಸುತ್ತಿದೆ, ಅದು ಚೆನ್ನಮ್ಮನಿಗೆ ‘ಮೊದಲ ಮಹಿಳಾ ಸ್ವಾತಂತ್ರ್ಯಹೋರಾಟಗಾರ್ತಿ ‘ ಎಂಬ ಸಂಭ್ರಮ ಮತ್ತು ಪೌರಾಣಿಕ ಸ್ಥಾನಮಾನವನ್ನೂ ಕೊಡುತ್ತದೆ .

ಕಿತ್ತೂರು ಚೆನ್ನಮ್ಮನ ಬಗ್ಗೆ

 • ಕಿತ್ತೂರು ರಾಣಿ ಚನ್ನಮ್ಮ ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು, ಸ್ವಾತಂತ್ರಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ ಧೈರ್ಯ, ಸಾಹಸ, ಕೆಚ್ಚುಗಳು ಚನ್ನಮ್ಮನನ್ನು ಅಜರಾಮರವಾದ ಕೀರ್ತಿ ಶಿಖರಕ್ಕೇರಿಸಿವೆ. ಚನ್ನಮ್ಮ ನಿಂದ ಕಿತ್ತೂರು ಪ್ರಸಿದ್ಧವಾಗಿದೆ.

ಪ್ಲಾಸ್ಟಿಕ್ ನಿರ್ಮೂಲ

ಸುದ್ಧಿಯಲ್ಲಿ ಏಕಿದೆ ?

ಅಕ್ಟೋಬರ್ 2 ಮಹಾತ್ಮಾ ಗಾಂಧಿ ಅವರ 150ನೇ ಜನುಮ ದಿನ. ಐದು ವರ್ಷದ ಹಿಂದೆ ಇದೇ ದಿನ ಆರಂಭವಾದ ಸ್ವಚ್ಛ ಭಾರತ್‌ ಆಂದೋಲನ ಸಾಕಷ್ಟು ಯಶಸ್ಸು ಕಂಡ ಬೆನ್ನಿಗೇ ಈ ಬಾರಿ ಬಳಸಿ ಎಸೆಯುವ ಪ್ಲಾಸ್ಟಿಕ್‌ನ್ನು ಹಂತ ಹಂತವಾಗಿ ನಿವಾರಿಸುವ ಆಂದೋಲನಕ್ಕೆ ಚಾಲನೆ ದೊರೆಯಲಿದೆ.

 • ಸರಕಾರ ಕಾನೂನುಗಳ ಮೂಲಕ ಪ್ಲಾಸ್ಟಿಕ್‌ ನಿಯಂತ್ರಣ ಮಾಡುವುದು ಒಂದು ಕಡೆ ಇದ್ದರೂ ಜನರು ಸ್ವಯಂಪ್ರೇರಣೆಯಿಂದ ಪ್ಲಾಸ್ಟಿಕ್‌ನಿಂದ ದೂರ ಸರಿದು ನಿಲ್ಲಬೇಕು. ಈ ಮೂಲಕ ನೆಲ, ಜಲ ಸೇರಿದಂತೆ ಪರಿಸರಕ್ಕೆ ಅಪಾರ ಹಾನಿ ಮಾಡುವ, ಪ್ರವಾಹಕ್ಕೆ ಕಾರಣವಾಗುವ ಪ್ಲಾಸ್ಟಿಕ್‌ನ ಬಳಕೆಯನ್ನು ಕಡಿಮೆ ಮಾಡಿ ಸ್ವಚ್ಛ ಭಾರತದ ಕಲ್ಪನೆಯನ್ನು ಇನ್ನಷ್ಟು ವಿಸ್ತರಿಸಬೇಕು ಎನ್ನುವುದು ಆಶಯವಾಗಿದೆ.

ಬಳಸಿ ಎಸೆವ ಪ್ಲಾಸ್ಟಿಕ್‌ ಗುರಿ

 • ಪ್ಲಾಸ್ಟಿಕ್‌ ನಿರ್ಮೂಲನ ಎಂದ ಕೂಡಲೇ ಕೇಂದ್ರ ಸರಕಾರ ನಿಷೇಧವನ್ನೇನೂ ವಿಧಿಸಿಲ್ಲ. ಎಲ್ಲರೀತಿಯ ಪ್ಲಾಸ್ಟಿಕ್‌ನ್ನು ನಿಷೇಧಿಸುವ ಉದ್ದೇಶವೂ ಇಲ್ಲ. ಒಂದೇ ಬಾರಿ ಬಳಸಿ ಎಸೆಯುವ ಪ್ಲಾಸ್ಟಿಕ್‌ಗಳ ಬಳಕೆ ಕಡಿಮೆ ಮಾಡುವುದು ಮತ್ತು, ಪ್ಲಾಸ್ಟಿಕ್‌ನ್ನು ಒಂದೇ ಬಾರಿ ಬಳಸಿ ಎಸೆಯುವ ಪ್ರವೃತ್ತಿಯನ್ನು ನಿವಾರಿಸುವುದು ಈಗಿನ ಗುರಿ.

ಪ್ಲಾಸ್ಟಿಕ್‌ ಪರ್ವತ 900 ಶತಕೋಟಿ ಟನ್‌

 • 1950ರಿಂದ ದೇಶ ಉತ್ಪಾದಿಸಿದ ಪ್ಲಾಸ್ಟಿಕ್‌ (ಗುಡ್ಡೆ ಹಾಕಿದರೆ 4 ಎವರೆಸ್ಟ್‌ ಆದೀತು)
 • 25,940 ಟನ್‌ ಪ್ರತಿದಿನ ಸಂಗ್ರಹವಾಗುವ ಪ್ಲಾಸ್ಟಿಕ್‌ ತ್ಯಾಜ್ಯ (9000 ಏಷ್ಯನ್‌ ಆನೆಗಳ ತೂಕ)

ನಾವೇನು ಮಾಡಬಹುದು?

 • ಪ್ಲಾಸ್ಟಿಕ್‌ ಚೀಲ ಬಳಸಿ ಎಸೆಯುವ ಅಭ್ಯಾಸ ಬಿಟ್ಟು ಮರುಬಳಕೆ.
 • ಅಂಗಡಿಗಳಿಗೆ ಹೋಗುವಾಗ ಚೀಲ ಒಯ್ಯುವ ಪರಿಪಾಠ.
 • ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಚೀಲ ನೀಡುವುದಿಲ್ಲಎಂದು ಬೋರ್ಡ್‌
 • ಅಂಗಡಿಗಳಲ್ಲೇ ಬಟ್ಟೆ, ಪೇಪರ್‌ ಚೀಲ ಒದಗಿಸುವ ವ್ಯವಸ್ಥೆ
 • ನೀರು, ಪಾನೀಯ ಬಾಟಲ್‌ನ್ನು ಎಲ್ಲೆಂದರಲ್ಲಿಎಸೆಯದಿರೋಣ

ತಯಾರಿ ಹೇಗಿದೆ?

 • ರಾಜ್ಯಗಳಲ್ಲಿಈಗಾಗಲೇ ಇರುವ ತೆಳು ಪ್ಲಾಸ್ಟಿಕ್‌ ಬ್ಯಾನ್‌ ನಿಷೇಧ ಕಟ್ಟು ನಿಟ್ಟಿನ ಜಾರಿ
 • ಸಂಸತ್ತಿನಲ್ಲಿಆಗಲೇ ಪ್ಲಾಸ್ಟಿಕ್‌ಗೆ ನಿಷೇಧ ವಿಧಿಸಲಾಗಿದೆ, ರೈಲುಗಳಲ್ಲೂಜಾರಿ ಸಾಧ್ಯತೆ
 • ಶಾಪ್‌ಗಳು, ಬೀದಿ ಬದಿ ಅಂಗಡಿಗಳ ವರ್ತಕರಿಗೆ ಪ್ಲಾಸ್ಟಿಕ್‌ ಬಳಸದಂತೆ ಮನವರಿಕೆ

ಯಾವುದಕ್ಕೆ ನಿರ್ಬಂಧ?

 • ತೆಳುವಾದ ಪ್ಲಾಸ್ಟಿಕ್‌ ಚೀಲಗಳು, ಸ್ಟ್ರಾ, ಕಪ್‌, ಪ್ಲೇಟ್‌, ಸಣ್ಣ ಬಾಟಲಿಗಳು

ಪರಿಶಿಷ್ಟ ಕಾಯಿದೆ

ಸುದ್ಧಿಯಲ್ಲಿ ಏಕಿದೆ ?

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ಆರೋಪಕ್ಕೆ ಒಳಗಾದ ವ್ಯಕ್ತಿಯ ಬಂಧನಕ್ಕಿದ್ದ ನಿಯಮಗಳನ್ನು ಸರಳಗೊಳಿಸಿದ್ದ ತನ್ನದೇ ಆದೇಶವನ್ನು ಹಿಂಪಡೆಯುವ ಮೂಲಕ ಸುಪ್ರೀಂಕೋರ್ಟ್‌ ಕಾಯಿದೆಗೆ ಮತ್ತೆ ಬಲ ತುಂಬಿದೆ.

ಹಿನ್ನಲೆ

 • 2018ರ ಮಾರ್ಚ್ 28ರಂದು ದ್ವಿಸದಸ್ಯ ಪೀಠವು ನೀಡಿದ್ದ ಆದೇಶಕ್ಕೆ ರಾಷ್ಟ್ರಾದ್ಯಂತ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆದ ದೂರುಗಳು ಬಂದಾಗ ಆರೋಪಿಯನ್ನು ತಕ್ಷಣವೇ ಬಂಧಿಸಬಾರದು, ಡಿಎಸ್‌ಪಿ ರಾರ‍ಯಂಕ್‌ನ ಅಧಿಕಾರಿ ವಿಚಾರಣೆ ನಡೆಸಿದ ಬಳಿಕವೇ ಕ್ರಮ ಕೈಗೊಳ್ಳಬೇಕು ಎನ್ನುವುದು ತೀರ್ಪಿನ ಸಾರವಾಗಿತ್ತು.
 • ಈ ಆದೇಶದ ಮೂಲಕ ಪರಿಶಿಷ್ಟ ಕಾಯಿದೆಯನ್ನು ದುರ್ಬಲಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಕೇಂದ್ರ ಸರಕಾರ ಕೂಡಾ ಇದರ ವಿರುದ್ಧ ಆಕ್ಷೇಪವೆತ್ತಿತ್ತು. ಕೇಂದ್ರದ ಮನವಿಯನ್ನು ಪುರಸ್ಕರಿಸಿದ ಕೋರ್ಟ್‌, ಅದನ್ನು ತ್ರಿಸದಸ್ಯ ಪೀಠಕ್ಕೆ ಒಪ್ಪಿಸಿತ್ತು.
 • ಕಳೆದ ಸೆಪ್ಟೆಂಬರ್‌ 13ರಂದು ತ್ರಿಸದಸ್ಯ ಪೀಠವು, ದ್ವಿಸದಸ್ಯ ಪೀಠದ ಆದೇಶಕ್ಕೆ ಆಕ್ಷೇಪವೆತ್ತಿತ್ತು. ಈಗ ಅಂತಿಮ ತೀರ್ಪು ನೀಡಲಾಗಿದೆ. ಇದರೊಂದಿಗೆ ಪರಿಶಿಷ್ಟ ಜಾತಿ/ಪಂಗಡಗಳ ಕಾಯಿದೆಯನ್ನು ದುರ್ಬಲಗೊಳಿಸಿದ ಆರೋಪದಿಂದ ಸುಪ್ರೀಂಕೋರ್ಟ್‌ ಮತ್ತು ಕೇಂದ್ರಗಳೆರಡೂ ಮುಕ್ತಿ ಪಡೆದಂತಾಗಿದೆ.

ಸುಪ್ರೀಂಕೋರ್ಟ್‌ ಹೇಳಿದ್ದೇನು?

 • 15ನೇ ವಿಧಿಯಡಿ ಸಂವಿಧಾನವು ಪರಿಶಿಷ್ಟರಿಗೆ ರಕ್ಷಣೆ ನೀಡುತ್ತದೆಯಾದರೂ ಅವರಿನ್ನೂ ಸಾಮಾಜಿಕ ಶೋಷಣೆ ಮತ್ತು ತಾರತಮ್ಯಕ್ಕೆ ಒಳಗಾಗುತ್ತಲೇ ಇದ್ದಾರೆ.
 • ಎಸ್‌ಸಿ/ಎಸ್‌ಟಿ ಕಾಯಿದೆಯ ಅವಕಾಶಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿರುವುದಕ್ಕೆ ಕಾರಣ ಜಾತಿ ವ್ಯವಸ್ಥೆಯಲ್ಲ, ಇದು ಮಾನವ ವೈಫಲ್ಯ.
 • ಯಾವುದೇ ಪ್ರಕರಣ ದಾಖಲಿಸಿಕೊಂಡು ಬಂಧಿಸುವ ಮುನ್ನ ಉನ್ನತಾಧಿಕಾರಿ ವಿಚಾರಣೆ ನಡೆಸಬೇಕು ಎಂಬ ಆದೇಶ ಸರಿಯಾದುದಲ್ಲ. ಕೋರ್ಟ್‌ ಹಾಗೆ ಮಾಡಬಾರದಿತ್ತು. ಸಂವಿಧಾನದಡಿ ಇದಕ್ಕೆ ಆವಕಾಶವಿಲ್ಲ.

2018ರ ತೀರ್ಪು ಏನಿತ್ತು?

 • ದೇಶದಲ್ಲಿಪರಿಶಿಷ್ಟ ಕಾಯಿದೆಯ ದುರುಪಯೋಗವಾಗುತ್ತಿದೆ, ಅಮಾಯಕರ ಮೇಲೆ ಕೇಸು ಹಾಕಿ ಬಂಧಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿಸುಪ್ರೀಂ ಕೋರ್ಟ್‌ ಈ ಆದೇಶವನ್ನು ನೀಡಿತ್ತು. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ದೂರುಗಳು ಬಂದಾಗ ತಕ್ಷಣವೇ ಬಂಧಿಸಬೇಕೆಂಬ ಅವಕಾಶ ಸರಿಯಲ್ಲ. ಒಬ್ಬ ಡಿಎಸ್‌ಪಿ ಹಂತದ ಅಧಿಕಾರಿ ಪರಿಶೀಲಿಸಿ ಬಂಧನಕ್ಕೆ ಆದೇಶ ನೀಡಬಹುದು ಎಂದು ಹೇಳಿತ್ತು.
 • ಆರೋಪಿತ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ಪಡೆಯುವ ಅವಕಾಶ ನಿರಾಕರಣೆ ತಪ್ಪು ಎಂದಿತ್ತು.
 • ಸರಕಾರಿ ಅಧಿಕಾರಿಗಳ ವಿರುದ್ಧ ದೂರು ಬಂದಾಗ ಬಂಧನಕ್ಕೆ ಹಿರಿಯ ಅಧಿಕಾರಿಗಳ ಅನುಮೋದನೆ ಪಡೆಯಲು ಸೂಚಿಸಿಸಿತ್ತು.

 ಕೈಗಾರಿಕೆ ವಲಯದ ಉತ್ಪಾದನೆ ತೀವ್ರ ಕುಸಿತ

ಸುದ್ಧಿಯಲ್ಲಿ ಏಕಿದೆ ?

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಎಂಟು ಪ್ರಮುಖ ಕೈಗಾರಿಕೆಗಳು ಜುಲೈನಲ್ಲಿನ ಶೇ .2.7ಕ್ಕೆ ಹೋಲಿಸಿದರೆ ಈ ವರ್ಷ ಆಗಸ್ಟ್‌ನಲ್ಲಿ ನಕಾರಾತ್ಮಕವಾಗಿದ್ದು ಶೇ .0.5 ಕ್ಕೆ ಕುಸಿದಿದೆ.

ಕೋರ್ ಇಂಡಸ್ಟ್ರೀಸ್ ಹೇಗೆ ಕಾರ್ಯನಿರ್ವಹಿಸಿವೆ  ?

 • 2019-19ರ ಏಪ್ರಿಲ್‌ನಿಂದ ಆಗಸ್ಟ್‌ನಲ್ಲಿ ಇದರ ಸಂಚಿತ ಬೆಳವಣಿಗೆ 2018-19ರಲ್ಲಿ ಶೇ 7ಕ್ಕೆ ಹೋಲಿಸಿದರೆ ಶೇಕಡಾ 2.4 ರಷ್ಟಿತ್ತು. ಉಕ್ಕಿನ ವಲಯವು 2019-20 ಏಪ್ರಿಲ್-ಆಗಸ್ಟ್ ತಿಂಗಳಲ್ಲಿ ಶೇಕಡಾ 3.5 ಕ್ಕೆ ಇಳಿದಿದೆ . ಏಪ್ರಿಲ್-ಆಗಸ್ಟ್ 2018-19ರಲ್ಲಿ ಶೇ.9.7ರಷ್ಟಿತ್ತು.
 • 2019-20ರ ಏಪ್ರಿಲ್-ಆಗಸ್ಟ್ ತಿಂಗಳಲ್ಲಿ ವಿದ್ಯುತ್ ಕ್ಷೇತ್ರವು ಶೇಕಡಾ 6 ಕ್ಕೆ ಇಳಿದಿದೆ. ಕಳೆದ ವರ್ಷ ಇದೇ ಅವಧೀಯಲ್ಲಿ ಶೇಕಡಾ 5.8 ರಷ್ಟಿತ್ತು. ಸಿಮೆಂಟ್ ವಲಯವು 2019-20 ಏಪ್ರಿಲ್-ಆಗಸ್ಟ್‌ನಲ್ಲಿ ಶೇ.15ರಿಂದ ಶೇ. 1.3 ಕ್ಕೆ ತೀವ್ರ ಕುಸಿತ ಅನುಭವಿಸಿದೆ.
 • 2018ರ ಆಗಸ್ಟ್‌ಗೆ ಹೋಲಿಸಿದರೆ ಈ ವರ್ಷ ಕಲ್ಲಿದ್ದಲು ಉತ್ಪಾದನೆಯು ಶೇ.6 ಮತ್ತು ಕಚ್ಚಾ ತೈಲ ಉತ್ಪಾದನೆಯು ಶೇ.5.4 ರಷ್ಟು ಕುಸಿದಿದೆ. ನೈಸರ್ಗಿಕ ಅನಿಲ ಉತ್ಪಾದನೆಯು ಶೇಕಡಾ 3.9 ರಷ್ಟು ಕುಸಿದಿದ್ದರೆ, ಪೆಟ್ರೋಲಿಯಂ ಸಂಸ್ಕರಣಾಗಾರ ಉತ್ಪಾದನೆಯು ಆಗಸ್ಟ್ 2018 ಕ್ಕೆ ಹೋಲಿಸಿದರೆ ಶೇಕಡಾ 2.6 ರಷ್ಟು ಹೆಚ್ಚಾಗಿದೆ.  ರಸಗೊಬ್ಬರಗಳ ಉತ್ಪಾದನೆಯು ಶೇಕಡಾ 2.9 ರಷ್ಟು ಮತ್ತು ಉಕ್ಕಿನ ಉತ್ಪಾದನೆಯು ಶೇ.5.0 ರಷ್ಟು ಹೆಚ್ಚಾಗಿದೆ.

ಎಂಟು ಕೋರ್ ಕೈಗಾರಿಕೆಗಳ ಸೂಚ್ಯಂಕದ ಬಗ್ಗೆ

 • ಇದು ಎಂಟು ಕೋರ್ ಕೈಗಾರಿಕೆಗಳ ಸೂಚ್ಯಂಕ, ಉತ್ಪಾದನೆ ಮತ್ತು ಬೆಳವಣಿಗೆಯನ್ನು ಒಳಗೊಂಡಿದೆ.
 • ಎಂಟು ಕೋರ್ ಕೈಗಾರಿಕೆಗಳು ವಿದ್ಯುತ್, ಉಕ್ಕು, ಸಂಸ್ಕರಣಾಗಾರ ಉತ್ಪನ್ನಗಳು, ಕಚ್ಚಾ ತೈಲ, ಕಲ್ಲಿದ್ದಲು, ಸಿಮೆಂಟ್, ನೈಸರ್ಗಿಕ ಅನಿಲ ಮತ್ತು ರಸಗೊಬ್ಬರಗಳು.
 • ಎಂಟು ಕೋರ್ ಕೈಗಾರಿಕೆಗಳ ಸೂಚ್ಯಂಕವು ಮಾಸಿಕ ಉತ್ಪಾದನಾ ಸೂಚ್ಯಂಕವಾಗಿದೆ, ಇದನ್ನು ಮಾಸಿಕ ಕೈಗಾರಿಕಾ ಕಾರ್ಯಕ್ಷಮತೆಯ ಪ್ರಮುಖ ಸೂಚಕವಾಗಿಯೂ ಪರಿಗಣಿಸಲಾಗುತ್ತದೆ. ಮೂಲ ಏಜೆನ್ಸಿಗಳಿಂದ ಪಡೆದ ಮಾಸಿಕ ಉತ್ಪಾದನಾ ಮಾಹಿತಿಯ ಆಧಾರದ ಮೇಲೆ ಎಂಟು ಕೋರ್ ಕೈಗಾರಿಕೆಗಳ ಸೂಚ್ಯಂಕವನ್ನು ಸಂಗ್ರಹಿಸಲಾಗಿದೆ.

ವಿಶೇಷ ಅಂಚೆ ಚೀಟಿ

ಸುದ್ಧಿಯಲ್ಲಿ ಏಕಿದೆ ?

ಮಹಾತ್ಮ ಗಾಂಧಿಯವರ 150ನೇ ಜನ್ಮದಿನ ನಿಮಿತ್ತ ಪ್ಯಾಲೆಸ್ಟೈನ್ ಸರ್ಕಾರ ವಿಶೇಷ ಅಂಚೇ ಚೀಟಿ ಬಿಡುಗಡೆ ಮಾಡುವ ಮೂಲಕ ಭಾರತದ ರಾಷ್ಟ್ರಪಿತ ಗಾಂಧಿಗೆ ಗೌರವ ಸಮರ್ಪಣೆ ಮಾಡಿದೆ.

 • ಪ್ಯಾಲೆಸ್ಟ್ಮೈನ್ ಸರ್ಕಾರ ಗಾಂಧೀಜಿಯವರ ಪರಂಪರೆ ಹಾಗೂ ಮೌಲ್ಯಗಳನ್ನು ಗೌರವಿಸುವ ಸಲುವಾಗಿ ಪ್ಯಾಲೆಸ್ಟೈನ್ ಅಂಚೆ ಚೀಟಿ ಬಿಡುಗಡೆ ಮಾಡಿದೆ.
 • ಮಹಾತ್ಮ ಗಾಂಧಿಯವರ 150ನೇ ಜನ್ಮದಿನೋತ್ಸವ ಯಶಸ್ವಿಗೊಳಿಸಲು ಭಾರತ ಸರ್ಕಾರ ಒಂದು ವರ್ಷದಿಂದ ರಮಲ್ಲಾ ಸೇರಿದಂತೆ ವಿವಿಧ ನಗರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಅಪಾರ ಪ್ರಮಾಣದಲ್ಲಿ ಪ್ಯಾಲೆಸ್ಟೈನ್ ಯುವಕರು ಈ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

ಸುಳ್ಳು ಸುದ್ದಿ ಪ್ರಸಾರ ನಿಯಂತ್ರಣ

ಸುದ್ಧಿಯಲ್ಲಿ ಏಕಿದೆ ?

ಅಂತರ್ಜಾಲದ ಮೂಲಕ ಸುಳ್ಳು ಸುದ್ದಿ ಪ್ರಸಾರ ಮಾಡುವವರ ಮೇಲೆ ಕ್ರಮ ಕೈಗೊಳ್ಳುವ ಕುರಿತಂತೆ ಭಾರತ ಸೇರಿ 20 ದೇಶಗಳು ವಿಶ್ವಸಂಸ್ಥೆಯೊಂದಿಗೆ ಸಹಿ ಹಾಕಿವೆ.

 • ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನದ ಹಿನ್ನೆಲೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಆನ್‌ಲೈನ್ ಮೂಲಕ ಸುಳ್ಳು ಸುದ್ದಿ ರವಾನಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಫ್ರಾನ್ಸ್, ಬ್ರಿಟನ್ ಮತ್ತು ಭಾರತ ಸೇರಿದಂತೆ 20 ದೇಶಗಳು ಒಡಂಬಡಿಕೆಗೆ ಅಂಕಿತ ಹಾಕಿವೆ.
 • ದಕ್ಷಿಣ ಆಫ್ರಿಕಾ, ಕೆನಡಾ ಸೇರಿದಂತೆ ಹಲವು ಪ್ರಮುಖ ದೇಶಗಳು ಸಹ ಇಂತಹ ಸುದ್ದಿಯ ನಿರ್ಬಂಧಕ್ಕೆ ಈಗಾಗಲೇ ಕಾನೂನು ಜಾರಿ ಮಾಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಕಲಿ ಸುದ್ದಿಗಳನ್ನು ನಿರ್ಬಂಧಿಸುವ ತಂತ್ರಕ್ಕೆ ಸಹಮತ ವ್ಯಕ್ತಪಡಿಸಿವೆ.
 • ಮಾಧ್ಯಮ ಕಣ್ಗಾವಲು ಸಂಸ್ಥೆ ರಿಪೋರ್ಟರ್ಸ್ ಬಿಯಾಂಡ್ ದಿ ಬಾರ್ಡರ್ಸ್ – ಆರ್.ಬಿ.ಎಫ್ ಮುಕ್ತ ಮಾಧ್ಯಮ ಸ್ವಾತಂತ್ರ್ಯ ಸಂಸ್ಥೆಯ ಸಹಯೋಗದಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಒಪ್ಪಂದದಲ್ಲಿ ಏನಿದೆ ?

 • ಸುಳ್ಳು ಸುದ್ದಿ ಪ್ರಸಾರ ಮಾಡಲು ಇಂಟರ್ ನೆಟ್ ಒದಗಿಸುವ ಸೇವಾದಾತರನ್ನೂ ಸಹ ಜವಾಬ್ದಾರರನ್ನಾಗಿ ಮಾಡಲು ಈ ಒಪ್ಪಂದದಲ್ಲಿ ಅವಕಾಶ ಕಲ್ಪಿಸಲಾಗಿದೆ.
 • ಅದರಲ್ಲೂ ಪ್ರಮುಖವಾಗಿ ಚುನಾವಣೆ ಸಂದರ್ಭಗಳಲ್ಲಿ ಸುಳ್ಳು ಸುದ್ದಿ ಹರಡುವ, ಪ್ರಜಾತಂತ್ರ ಮೌಲ್ಯಗಳಿಗೆ ಧಕ್ಕೆ ತರುವ ಸುಳ್ಳು ಸುದ್ದಿಗಳ ಮೇಲೆ ನಿಗಾ ಇಟ್ಟು ನಿರ್ಬಂಧಿಸುವ ಅಂಶಗಳು ಈ ಒಪ್ಪಂದಲ್ಲಿವೆ.