You cannot copy content of this page
+91 94482 26377
Koramangala, Bengaluru

Current-affairs 29th september

30 Sep 2019

Current Affairs – 29th September

 ‘ಗ್ಲೋಬಲ್‌ ಕ್ಲೈಮೆಟ್‌ ಆಕ್ಷ್ಯನ್‌’ ಪ್ರಶಸ್ತಿ ಇನ್ಫೋಸಿಸ್‌ಗೆ 

ಸುದ್ಧಿಯಲ್ಲಿ ಏಕಿದೆ ? 

‘ಗ್ಲೋಬಲ್‌ ಕ್ಲೈಮೇಟ್‌ ಆಕ್ಷ್ಯನ್‌’ ಪ್ರಶಸ್ತಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಗ್ರ ಸಂಸ್ಥೆಯಾದ ‘ಇನ್ಫೋಸಿಸ್‌’ಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ  ಲಭಿಸಿದೆ.

 • ‘ಕ್ಲೈಮೆಟ್‌ ನ್ಯೂಟ್ರಲ್‌ ನೌ‘ ವಿಭಾಗದಲ್ಲಿ ಹವಾಮಾನ ಬದಲಾವಣೆ ವಿರುದ್ಧದ ಹೋರಾಟದ ಪ್ರಯತ್ನಗಳನ್ನು ಮಾಡುತ್ತಿರುವ ಭಾರತದ ಏಕೈಕ ಕಾರ್ಪೊರೇಟ್‌ ಸಂಸ್ಥೆಯಾಗಿ ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಚಿಲಿ ದೇಶದ ಸ್ಯಾಂಟಿಯಾಗೋದಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಹಿನ್ನಲೆ

 • ಇನ್ಫೋಸಿಸ್‌ ಸಂಸ್ಥೆಯು 2008ರಲ್ಲಿಇಂಗಾಲದ ಪ್ರಮಾಣ ಮೌಲ್ಯಮಾಪನದೊಂದಿಗೆ ಹವಾಮಾನ ಬದಲಾವಣೆ ವಿರುದ್ಧ ಹೋರಾಟ ಆರಂಭಿಸಿತ್ತು. ಸಂಸ್ಥೆಯ ಆವರಣದಲ್ಲಿಇಂಗಾಲ ತಟಸ್ಥತೆಯನ್ನು ಕಾಯ್ದುಕೊಳ್ಳುವ ಬದ್ಧತೆಯನ್ನು 2011ರಲ್ಲಿವಿಶ್ವಸಂಸ್ಥೆಗೆ ತಿಳಿಸಿತ್ತು. ಅಂದಿನಿಂದ ಇಂಧನ ದಕ್ಷತೆ, ನವೀಕರಿಸಬಹುದಾದ ಇಂಧನ ಮತ್ತು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದಿದೆ. ಅಲ್ಲದೆ, 2018ರ ಅಕ್ಟೋಬರ್‌ನಲ್ಲಿಆಯೋಜಿಸಿದ್ದ ‘ಈಗ ಹವಾಮಾನ ತಟಸ್ಥ’ ಎಂಬ ವೇದಿಕೆಯಲ್ಲಿಸಂಸ್ಥೆಯು ಕಡಿಮೆ ಇಂಗಾಲ ಆರ್ಥಿಕತೆಯತ್ತ ಸಾಗುವ ಬದ್ಧತೆಯನ್ನು ಘೋಷಣೆ ಮಾಡಿತ್ತು.

  ದಕ್ಷಿಣದ ಚಿರಾಪುಂಜಿ

  ಸುದ್ಧಿಯಲ್ಲಿ ಏಕಿದೆ ?

  ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಅಮಗಾಂವ್ ಗ್ರಾಮ ದಕ್ಷಿಣದ ಚಿರಾಪುಂಜಿ ಎಂದು ಖ್ಯಾತಿ ಗಳಿಸಿರುವ ಆಗುಂಬೆ ಜೊತೆ ಸ್ಪರ್ಧೆಯೊಡ್ಡುತ್ತಿದೆ.

  • ಈ ವರ್ಷ ಆಗಸ್ಟ್ ತಿಂಗಳ ಅಂತ್ಯದವರೆಗೆ 7 ಸಾವಿರದ 833 ಮಿಲಿ ಮೀಟರ್ ನಷ್ಟು ಮಳೆಯಾಗಿದೆ.
  •  2006ರಿಂದ ಅಮಗಾಂವ್ ಮಳೆ ಮಾಪನ ಕೇಂದ್ರದಲ್ಲಿ ಎರಡು ಬಾರಿ ಸರಾಸರಿ 10 ಸಾವಿರ ಮಿಲಿ ಮೀಟರ್ ಮಳೆ ಸುರಿದಿದೆ. 

  ಅಮಗಾಂವ್ ಬಗ್ಗೆ

  • ಅಮಗಾಂವ್ ಗ್ರಾಮ ಪಶ್ಚಿಮ ಘಟ್ಟದ ದಟ್ಟ ಅರಣ್ಯದ ನಡುವೆಯಿದ್ದು ಬೆಳಗಾವಿಯಿಂದ 31 ಕಿಲೋ ಮೀಟರ್ ದೂರದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಆಗುಂಬೆ ಮತ್ತು ಹುಳಿಕಲ್ ನಂತರ ಕರ್ನಾಟಕದ ಮೂರನೇ ಅತ್ಯಂತ ತೇವ ಪ್ರದೇಶವೆನಿಸಿಕೊಂಡಿದೆ.
  • 2010ರಲ್ಲಿ ಅಮಗಾಂವ್ ಗ್ರಾಮದಲ್ಲಿ 10 ಸಾವಿರದ 68 ಮಿಲಿ ಮೀಟರ್, 2011ರಲ್ಲಿ 9 ಸಾವಿರದ 368 ಮಿಲಿ ಮೀಟರ್ ನಷ್ಟು ಮಳೆಯಾಗಿತ್ತು. ಆ ವರ್ಷ ಆಗುಂಬೆ ಮತ್ತು ಹುಳಿಕಲ್ ಮಳೆ ಮಾಪನ ಕೇಂದ್ರಗಳಲ್ಲಿ 6 ಸಾವಿರದಿಂದ 7 ಸಾವಿರ ಮಿಲಿ ಮೀಟರ್ ಮಳೆ ದಾಖಲಾಗಿದೆ. ಕಳೆದ 10 ವರ್ಷಗಳಲ್ಲಿ ಅಮಗಾಂವ್ ಆಗುಂಬೆಯ ದಾಖಲೆಯನ್ನು ಎರಡು ಬಾರಿ ಮುರಿದಿದೆ. ಈ ವರ್ಷ ಈಗಾಗಲೇ ಅಮಗಾಂವ್ ನಲ್ಲಿ 7ಸಾವಿರದ 833 ಮಿಲಿ ಮೀಟರ್ ಮಳೆಯಾಗಿದೆ.

ಕರ್ನಾಟಕ ಆನೆ ಸಂಘರ್ಷ ಕಾರ್ಯಾಚರಣೆಯಲ್ಲಿ ಬೆಸ್ಟ್

ಸುದ್ಧಿಯಲ್ಲಿ ಏಕಿದೆ ?  ಕರ್ನಾಟಕ  ಆನೆಗಳ ಸಂತತಿಗೆ ಮಾತ್ರವಲ್ಲದೆ ಆನೆಗಳ ಸಂಘರ್ಷ ಹತ್ತಿಕ್ಕುವಲ್ಲಿ ಕೂಡ ಮೊದಲ ಸ್ಥಾನದಲ್ಲಿದೆ. ಅನುಭವಿ ಸಿಬ್ಬಂದಿ, ಪಶುವೈದ್ಯರು, ಮಾವುತ ಮತ್ತು ಕಾವಾಡಿಗಳ ಪರಿಣತಿಯಿಂದಾಗಿ ಇದು ಸಾಧ್ಯವಾಗಿದೆ.

 • ದೇಶದಲ್ಲಿಯೇ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಕರ್ನಾಟಕ ರಾಜ್ಯದಲ್ಲಿ ಆನೆಗಳ ಸಂಘರ್ಷಗಳನ್ನು ತಗ್ಗಿಸುವ ಕ್ರಮ ಉತ್ತಮವಾಗಿದೆ ಎಂದು ಹೇಳಿದೆ.ಕೇಂದ್ರ ಪರಿಸರ ಇಲಾಖೆ ಮಾನವ-ಆನೆ ಸಂಘರ್ಷವನ್ನು ಎದುರಿಸುವ ಕುರಿತು ರಾಷ್ಟ್ರೀಯ ಪ್ರಾಣಿ ಯೋಜನೆ ಅಖಿಲ ಭಾರತ ಮನುಷ್ಯ-ಪ್ರಾಣಿ ಸಂಘರ್ಷ ಕೈಪಿಡಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.
 • 1965ರ ನಂತರ ಉತ್ತರ ಪ್ರದೇಶದಲ್ಲಿ ಕಬ್ಬಿನ ಗದ್ದೆಗೆ ಆನೆಗಳು ನುಗ್ಗಿದ್ದವು ಎಂದರು.
 •  ಕರ್ನಾಟಕದ ಮಾದರಿಯನ್ನು ಅಳವಡಿಸಿ ಉತ್ತರ ಪ್ರದೇಶದಲ್ಲಿ 20 ದಿನಗಳಲ್ಲಿ 6 ಮಂದಿಯನ್ನು ಕೊಂದು ಹಾಕಿದ ಎರಡು ಆನೆಗಳನ್ನು ಕಾಡಿಗೆ ಓಡಿಸುವಲ್ಲಿ ಯಶಸ್ಸು ಕಂಡಿದ್ದರು.

 ಕರ್ನಾಟಕ ಅಳವಡಿಸಿಕೊಂಡಿರುವ ವಿಧಾನ

 • ಕರ್ನಾಟಕದ್ಲಲಿ  ಹಿಂಡಿನ ಸ್ಥಳ ಮತ್ತು ಗಾತ್ರವನ್ನು ಅವಲಂಬಿಸಿ ವಿಧಾನವು ಬದಲಾಗುತ್ತದೆ  ಯಾವುದೇ ಒಂದು ಮಾರ್ಗ ಅಳವಡಿಸಿಕೊಳ್ಳುವುದಿಲ್ಲ . ರಾಜ್ಯ ಆದಾಗ್ಯೂ, ತರಬೇತಿ ಪಡೆದ ಆನೆಗಳನ್ನು ಬಳಸುವ ಸಾಮರ್ಥ್ಯ ಮತ್ತು ಕಾಡು ಆನೆಗಳನ್ನು ರಕ್ಷಿಸುವ ಸಾಮರ್ಥ್ಯವು, ಅದರ ಸಂಪೂರ್ಣ ಅನುಭವ ಕ್ಕೆ ತಿಳಿದಿದೆ  .

ಕರ್ನಾಟಕ ಪ್ರವಾಸೋದ್ಯಮ ಹೂಡಿಕೆ ಸಮಾವೇಶ ; 2020ರಲ್ಲಿ

ಸುದ್ಧಿಯಲ್ಲಿ ಏಕಿದೆ ? 

ಪ್ರವಾಸೋಧ್ಯಮ ಸಚಿವ ಸಿಟಿ ರವಿ 2020ರ ವೇಳೆಗೆ ಕರ್ನಾಟಕದಲ್ಲಿ ಪ್ರವಾಸೋಧ್ಯಮ ಹೂಡಿಕೆ ಸಮಾವೇಶ ನಡೆಸುವುದಾಗಿ ಹೇಳಿದ್ದಾರೆ.

ಉದ್ದೇಶ

 • ವಿಶಿಷ್ಟ ಯೋಜನೆಗಳನ್ನು  ಪ್ರವಾಸೋಧ್ಯಮದ ಅಭಿವೃದ್ಧಿ ಮತ್ತು ಅಲ್ಲಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ರೂಪಿಸಲಾಗುತ್ತಿದ್ದು, ಇದರಿಂದ ಉದ್ಯೋಗ ಸೃಷ್ಟಿಯಾಗಿ ಯುವಕರಿಗೆ ಅನುಕೂಲವಾಗಲಿದೆ. ಅಲ್ಲದೆ ರಾಜ್ಯದಲ್ಲಿರುವ ವಿಶ್ವ ದರ್ಜೆಯ ಪ್ರವಾಸಿ ತಾಣಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಕಾರ್ಯಪ್ರವೃತ್ತರಾಗಿದ್ದೇವೆ.
 • 2020ಕ್ಕೆ ಕರ್ನಾಟಕದಲ್ಲಿ ಪ್ರವಾಸೋಧ್ಯಮ ಹೂಡಿಕೆ ಸಮಾವೇಶ ನಡೆಸಲು ಪ್ರವಾಸೋಧ್ಯಮದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶದಿಂದ ಚಿಂತನೆ ನಡೆಸಲಾಗಿದೆ. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಉದ್ದೇಶದಿಂದಲೇ ನೂತನ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಲಾಗುವುದು.
 • ರಾಜ್ಯವನ್ನು ಜಗತ್ತಿನ ಆಕರ್ಷಕ ಪ್ರವಾಸೋದ್ಯಮ ಕೇಂದ್ರವನ್ನಾಗಿಸುವ ಉದ್ದೇಶದಿಂದ ಕೆಲವು ಪ್ರವಾಸಿ ಕ್ಷೇತ್ರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ, ಕೆಲವು ಕ್ಷೇತ್ರಗಳನ್ನು ಸ್ವಯಂ ಸೇವಾ ಸಂಘಗಳ ಸಹಕಾರದಲ್ಲಿ (PPP-public private partnership) ಹಾಗೂ ಕೆಲವು ಪ್ರವಾಸಿ ತಾಣಗಳನ್ನು ಸರ್ಕಾರಿ ಅನುದಾನ ಬಳಸಿ ಅಭಿವೃದ್ಧಿಪಡಿಸಲಾಗುವುದು.

ವಿಶ್ವ ಪ್ರವಾಸೋದ್ಯಮ ದಿನದ ಬಗ್ಗೆ

 • ಅಂತರರಾಷ್ಟ್ರೀಯ ಸಮುದಾಯದೊಳಗೆ ಪ್ರವಾಸೋದ್ಯಮದ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಇದು ವಿಶ್ವಾದ್ಯಂತ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪ್ರದರ್ಶಿಸುವುದು ಈ ದಿನದ ಉದ್ದೇಶವಾಗಿದೆ.
 • 2017 ರಲ್ಲಿ ದಿನದ ವಿಷಯವು “ಸುಸ್ಥಿರ ಪ್ರವಾಸೋದ್ಯಮ”, . 2018 ರಲ್ಲಿ ಥೀಮ್ “ಪ್ರವಾಸೋದ್ಯಮ ಮತ್ತು ಡಿಜಿಟಲ್ ಪರಿವರ್ತನೆ” ಮತ್ತು 2019 ರಲ್ಲಿ “ಪ್ರವಾಸೋದ್ಯಮ, ವಿಶ್ವದ ಪ್ರಮುಖ ವಲಯ” ಎಂಬ ವಿಷಯವಾಗಿತ್ತು.
 • 1980 ರಿಂದ, ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಅಂತರರಾಷ್ಟ್ರೀಯ ಆಚರಣೆಯಾಗಿ ಆಚರಿಸಿದೆ. ಈ ದಿನಾಂಕವನ್ನು 1970 ರಲ್ಲಿ 27 ಸೆಪ್ಟೆಂಬರ್ ಅಂದು  ಯುಎನ್‌ಡಬ್ಲ್ಯೂಟಿಒ ಶಾಸನಗಳನ್ನು ಅಂಗೀಕರಿಸಲಾಯಿತು . ಈ ಕಾನೂನುಗಳನ್ನು ಅಳವಡಿಸಿಕೊಳ್ಳುವುದು ಜಾಗತಿಕ ಪ್ರವಾಸೋದ್ಯಮದಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.

 ಸ್ಮಾರಕವಾಗಿ ವಿದ್ಯಾಸಾಗರ್ ಮನೆಯನ್ನು ಬದಲಾಯಿಸಲು ಯೋಜನೆ

ಸುದ್ಧಿಯಲ್ಲಿ ಏಕಿದೆ ?

19ನೇ ಶತಮಾನದ ಸಮಾಜ ಸುಧಾರಕ ಈಶ್ವರ್ ಚಂದ್ರ ವಿದ್ಯಾಸಾಗರ್ ನೆಲೆಸಿದ್ದ ಉತ್ತರ ಕೊಲ್ಕತ್ತಾದಲ್ಲಿನ ನಿವಾಸವನ್ನು ಸ್ಮಾರಕವನ್ನಾಗಿಸಲು  ಪಶ್ಚಿಮ ಬಂಗಾಳ ಸರ್ಕಾರ ಯೋಜನೆ ಹಾಕಿಕೊಂಡಿದೆ

 • ವಿದ್ಯಾಸಾಗರ್ ನಿವಾಸ ಬಾದುರ್ ಬಾಗನ್ ನ್ನು ಸ್ಮಾರಕವನ್ನಾಗಿ ನಿರ್ಮಾಣ ಮಾಡಲಾಗುವುದು, ಅಲ್ಲಿ ವಿದ್ಯಾಸಾಗರ್ ಅವರ ಭಾವಚಿತ್ರಗಳು, ಮಾದರಿಗಳನ್ನು ಇಡಲಾಗುವುದು.ವಿದ್ಯಾಸಾಗರ್ ಮನೆಯಲ್ಲಿ ಬಳಸಲಾಗುತ್ತಿದ್ದ ದಿನಬಳಕೆಯ ವಸ್ತುಗಳನ್ನು ಸ್ಮಾರಕಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುವುದು.

ಈಶ್ವರ ಚಂದ್ರ ವಿದ್ಯಾಸಾಗರ ಬಗ್ಗೆ

 • ಮಹಾನ್ ವಿದ್ವಾಂಸರಾಗಿದ್ದ ಈಶ್ವರಚಂದ್ರರು ಅಷ್ಟೇ ಮಹಾನ್ ದೇಶಪ್ರೇಮಿಯಾಗಿದ್ದರು.ಬಂಗಾಳದ ಲೇಖಕ, ಸಮಾಜ ಸುಧಾರಕ. ಮಿಡ್ನಾಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಇವರ ಜನನ. 19ನೆಯ ವಯಸ್ಸಿನಲ್ಲಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ವಿದ್ಯಾಸಾಗರರೆಂಬ ಪ್ರಶಸ್ತಿ ಗಳಿಸಿದರು. ಮೂವತ್ತನೆಯ ವಯಸ್ಸಿನಲ್ಲಿ ಫೋರ್ಟ್ ವಿಲಿಯಂ ಕಾಲೇಜಿನ ಮುಖ್ಯ ಪಂಡಿತರಾದರು. ಇವರು ಇಂಗ್ಲೀಷ್ ಭಾಷೆಯನ್ನೂ ಕಲಿತಿದ್ದರು.
 • ಭಾರತೀಯ ಮಹಿಳೆಯರ ಉದ್ಧಾರಕ್ಕಾಗಿ ಈಶ್ವರಚಂದ್ರರು ಕೈಗೊಂಡ ಕಾರ್ಯಕ್ರಮಗಳು ಅವರನ್ನು ಚಿರಸ್ಮರಣೀಯರನ್ನಾಗಿ ಮಾಡಿವೆ. ಸ್ತ್ರೀ ವಿದ್ಯಾಭ್ಯಾಸಕ್ಕಾಗಿ ಚಳುವಳಿ ನಡೆಸುತ್ತಿದ್ದ ಡ್ರಿಂಕ್ ವಾಟರ್ ಬೆಥೂನ್ ಎಂಬುವರೊಂದಿಗೆ ವಿದ್ಯಾಸಾಗರರೂ ಸೇರಿದ್ದರು. ಬೆಥೂನರ ಹೆಸರಿನಲ್ಲಿ ನಡೆಯುತ್ತಿದ್ದ ಬಾಲಿಕಾಶಾಲೆಯ ವ್ಯವಸ್ಥೆಯ ಹೊಣೆ 1851ರಲ್ಲಿ ಇವರ ಮೇಲೆ ಬಿತ್ತು.
 • ರೊಸೊಮೊಯ್‍ದತ್ತರು ಕಲ್ಕತ್ತೆಯ ಸಂಸ್ಕøತ ಮಹಾಪಾಠಶಾಲೆಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆಯಿತ್ತಾಗ ಪ್ರಿನ್ಸಿಪಾಲರ ಹುದ್ದೆಯೊಂದು ನಿರ್ಮಿತವಾಗಿ, ಅದಕ್ಕೆ ವಿದ್ಯಾಸಾಗರರ ನೇಮಕವಾಯಿತು. 1854ರ ಕಾಯಿದೆಯನ್ವಯ ಇವರು ಬಂಗಾಳದಲ್ಲಿ ಖಾಸಗಿ ಶಾಲೆಗಳನ್ನು ಸ್ಥಾಪಿಸಿದರು.

ಭಗತ್ ಸಿಂಗ್ : ಕ್ರಾಂತಿಕಾರಿ 

ಸುದ್ಧಿಯಲ್ಲಿ ಏಕಿದೆ ?

ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ೧೧೨ ನೇ ಜನ್ಮದಿನ

 • ಸೆಪ್ಟಂಬರ್ 27, 1907ರಂದು ಲಾಯಲ್ಪುರ್ ಜಿಲ್ಲೆಯ ಜರಾನ್ ವಾಲಾ ತಾಲೂಕಿನಲ್ಲಿರುವ ಬಂಗಾ ಹಳ್ಳಿಯಲ್ಲಿ (ಈಗ ಪಾಕಿಸ್ತಾನದಲ್ಲಿದೆ) ಭಗತ್ ಸಿಂಗ್ ರವರ ಜನನವಾಯಿತು. ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದ ಸಿಂಗ್ ಯುವ ಜನತೆಗೆ ಇಂದಿಗೂ ಕೂಡ ಪ್ರೇರಣೆಯಾಗಿದ್ದಾರೆ. ಇವರ ತಾಯಿ ವಿದ್ಯಾವತಿ, ತಂದೆ ಕಿಶನ್ ಸಿಂಗ್ ಜೀವ ವಿಮಾ ಕಂಪನಿಯಲ್ಲಿ ಏಜೆಂಟರಾಗಿ ಕೆಲಸ ಮಾಡುತ್ತಿದ್ದರು.
 • ಕ್ರಾಂತಿ ಎಂದರೆ ಅದರಲ್ಲಿ ರಕ್ತಮಯ ಕಲಹ ಇರಬೇಕು ಎಂದೇನೂ ಇಲ್ಲ. ಹಾಗೆಯೇ ವೈಯುಕ್ತಿಕ ದ್ವೇಷಕ್ಕೂ ಇದರಲ್ಲಿ ಅವಕಾಶ ಇಲ್ಲ. ಅದು ಬಾಂಬ್ ಮತ್ತು ಪಿಸ್ತೂಲುಗಳ ಸಂಸ್ಕೃತಿ ಅಲ್ಲ. ನಮ್ಮ ಪ್ರಕಾರ ಕ್ರಾಂತಿ ಎಂದರೆ ಎದ್ದು ಕಾಣುವ ಅನ್ಯಾಯದಿಂದ ಕೂಡಿದ ಈಗಿನ ವ್ಯವಸ್ಥೆ ಬದಲಾಗಬೇಕು” ಎಂಬುದು ಭಗತ್ ಸಿಂಗ್ ಅವರ ಮಾತುಗಳು.
 • ಇಂತಹ ಭಗತ್ ಸಿಂಗ್ ಅವರನ್ನು 1931ರ ಮಾರ್ಚ್ 23ರಂದು ಸಂಜೆ 7 ಗಂಟೆ 33 ನಿಮಿಷಗಳ ಸಮಯದಲ್ಲಿ ತನ್ನಿಬ್ಬರು ಸಂಗಾತಿಗಳಾದ ರಾಜಗುರು ಮತ್ತು ಸುಖದೇವ್ ರವರ ಜೊತೆ ಗಲ್ಲಿಗೇರಿಸಲಾಯ್ತು. ಈ ಧೀಮಂತ ನಾಯಕನಿಗೆ ಆಗ ಕೇವಲ 23 ವರ್ಷ!

ಭಗತ್ ಸಿಂಗ್ ಬಗೆಗಿನ ವಿಚಾರಗಳಿವು:

 • ಮಹಾತ್ಮಾ ಗಾಂಧಿಯವರ ಅಹಿಂಸಾವಾದದ ಬಗ್ಗೆ ಭಗತ್ ಸಿಂಗ್‌ಗೆ ಹೆಚ್ಚು ನಂಬಿ ಇಟ್ಟಿರಲಿಲ್ಲ. ಮದುವೆಯಾಗಲು ನಿರಾಕರಿಸಿದ ಅವರು ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು.
 • ದೆಹಲಿಯ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆದ ಅವರು ಬ್ರಿಟಿಷ್ ಪೊಲೀಸರಿಗೆ ಶರಣಾದರು. ಆದರೆ ಬಾಂಬ್ ಎಸೆತದಿಂದ ಯಾವುದೇ ಸಾವುನೋವು ಆಗಿರಲಿಲ್ಲ. ಬ್ರಿಟಿಷರ ಗಮನ ಸೆಳೆದು ಸತ್ಯ ಹುಡುಕುವುದೇ ಭಗತ್, ಮತ್ತು ಅವರ ಗೆಳೆಯರ ಉದ್ದೇಶವಾಗಿತ್ತು. ಹೀಗಾಗಿ, ರಿವಾಲ್ವಾರ್ ಎಸೆದು, ತಪ್ಪಿಸಿಕೊಳ್ಳುವ ಪ್ರಯತ್ನ ಕೂಡ ಮಾಡದೆ ‘ಇನ್ಕ್ವಿಲಾಬ್ ಜಿಂದಾಬಾದ್’ ಎಂದು ಕೂಗುತ್ತಲೇ ಸೆರೆಯಾದರು.
 • ಬಾಂಬ್ ಎಸೆದ ಬಳಿಕ “ಕಿವುಡರಿಗೆ ಕೇಳಿಸಬೇಕಾದರೆ ಸದ್ದು ಬಹಳ ಜೋರಾಗಿರಬೇಕು. ಬಾಂಬೆಸೆದಾಗ ಯಾರನ್ನಾದರೂ ಕೊಲ್ಲುವುದು ನಮ್ಮ ಆಶಯವಾಗಿರಲಿಲ್ಲ. ನಾವು ಬ್ರಿಟೀಷ್ ಸರಕಾರಕ್ಕೆ ಬಾಂಬ್ ಹಾಕಿದ್ದೆವು” ಎಂದು ಸಿಂಗ್ ಹೇಳಿದ್ದರು.
 • ಇನ್ಕ್ವಿಲಾಬ್ ಜಿಂದಾಬಾದ್ (ಕ್ರಾಂತಿ ಚಿರಾಯುವಾಗಲಿ) ಘೋಷಣೆ ಹುಟ್ಟು ಹಾಕಿದ್ದೇ ಭಗತ್ ಸಿಂಗ್. ಇದು ಅಂತಿಮವಾಗಿ ಭಾರತದ ಸಶಸ್ತ್ರ ಸ್ವಾತಂತ್ರ್ಯ ಹೋರಾಟದ ಘೋಷಣೆಯಾಗಿ ಮಾರ್ಪಟ್ಟಿತು.
 • ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಅನೌಪಚಾರಿಕವಾಗಿ ‘ಹುತಾತ್ಮ’ರು ಎಂದು ಕರೆಯಲಾಗುತ್ತದೆಯೇ ಹೊರತು, ಭಾರತ ಸರಕಾರದಿಂದ ಅಧಿಕೃತವಾಗಿ ಅವರಿಗೆ ‘ಹುತಾತ್ಮ‘ ಪಟ್ಟ ಸಿಕ್ಕಿಲ್ಲ. ಸುಖ್ ದೇವ್ ಕುಟುಂಬ ಈ ಮೂವರಿಗೂ ಹುತಾತ್ಮ ಪಟ್ಟ ನೀಡಬೇಕೆಂದು ಒತ್ತಾಯಿಸಿ ಹೋರಾಡುತ್ತಲೇ ಇದೆ.

ಬೆಕ್ಕಿನ ಹಾವು

ಸುದ್ಧಿಯಲ್ಲಿ ಏಕಿದೆ ?

ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಪತ್ತೆಯಾಗಿರುವ ಹೊಸ ಪ್ರಬೇಧದ ಹಾವೊಂದಕ್ಕೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರ ಕಿರಿಯ ಪುತ್ರ ತೇಜಸ್ ಠಾಕ್ರೆಯ ಹೆಸರನ್ನು ಸಂಶೋಧನೆಯ ನೆನಪಿನಾರ್ಥವಾಗಿ ಇಡಲಾಗಿದೆ.

 • ಬೋಯಿಗಾ ಪ್ರಬೇಧಕ್ಕೆ ಸೇರಿದ ಈ ಹಾವು ಕ್ಯಾಟ್ ಸ್ನೇಕ್ ವರ್ಗಕ್ಕೆ ಸೇರಿದ್ದಾಗಿದೆ. ಇದೀಗ ಈ ಹಾವಿಗೆ ಠಾಕ್ರೇಸ್ ಕ್ಯಾಟ್ ಸ್ನೇಕ್ ಎಂದು ಹೆಸರಿಡಲಾಗಿದೆ.
 • ಹೊಸ ಪ್ರಬೇಧದ ಹಾವಿನ ಸಂಶೋಧನಾ ವರದಿಯನ್ನು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
 • ಮೂಲತಃ ಈ ಹಾವುಗಳು ಕ್ಯಾಟ್ ಸ್ನೇಕ್ಸ್ ಜಾತಿಗೆ ಅಂದರೆ ಬೆಕ್ಕಿನ ಪ್ರಭೇದಕ್ಕೆ ಸೇರಿದ್ದಾಗಿದೆ. ಬೋಯಿಗಾ ಪ್ರಬೇಧಕ್ಕೆ ಸೇರಿದ ಈ ಹಾವುಗಳು ಭಾರತಾದಾದ್ಯಂತ ಹರಡಿಕೊಂಡಿದೆ. ಆದರೆ, ಕೆಲವೊಂದು ವಿಶೇಷ ಜಾತಿಯ ಹಾವುಗಳು ಮಾತ್ರ ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುತ್ತದೆ. ತೇಜಸ್ ಠಾಕ್ರೆ 2015ರಲ್ಲಿ ಮೊದಲ ಬಾರಿಗೆ ಈ ಹಾವನ್ನು ಪತ್ತೆ ಹಚ್ಚಿದ್ದರು. ಬಳಿಕ ಹಾವಿನ ವರ್ತನೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ, ಅದರ ವರದಿಯನ್ನು ಜೀವವೈವಿಧ್ಯ ಸಂರಕ್ಷಣಾ ಸಂಸ್ಥೆಯ ಮುಂದಿಟ್ಟಿದ್ದರು.

ಏಡಿಗಳ ಸಂಶೋಧನೆಯಿಂದ ಸುದ್ದಿಯಾಗಿದ್ದ ತೇಜಸ್ :

 • ವನ್ಯಜೀವಿ ಸಂಶೋಧನೆಯಲ್ಲಿ ಈ ಹಿಂದೆ ಕೂಡ ತೇಜಸ್ ಠಾಕ್ರೆ ಸುದ್ದಿಯಾಗಿದ್ದರು. 2018ರಲ್ಲಿ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಏಡಿಗಳ 11 ಅಪರೂಪದ ಪ್ರಭೇದಗಳನ್ನು ಮತ್ತು ತಾಜಾ ನೀರಿನ ಏಡಿಗಳ ಹೊಸ ಕುಲವನ್ನು ಕಂಡುಹಿಡಿದಿದ್ದರು.

 ಜಲಾಂತರ್ಗಾಮಿ ಐಎನ್‌ಎಸ್ ಖಂಡೇರಿ 

ಸುದ್ಧಿಯಲ್ಲಿ ಏಕಿದೆ ?

ದೇಶದ ಎರಡನೇ ಸ್ಕಾರ್ಪಿಯನ್‌ ಶ್ರೇಣಿಯ ಅತ್ಯಾಧುನಿಕ ‘ಐಎನ್‌ಎಸ್‌ ಖಂಡೇರಿ’ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆ ಮಾಡಲಾಗಿದೆ.

ಐಎನ್‌ಎಸ್‌ ಖಂಡೇರಿ ಬಗ್ಗೆ

 • ಐಎನ್‌ಎಸ್‌ ಖಂಡೇರಿ ಜಲಾಂತರ್ಗಾಮಿಯು ಯುದ್ಧ ನೌಕೆಗಳನ್ನು ಹೊಡೆದುರುಳಿಸಬಲ್ಲ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದ್ದು, ದೇಶದ ಅತ್ಯುತ್ತಮ ಮತ್ತು ಅತ್ಯಾಧುನಿಕ ಜಲಾಂತರ್ಗಾಮಿ ನೌಕೆಗಳಲ್ಲಿ ಒಂದಾಗಿದೆ. 350 ಮೀಟರ್ ಆಳದಲ್ಲಿ 50 ದಿನಗಳ ಕಾಲ ಗಸ್ತು ತಿರುಗುವ ಸಾಮರ್ಥ್ಯ ಹೊಂದಿರುವ ಈ ಅತ್ಯಾಧುನಿಕ ನೌಕೆಯು ತೇಲುವಾಗ 1,615 ಟನ್ ಮತ್ತು ಮುಳುಗಿದಾಗ 1,775 ಟನ್ ಸ್ಥಳಾಂತರಿಸುತ್ತದೆ.
 • 5 ಮೀಟರ್ ಉದ್ದದ ಐಎನ್‌ಎಸ್ ಖಂಡೇರಿ ನಾಲ್ಕು ಎಂಟಿಯು ಡೀಸೆಲ್ ಎಂಜಿನ್ ಮತ್ತು 12ವೋಲ್ಟ್ 360 ಬ್ಯಾಟರಿ ಸೆಲ್‌ಗಳಿಂದ ನಿಯಂತ್ರಿಸಲ್ಪಡುತ್ತದೆ. ದಾಳಿಯ ಜಲಾಂತರ್ಗಾಮಿ ನೌಕೆ 37 ಕಿಮೀ ಪ್ರತಿ ಗಂಟೆ ವೇಗದಲ್ಲಿ (20ನಾಟಿಕಲ್) ಸಾಗರದಡಿಯಲ್ಲಿ ಚಲಿಸಬಹುದಾಗಿದ್ದು, ಮೇಲ್ಮೈಯಲ್ಲಿ ಅದರ ವೇಗವು 20 ಕಿಮೀ ಪ್ರತಿ ಗಂಟೆ (11ನಾಟಿಕಲ್) ಇರಲಿದೆ.
 • ಸಾಮಾನ್ಯವಾಗಿ ಜಲಾಂತರ್ಗಾಮಿಗಳ ಶಬ್ಧಗಳ ಆಧಾರದ ಮೇಲೆ ಶುತ್ರುಪಾಳಯದ ನೌಕೆಗಳು ಅವುಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತವೆ. ಆದರೆ ಐಎನ್ಎಸ್ ಖಂಡೇರಿ ಶಬ್ದ ರಹಿತ ಜಲಾಂತರ್ಗಾಮಿ ನೌಕೆಯಾಗಿದೆ.
 • ಸಾಗರದಡಿಯಲ್ಲಿನ ದಾಳಿಗೆ ಪ್ರತಿದಾಳಿ, ಟೋರ್ಪಿಡೋ, ಅತ್ಯಾಧುನಿಕ ಸಂವಹನ ವ್ಯವಸ್ಥೆ ಹಾಗೂ ಶತ್ರುಪಡೆಗಳ ಸ್ಥಳವನ್ನು ನಿಖರವಾಗಿ ಕಂಡುಹಿಡಿಯುವ ಸಾಮರ್ಥ್ಯ ಐಎನ್‌ಎಸ್‌ ಖಂಡೇರಿ ಜಲಾಂತರ್ಗಾಮಿಯಲ್ಲಿದೆ.

ಹಿನ್ನಲೆ

 • ಫ್ರಾನ್ಸ್‌ ಜತೆಗೆ 2005ರಲ್ಲಿ ತಂತ್ರಜ್ಞಾನ ವರ್ಗಾವಣೆ ಒಪ್ಪಂದದಡಿ 6 ಸ್ಕಾರ್ಪೀನ್‌ ದರ್ಜೆಯ ಜಲಾಂತರ್ಗಾಮಿಗಳ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಖಂಡೇರಿ ಜಲಾಂತರ್ಗಾಮಿ ಕೂಡ ಒಂದು. ಮುಂಬೈನ ಮಡಗಾವ್ ಡಾಕ್ ಯಾರ್ಡ್ ನಲ್ಲಿ ಈ ಜಲಾಂತರ್ಗಾಮಿಯನ್ನು ನಿರ್ಮಿಸಲಾಗಿದೆ.
 • ಒಟ್ಟು 25,000 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 6 ಸ್ಕಾರ್ಪೀನ್‌ ದರ್ಜೆಯ ಜಲಾಂತರ್ಗಾಮಿ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆ ದೇಶದ ಮೊದಲ ಸ್ಕಾರ್ಪೀನ್ ದರ್ಜೆಯ ಐಎನ್‌ಎಸ್‌ ಕಲ್ವರಿ 2017ರಲ್ಲಿ ನೌಕಾಪಡೆ ಸೇರಿತ್ತು.

ಐಎನ್ಎಸ್ ನೀಲಗಿರಿ

ಸುದ್ಧಿಯಲ್ಲಿ ಏಕಿದೆ ? ಯುದ್ಧ ನೌಕೆ ಐಎನ್ಎಸ್ ನೀಲಗಿರಿಯನ್ನು ಕೂಡ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದೆ.

 • ಮುಂಬೈನ ಮಡಗಾಂವ್ ಡಾಕ್ ಯಾರ್ಡ್ ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಐಎನ್ಎಸ್ ನೀಲಗಿರಿಯನ್ನು ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಳಿಸಿದರು.

ಐಎನ್ಎಸ್ ನೀಲಗಿರಿ ವಿಶೇಷತೆ

 • ಬ್ರಿಟನ್‌ ನ ‘ಲಿಯಾಂಡರ್’ ಸರಣಿಯ ಯುದ್ಧನೌಕೆಗಳ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಎರವಲು ಪಡೆದು, ಭಾರತದಲ್ಲೇ ನಿರ್ಮಿಸಿದ ಮೊದಲ ಯುದ್ಧನೌಕೆ ಇದಾಗಿದ್ದು, ಈ ಹಿಂದೆ ಈ ಸರಣಿಯಲ್ಲಿ ಒಟ್ಟು ಆರು ಯುದ್ಧನೌಕೆಗಳನ್ನು ನಿರ್ಮಿಸಲಾಗಿತ್ತು. ಅವೆಲ್ಲವೂ ಈಗ ಸೇವೆಯಿಂದ ನಿವೃತ್ತವಾಗಿವೆ. ಅವೇ ಹೆಸರಿನಲ್ಲಿ ಈಗ ಹೊಸದಾಗಿ ಏಳು ಯುದ್ಧನೌಕೆಗಳನ್ನು ಭಾರತದಲ್ಲಿ ನಿರ್ಮಿಸಲಾಗುತ್ತಿದ್ದು, ಅದರಲ್ಲಿ ಐಎನ್‌ಎಸ್‌ ನೀಲಗಿರಿ ಮೊದಲನೆಯದ್ದು.
 • ಇನ್ನು ಐಎನ್ಎಸ್ ನೀಲಗಿರಿ ಯುದ್ಧ ನೌಕೆಯು 4 ಎಂಜಿನ್‌ಗಳನ್ನು ಹೊಂದಿದ್ದು, 28 ನಾಟಿಕಲ್ ಮೈಲಿ (ಸುಮಾರು 52 ಕಿ.ಮೀ.) ಗರಿಷ್ಠ ವೇಗ ಹೊಂದಿದೆ. ಇನ್ನು ಈ ಬೃಹತ್ ನೌಕೆಯ ಇಂಧನ ಟ್ಯಾಂಕ್ ಅನ್ನು ಒಮ್ಮೆ ಭರ್ತಿ ಮಾಡಿದರೆ, ಬರೊಬ್ಬರಿ 5,500 ನಾಟಿಕಲ್ ಮೈಲಿ (10,186 ಕಿ.ಮೀ.) ವರೆಗೂ ಚಲಿಸಬಹುದು. ಇನ್ನು ಈ ಯುದ್ಧ ನೌಕೆಗೆ ನೌಕೆಯಿಂದ ಆಗಸಕ್ಕೆ ಉಡಾಯಿಸಬಹುದಾದ ಬರಾಕ್ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದಲ್ಲದೇ ನೌಕೆಯಿಂದ ನೌಕೆಗೆ–ನೆಲದ ಮೇಲಿನ ಗುರಿಯತ್ತ ಉಡಾಯಿಸಬಹುದಾದ ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯ ಬಲವೂ ಕೂಡ ಐಎನ್ಎಸ್ ನೀಲಗಿರಿಗಿದೆ.
 • ನೌಕೆಯಲ್ಲಿ ಇಸ್ರೇಲ್ ನಿರ್ಮಿತ ರಾಡಾರ್ ವ್ಯವಸ್ಥೆ ಇದ್ದು, ಅತ್ಯಾಧುನಿಕ ಟಾರ್ಪಿಡೊಗಳು, 76 ಎಂಎಂನ ಫಿರಂಗಿಗಳು ಮತ್ತು ಅತ್ಯಾಧುನಿಕ ಸೋನಾರ್ ಸಂವೇದಕಗಳನ್ನು ಅಳಡಿಸಲಾಗಿದೆ.