You cannot copy content of this page
+91 94482 26377
Koramangala, Bengaluru

Current-affairs 1st october

2 Oct 2019

Current Affairs – 1st October

ಬಿಬಿಎಂಪಿ ಮೇಯರ್ ಚುನಾವಣೆ

ಸುದ್ಧಿಯಲ್ಲಿ ಏಕಿದೆ ? 

 ಬಿಎಂಪಿ ಮೇಯರ್ ಸ್ಥಾನಕ್ಕೆ  ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಇಂದು ನಡೆಯುವುದು ಖಚಿತವಾಗಿದೆ. ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪದ್ಮನಾಭ ರೆಡ್ಡಿ, ಗೌತಮ್ ಕುಮಾರ್ ಬಿಜೆಪಿಯ ಕಡೆಯಿಂದ ಮೇಯರ್ ಸ್ಥಾನದ                                                                                          ಅಭ್ಯರ್ಥಿಗಳಾಗಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಮಹಾನಗರದ ಕ್ಷೇತ್ರದ ನಾಗರಿಕ ಮತ್ತು ಮೂಲಭೂತ ವ್ಯವಸ್ಥೆಗಳ ಆಸ್ತಿಯ ಜವಾಬ್ದಾರಿಯನ್ನು ಹೊಂದಿರುವ ಸರ್ಕಾರದ ಆಡಳಿತಾತ್ಮಕ ಅಂಗವಾಗಿದೆ.

ಬಿಬಿಎಂಪಿ ಸರ್ಕಾರದ ಮೂರನೇ ಹಂತವನ್ನು ಪ್ರತಿನಿಧಿಸುತ್ತದೆ, (ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮೊದಲಿನ ಎರಡು ಹಂತಗಳು)

ಮೇಯರ್ ಮತ್ತು ಉಪ ಮೇಯರ್ ಅವರನ್ನು ಆಯ್ಕೆ ಮಾಡುವ ವಿಧಾನ :
  • ಪ್ರಾದೇಶಿಕ ಆಯುಕ್ತರು ಚುನಾವಣಾ ಅಧಿಸೂಚನೆಯನ್ನು ನೀಡುತ್ತಾರೆ, ಅದರ ನಂತರ ನಾಮಪತ್ರಗಳನ್ನು ಸಲ್ಲಿಸಲಾಗುತ್ತದೆ. ಚುನಾವಣೆಯಲ್ಲಿ ಗೆದ್ದ ಪಕ್ಷದ ಜೊತೆಗೆ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ಪಕ್ಷದ ಯಾವುದೇ ಕಾರ್ಪೋರೇಟರ್ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಬಹುದು..
  • ಸಾಮಾನ್ಯವಾಗಿ, ಸಾರ್ವತ್ರಿಕ ಚುನಾವಣೆಯಲ್ಲಿ ಸರಳ ಬಹುಮತವನ್ನು ಗಳಿಸಿರುವ ಪಕ್ಷವು ಪಕ್ಷದ ಮುಖಂಡರು ಮತ್ತು ಕಾರ್ಪೋರೇಟರ್‌ಗಳೊಂದಿಗೆ ಸಮಾಲೋಚಿಸಿದ ನಂತರ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ. 
  • ಒಂದು ಪಕ್ಷವು ಪರಿಷತ್ತಿನಲ್ಲಿ ಸಂಪೂರ್ಣ ಬಹುಮತವನ್ನು ಪಡೆದರೆ, ಪಕ್ಷದೊಳಗಿನ ಹುದ್ದೆಗೆ ಸ್ಪರ್ಧಿಗಳು ಇಲ್ಲದಿದ್ದರೆ ಮೇಯರ್ ಮತ್ತು ಉಪ ಮೇಯರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತದೆ.
  • ಬಿಬಿಎಂಪಿ ಚುನಾವಣೆಯ ನಂತರ, ಪರಿಷತ್ತಿನ ಮೊದಲ ಸಭೆಯಲ್ಲಿ, ಕೌನ್ಸಿಲರ್‌ಗಳಲ್ಲಿ ಒಬ್ಬರನ್ನು ಮೇಯರ್ ಆಗಿ ಮತ್ತು ಇನ್ನೊಬ್ಬ ಕೌನ್ಸಿಲರ್ ಅವರನ್ನು ಮೀಸಲಾತಿಗೆ ಅನುಗುಣವಾಗಿ ಉಪ ಮೇಯರ್ ಆಗಿ ಆಯ್ಕೆ ಮಾಡಬೇಕಾಗುತ್ತದೆ

ಮೇಯರ್ ಅಧಿಕಾರ ಮತ್ತು ಕಾರ್ಯಗಳು 
  • ಮೇಯರ್ ಮಹಾನಗರ ಪಾಲಿಕೆಯ ಪ್ರಧಾನ ಅಧ್ಯಕ್ಷರಾಗಿದ್ದಾರೆ
  • ಮೇಯರ್ ನಗರದ ಮೊದಲ ನಾಗರಿಕ.
  • ನಿಗಮದ ಪ್ರತಿ ಸಭೆಯ ಅಧ್ಯಕ್ಷತೆ ಮೇಯರ್ ವಹಿಸುವರು. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ಸ್ (ಕೆಎಂಸಿ) ಕಾಯ್ದೆ – 1976 ರ ಪ್ರಕಾರ, ಮೇಯರ್ ಪರಿಶೀಲನೆಯ ಸಾಮಾನ್ಯ ಅಧಿಕಾರವನ್ನು ಹೊಂದಿದ್ದಾರೆ ಮತ್ತು ನಿಗಮದಲ್ಲಿ ಅಂಗೀಕರಿಸಲ್ಪಟ್ಟ ಯಾವುದೇ ನಿರ್ಣಯಗಳನ್ನು ಜಾರಿಗೆ ತರಲು ನಿಗಮ ಆಯುಕ್ತರಿಗೆ ನಿರ್ದೇಶನ ನೀಡಬಹುದು. ಆಯುಕ್ತರು ಅಂತಹ ನಿರ್ದೇಶನಗಳನ್ನು ಪಾಲಿಸಬೇಕು.
  • ಮೇಯರ್ ತನ್ನ ಅಧಿಕಾರವನ್ನು ಉಪ ಮೇಯರ್‌ಗೆ ಬರೆಯುವ ಆದೇಶದ ಮೂಲಕ ನಿಯೋಜಿಸಬಹುದು. ಮೇಯರ್ ಅವರು ಮೇಯರ್ ಆಗಿ ಅಧಿಕಾರ ವಹಿಸಿಕೊಂಡಾಗ ಯಾವುದೇ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಲು ಅರ್ಹರಲ್ಲ.

ಬಿಬಿಎಂಪಿಗೆ ಮೇಯರ್ ಚುನಾವಣೆಯಲ್ಲಿ ಯಾರು ಮತ ಚಲಾಯಿಸಬಹುದು?
  • ರಾಜ್ಯಸಭೆ ಮತ್ತು ರಾಜ್ಯ ವಿಧಾನ ಪರಿಷತ್ತಿನ ಸದಸ್ಯರು ಬಿಬಿಎಂಪಿಯ ಖಾಯಂ ನಿವಾಸಿಗಳಾಗಿದ್ದಾಗ ಮಾತ್ರ ಮತದಾನವನ್ನು ಪಡೆಯುತ್ತಾರೆ ಮತ್ತು ಅವರ ಹೆಸರುಗಳನ್ನು ಬಿಬಿಎಂಪಿಯೊಳಗಿನ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.
  • 198 ಕಾರ್ಪೊರೇಟರ್‌ಗಳಲ್ಲದೆ, ರಾಜ್ಯಸಭೆ, ಲೋಕಸಭೆ, ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ 62 ಸದಸ್ಯರಿಗೆ ಮೇಯರ್ ಚುನಾವಣೆಯಲ್ಲಿ ಮತದಾನದ ಹಕ್ಕಿದೆ. ಅವರು ಪುರಸಭೆಯ ಕಾರ್ಯಗಳು ಮತ್ತು ಸಭೆಗಳಲ್ಲಿ ಭಾಗವಹಿಸಬಹುದು.
  • ಬಿಬಿಎಂಪಿ ಕೌನ್ಸಿಲ್ 260 ಕೌನ್ಸಿಲರ್‌ಗಳನ್ನು ಒಳಗೊಂಡಿದೆ. ಇದರಲ್ಲಿ 198 ಚುನಾಯಿತ ಕಾರ್ಪೋರೇಟರ್‌ಗಳು, ಬೆಂಗಳೂರಿನ 28 ಶಾಸಕರು, 5 ಸಂಸದರು (ಲೋಕಸಭೆ) 21 ಎಂಎಲ್‌ಸಿಗಳು ಮತ್ತು 8 ರಾಜ್ಯಸಭಾ ಸದಸ್ಯರು ಸೇರಿದ್ದಾರೆ. ಈ 260 ಕೌನ್ಸಿಲರ್‌ ಮೇಯರ್ ಚುನಾವಣೆಯಲ್ಲಿ ಮತದಾನದ ಮಾಡುತ್ತಾರೆ .

ಶಾಲಾ ಶಿಕ್ಷಣ ಗುಣಮಟ್ಟ

ಸುದ್ಧಿಯಲ್ಲಿ ಏಕಿದೆ ? 

ಶಾಲಾ ಶಿಕ್ಷಣ ಗುಣಮಟ್ಟದ ಸೂಚ್ಯಂಕದ ವರದಿಯನ್ನು ನೀತಿ ಆಯೋಗವು ಬಿಡುಗಡೆ ಮಾಡಿದ್ದು, ಕೇರಳ ಮುಂಚೂಣಿಯಲ್ಲಿದೆ. ರಾಜಸ್ಥಾನ ಮತ್ತು ಕರ್ನಾಟಕ ರಾಜ್ಯಗಳು ಕ್ರಮವಾಗಿಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ವಿವರಣೆ
  • ಕೇರಳವು ಶೇ.6ರಷ್ಟು ಕಾರ್ಯಕ್ಷಮತೆ ಅಂಕಗಳನ್ನು ಪಡೆದಿದ್ದರೆ, ಉತ್ತರಪ್ರದೇಶವು 36.4 ಅಂಕಗಳನ್ನು ಪಡೆದಿದೆ. ‘ನಮ್ಮ ಶಾಲೆಗಳು-ಶಾಲಾ ಶಿಕ್ಷಣದ ಗುಣಮಟ್ಟದ ಸೂಚ್ಯಂಕ (ಎಸ್‌ಇಕ್ಯೂಐ)‘ ಎನ್ನುವ ವರದಿಯನ್ನು ನೀತಿ ಆಯೋಗ, ಮಾನವ ಸಂಪನ್ಮೂಲ ಮತ್ತು ವಿಶ್ವಸಂಸ್ಥೆಯು ಜಂಟಿಯಾಗಿ ಬಿಡುಗಡೆ ಮಾಡಿವೆ. 
  • ಹೆಚ್ಚು ಜನಸಂಖ್ಯೆಯ ಉತ್ತರ ಪ್ರದೇಶ ರಾಜ್ಯ ಈ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. 2016-17ನೇ ಸಾಲಿನಲ್ಲಿಶಾಲಾ ಶಿಕ್ಷಣ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಪ್ರಮುಖ 20 ರಾಜ್ಯಗಳ ಪಟ್ಟಿಯನ್ನು ನೀತಿ ಆಯೋಗ ಬಿಡುಗಡೆ ಮಾಡಿದೆ.
  • ಶಾಲೆಗೆ ಹೋಗುವ ಮಕ್ಕಳ ಕಲಿಕೆಯನ್ನು ಆಧರಿಸಿ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ. ಮಣಿಪುರ(ಶೇ.8), ತ್ರಿಪುರ, ಗೋವಾದಂಥ ಸಣ್ಣ ರಾಜ್ಯಗಳೂ ಗಮನಾರ್ಹ ಸಾಧನೆ ಮಾಡಿವೆ. ”ರಾಜ್ಯ ಸರಕಾರಗಳು ಜಾರಿಗೊಳಿಸಿರುವ ಶಿಕ್ಷಣ ನೀತಿಗಳ ಫಲಿತಗಳನ್ನು ಈ ಸೂಚ್ಯಂಕವು ಬಿಂಬಿಸುತ್ತಿದೆ. ಶಿಕ್ಷಣ ನೀತಿಯಲ್ಲಿನ ದೋಷಗಳು ಮತ್ತು ಉತ್ತಮ ಅಂಶಗಳನ್ನು ಪರಾಮರ್ಶಿಸಲು ಅನುಕೂಲವಾಗುತ್ತದೆ.
  • ದೇಶದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟವನ್ನು ಕಂಡುಕೊಳ್ಳುವಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಾಧನೆಯನ್ನು ಅಳೆಯಲು ನೀತಿ ಆಯೋಗ ಈ ಸೂಚ್ಯಂಕ ಪಟ್ಟಿಯನ್ನು ರೂಪಿಸಿದೆ. ದೊಡ್ಡ ರಾಜ್ಯಗಳು (20), ಚಿಕ್ಕ ರಾಜ್ಯಗಳು (8) ಹಾಗೂ ಕೇಂದ್ರಾಡಳಿತ ಪ್ರದೇಶ (7) ಗಳೆಂದು ವಿಭಾಗಿಸಿ ಪಟ್ಟಿ ಸಿದ್ಧಪಡಿಸುತ್ತದೆ.
  • 20 ದೊಡ್ಡ ರಾಜ್ಯಗಳ ಪೈಕಿ ೧೮ ರಾಜ್ಯಗಳು ಸ್ಥಾನಗಳನ್ನು ಉತ್ತಮಪಡಿಸಿಕೊಂಡಿದ್ದರೆ, ಕರ್ನಾಟಕ ಹಾಗೂ ಉತ್ತರಾಖಂಡ್‌ಗಳು ಪಟ್ಟಿಯಲ್ಲಿ ಕೆಳಕ್ಕಿಳಿದಿವೆ. ಬಿಹಾರ ಹಾಗೂ ಜಾರ್ಖಂಡ್‌ಗಳು ಕೊನೆಯ ಎರಡು ಸ್ಥಾನಗಳಲ್ಲಿ ಮುಂದುವರಿದಿವೆ.

ಹೆತ್ತವರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯಿದೆ

ಸುದ್ಧಿಯಲ್ಲಿ ಏಕಿದೆ ?

ವಯಸ್ಸಾದ ಹೆತ್ತವರನ್ನು ನಿರ್ಲಕ್ಷಿಸುವ ಶೋಷಿಸುವ ಮಕ್ಕಳ ವಿರುದ್ಧ ಕ್ರಮ ಕೈಗೊಳ್ಳಲು ಈಗಿರುವ ಕಾನೂನನ್ನು ಬಲಗೊಳಿಸಿ ಹೊಸ ಕರಡನ್ನು ರೂಪಿಸಲಾಗಿದೆ.

ಕಾಯ್ದೆಯ ವಿವರ :
  • ಈ ನಡುವೆ, ಇದನ್ನು ಇನ್ನಷ್ಟು ಬಲಗೊಳಿಸುವ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿಖುದ್ದು ಪ್ರಧಾನಿ ಕಚೇರಿಯೇ ಮಧ್ಯಪ್ರವೇಶಿಸಿದೆ. ಹಾಲಿ ಇರುವ ಕಾನೂನಿನ ಪರಿಣಾಮಕಾರಿತ್ವದ ಬಗ್ಗೆ ಮೂರನೇ ಸಂಸ್ಥೆಯಿಂದ ಪರಿಶೀಲನೆಗೆ ಪಿಎಂಒ ಸೂಚಿಸುವ ಮೂಲಕ ಅದನ್ನು ಇನ್ನಷ್ಟು ಬಲಗೊಳಿಸುವ ಸೂಚನೆ ನೀಡಿದೆ.
  • ಹೆತ್ತವರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯಿದೆ, 2007ಕ್ಕೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತಿದ್ದುಪಡಿಗಳನ್ನು ಮಾಡಿತ್ತು. ಇದರಲ್ಲಿಹಿರಿಯರನ್ನು ಶೋಷಿಸುವವರು, ಉಪೇಕ್ಷಿಸುವವರಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಮೂರು ತಿಂಗಳಿನಿಂದ ಆರು ತಿಂಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಇದೆ.
  • ಕಾನೂನನ್ನು ಬಲಗೊಳಿಸಿ ಹಿರಿಯರಿಗೆ ನೆಮ್ಮದಿಯನ್ನು ನೀಡುವುದು ಮೋದಿ ಸರಕಾರದ ಆದ್ಯತೆಗಳಲ್ಲಿಒಂದು ಎನ್ನಲಾಗಿದೆ. ಹೀಗಾಗಿಯೇ, ತಿದ್ದುಪಡಿಗಳನ್ನು ಗಮನಿಸಿದ ಪ್ರಧಾನಿ ಕಚೇರಿ ಅದರ ಕಾರ್ಯಸಾಧುತ್ವ ಮತ್ತು ಬಲವನ್ನು ಹೆಚ್ಚಿಸಲು ಮೂರನೇ ಸಂಸ್ಥೆಯೊಂದರ ಪರಿಶೀಲನೆಗೆ ಒಪ್ಪಿಸಲು ಮುಂದಾಗಿದೆ.
ಹೊಸ ತಿದ್ದುಪಡಿಗಳು :

ಇದುವರೆಗೆ ಹಿರಿಯರನ್ನು ನೋಡಿಕೊಳ್ಳುವ ಮಕ್ಕಳು ಎಂಬ ವ್ಯಾಖ್ಯಾನದಡಿ ಕೇವಲ ಪುತ್ರರು, ಪುತ್ರಿಯರು ಮತ್ತು ಮೊಮ್ಮಕ್ಕಳು ಬರುತ್ತಿದ್ದರು. ಮುಂದೆ ಅದನ್ನು ಮಕ್ಕಳು/ಮಲಮಕ್ಕಳು, ಅಳಿಯ, ಸೊಸೆ, ಮೊಮ್ಮಕ್ಕಳು ಮತ್ತು ಅಪ್ರಾಪ್ತರಿಗೂ ವಿಸ್ತರಿಸಲಾಗಿದೆ.

  • ಇದುವರೆಗೆ ಜೀವನ ನಿರ್ವಹಣೆಗೆ ಗರಿಷ್ಠ ಮೊತ್ತವನ್ನು ತಿಂಗಳಿಗೆ 10,000 ರೂ. ಎಂದು ನಿಗದಿ ಮಾಡಲಾಗಿತ್ತು. ಈಗ ಅದು ಪ್ರಕರಣದಿಂದ ಪ್ರಕರಣಕ್ಕೆ ಬದಲಾಗಬಹುದು. ಒಳ್ಳೆಯ ಕೆಲಸದಲ್ಲಿರುವವರು ಹೆಚ್ಚು ಪಾವತಿ ಮಾಡಬೇಕಾಗುತ್ತದೆ.
  • ಹಿರಿಯ ನಾಗರಿಕರ ಪಾಲನಾ ಕೇಂದ್ರಗಳು, ಡೇ ಕೇರ್‌ ಸೆಂಟರ್‌ಗಳ ಗುಣಮಟ್ಟ ಹೆಚ್ಚಳವನ್ನು ಕಡ್ಡಾಯಗೊಳಿಸಲಾಗಿದೆ.

ಟಾಪ್-20 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ

ಸುದ್ಧಿಯಲ್ಲಿ ಏಕಿದೆ ? 

ಸುಲಭವಾಗಿ ವ್ಯಾಪಾರ ಮಾಡುವಂತಾಗಲು ಹೆಚ್ಚು ಸುಧಾರಣೆಗಳು ತಂದಿರುವ ಟಾಪ್-20 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಒಂದಾಗಿದೆ. ರಾಷ್ಟ್ರಗಳು ಪಡೆದ ಅಂಕಗಳು ಹಾಗೂ ರಾಷ್ಟ್ರಗಳು ಪಡೆದ ಶ್ರೇಯಾಂಕ ಪಟ್ಟಿಯನ್ನು ಅಕ್ಟೋಬರ್​ 24 ರಂದು ವಿಶ್ವಬ್ಯಾಂಕ್ ಬಿಡುಗಡೆಗೊಳಿಸಲಿದೆ.

ವಿವರಣೆ:
  • ಹೆಚ್ಚಿನ ಪ್ರಗತಿ ಸಾಧಿಸಿರುವ ಪಟ್ಟಿಯಲ್ಲಿ ಚೀನಾ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳೂ ಸ್ಥಾನ ಪಡೆದಿವೆ.
  • ಭಾರತ ಮುಖ್ಯವಾಗಿ ಉದ್ಯಮ ಆರಂಭ, ದಿವಾಳಿತನ ಪರಿಹರಿಸುವುದು, ಗಡಿಗಳಲ್ಲಿ ವ್ಯಾಪಾರ ಮತ್ತು ನಿರ್ಮಾಣ ಪರವಾನಗಿಗಳು ನೀಡುವ ವಿಭಾಗಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದೆ ಎಂದು ಬ್ಯಾಂಕ್​ಗಳ ವಾರ್ಷಿಕ ವ್ಯಾಪಾರ ಮಾಡುವ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
  • ವ್ಯಾಪಾರ ಸುಲಭಗೊಳಿಸಲು ಸುಧಾರಣೆಗಳು ತಂದಿರುವ ಅಗ್ರ 20 ರಾಷ್ಟ್ರಗಳ ಪಟ್ಟಿಯನ್ನು ವಿಶ್ವಬ್ಯಾಂಕ್ ಬಿಡುಗಡೆಗೊಳಿಸಿದೆ. ಈ ಅಗ್ರ ರಾಷ್ಟ್ರಗಳು ಅತಿಹೆಚ್ಚು ಸುಧಾರಣೆಗಳು ಜಾರಿಗೊಳಿಸಿದ್ದು, ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರ ಸಂಸ್ಥೆಗಳು ಸುಲಭವಾಗಿ ವ್ಯಾಪಾರ ವ್ಯವಹಾರ ನಡೆಸಬಹುದು. ಸುಧಾರಣೆಗಳ ಬಳಿಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ರಾಷ್ಟ್ರಗಳಲ್ಲಿ ಉದ್ಯಮ ಆರಂಭಿಸಬಹುದೆಂದು ವರದಿ ಹೇಳಿದೆ.
  • ಭಾರತದ ಪ್ರಸಕ್ತ ವರ್ಷದ ಸಾಧನೆಯು ಹಲವು ವರ್ಷಗಳ ಕಾಲ ನಿರಂತರವಾಗಿ ಮಾಡಿದ ಸುಧಾರಣಾ ಪ್ರಯತ್ನಗಳ ಫಲವಾಗಿದೆ. 2003-2004 ರಿಂದ ಇದುವರೆಗೆ 48 ಸುಧಾರಣೆಗಳನ್ನು ತಂದಿದೆ ಎಂದು ಸರ್ವೇಯಲ್ಲಿ ಹೇಳಲಾಗಿದೆ.
  • ಭಾರತದ ಮೇಲೆ ಸದಾ ಬೆಂಕಿಯುಗುಳುತ್ತಿರುವ ಪಾಕಿಸ್ತಾನ ಆರು ವಲಯಗಳಲ್ಲಿ ಸುಧಾರಣೆ ಕಂಡಿದೆ. ಉದ್ಯಮ ಆರಂಭ, ನಿರ್ಮಾಣ ಪರವಾನಗಿ ಪಡೆಯುವುದು, ವಿದ್ಯುತ್ ಸಂಪರ್ಕ ಪಡೆಯುವುದು, ಆಸ್ತಿ ನೋಂದಣಿ, ತೆರಿಗೆ ಪಾವತಿ ಹಾಗೂ ಗಡಿ ಪ್ರದೇಶದ ವಾಣಿಜ್ಯ ವಿಭಾಗಗಳಲ್ಲಿ ಪ್ರಗತಿ ಕಂಡಿದೆ.

ಗ್ರೇಟಾ ಳಿಂದ 5 ಶ್ರೀಮಂತ ದೇಶದ ವಿರುದ್ಧ ದೂರು
ಸುದ್ಧಿಯಲ್ಲಿ ಏಕಿದೆ ? 

ಗ್ರೇಟಾ ಥನ್ ಬರ್ಗ್ ವಿಶ್ವದ ಐದು ಶ್ರೀಮಂತ ರಾಷ್ಟ್ರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಹವಾಮಾನ ವೈಫರೀತ್ಯ ತಡೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ವಿಶ್ವಸಂಸ್ಥೆಯಲ್ಲಿ ದೂರು ದಾಖಲಿಸಿದ್ದಾರೆ.

  • ಸ್ವೀಡನ್ ದೇಶದ ಗ್ರೇಟಾ ಥನ್ ಬರ್ಗ್ ಅವರಿಗೆ ಈ ವಿಚಾರದಲ್ಲಿ ಈಗ ಇತರ 15 ಮಕ್ಕಳು ಸಾಥ್ ನೀಡಿದ್ದಾರೆ. ಜರ್ಮನಿ, ಫ್ರಾನ್ಸ್, ಬ್ರೆಜಿಲ್, ಅರ್ಜೆಂಟೀನಾ ಮತ್ತು ಟರ್ಕಿ ರಾಷ್ಟ್ರಗಳ ವಿರುದ್ಧ ದೂರು ಕೊಡಲಾಗಿದ್ದು, ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ತಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯುವಲ್ಲಿ ಈ ರಾಷ್ಟ್ರಗಳು ವಿಫಲವಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯಾರು ಈ ಗ್ರೇಟಾ ಥನ್ ಬರ್ಗ್?
  • ಸ್ವೀಡನ್ ದೇಶದವರಾಗಿರುವ 16 ವರ್ಷದ ಗ್ರೇಟಾ ಥನ್ ಬರ್ಗ್ ಈ ಹಿಂದೆ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಚಳುವಳಿ ಮಾಡುವ ಮೂಲಕ ಜಗತ್ತಿನಾದ್ಯಂತ ಸುದ್ದಿಯಾಗಿದ್ದರು.
  • ಹಲವು ವರ್ಷಗಳಿಂದ ಪರಿಸರದ ಕಾಳಜಿ ವಹಿಸಿ ಹೋರಾಟ ನಡೆಸುತ್ತಿರುವ ಗ್ರೇಟಾ . ಒಂದು ವರ್ಷದಿಂದ ತನ್ನ ಶೈಕ್ಷಣಿಕ ಚಟುವಟಿಕೆಯಿಂದ ದೂರ ಉಳಿದಿದ್ದಾರೆ. ತನ್ನಂತ ವಿದ್ಯಾರ್ಥಿಗಳು ಶಾಲೆಯನ್ನು ಬಿಟ್ಟು ಪರಿಸರದ ಪರವಾಗಿ ಹೋರಾಟಕ್ಕೆ ಇಳಿದಿರುವುದಕ್ಕೆ ಜಾಗತಿಕ ನಾಯಕರು ಹವಾಮಾನ ವೈಪರಿತ್ಯದ ಬಗ್ಗೆ ತಳೆದಿರುವ ನಿರ್ಲಕ್ಷ್ಯ ಧೋರಣೆಯೇ ಕಾರಣ. ಹೀಗಾಗಿ ನನ್ನಂತಹ ಹಲವು ವಿದ್ಯಾರ್ಥಿಗಳ ಬಾಲ್ಯವನ್ನು ಮತ್ತು ಬಾಲ್ಯದ ಕನಸನ್ನು ಜಾಗತಿಕ ನಾಯಕರು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
  • ಪರಿಸರದಲ್ಲಿ ಉಂಟಾಗುತ್ತಿರುವ ಬದಲಾವಣೆ, ಹವಾಮಾನ ವೈಪರಿತ್ಯ, ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆಗಳು ಮಾತ್ರವಲ್ಲ ತನ್ನಂತೆ ಅದೆಷ್ಟೋ ಮಕ್ಕಳು ಅನುಭವಿಸುತ್ತಿರುವ ನರಕಯಾತನೆಯನ್ನು ಎಳೆಎಳೆಯಾಗಿ ಗ್ರೇಟಾ ಥನ್ ಬರ್ಗ್ ಬಿಚ್ಚಿಟ್ಟಳು

ಅಕ್ಟೋಬರ್-1 “ಅಂತಾರಾಷ್ಟ್ರೀಯ ಸಸ್ಯಾಹಾರ ದಿನ”:

ಸುದ್ಧಿಯಲ್ಲಿ ಏಕಿದೆ ? 

ಸಸ್ಯಾಹಾರ ಮಾನವರ ಆರೋಗ್ಯಕ್ಕೆ ಉತ್ತಮ, ಪರ್ಯಾವರಣದ ಆರೋಗ್ಯ ಪಾಲನೆಗೂ ಸಹಕಾರಿ. ಈ ದ್ಯೇಯವನ್ನು ಇಟ್ಟುಕೊಂಡೇ ಅ. 1ನ್ನು “ಅಂತಾರಾಷ್ಟ್ರೀಯ ಸಸ್ಯಾಹಾರ ದಿನ”ವನ್ನಾಗಿ ಆಚರಿಸಲಾಗುತ್ತದೆ.

ವಿವರಣೆ:
  • ನಾರ್ತ್ ಅಮೆರಿಕನ್ ವೆಜಿಟೇರಿಯನ್ ಸೊಸೈಟಿ ಪ್ರಪ್ರಥಮ ಬಾರಿಗೆ ಅಂದರೆ 1977ರಲ್ಲಿ ಸಸ್ಯಾಹಾರಿಗಳ ದಿನವನ್ನು ಆಚರಿಸಿತು.
  • ಮಾಂಸಾಹಾರ ಭಕ್ಷಣೆಯನ್ನು ಒಂದು ದಿನವಾದರೂ ಸ್ವಯಂ ಪ್ರೇರಣೆಯಿಂದ ತ್ಯಜಿಸಬೇಕು. ಸಸ್ಯಾಹಾರದ ಮಹತ್ವವನ್ನು ಸಾರ್ವಜನಿಕವಾಗಿ ಸಾರಬೇಕು ಎಂಬುದು ಈ ದಿನದ ಧೈಯವಾಯಿತು.
  • ಇಂಟರ್ ನ್ಯಾಷನಲ್ ವೆಜಿಟೇರಿಯನ್ ಯೂನಿಯನ್ ಇದನ್ನು 1978ರಲ್ಲೇ ಅನುಮೋದಿಸಿ ಆಚರಣೆಗೆ ಕರೆ ನೀಡಿತು.
  • ಧಾರ್ಮಿಕ, ಪರಿಸರಾತ್ಮಕ, ಆರೋಗ್ಯ ಮತ್ತು ಮಾನವೀಯತೆಯ ತತ್ವಗಳ ಪಾಲನೆ ನಿಟ್ಟಿನಲ್ಲಿ ಸಸ್ಯಾಹಾರಿಗಳ ದಿನ ಮಹತ್ವ ಪಡೆಯಿತು. ಪ್ರಾಣಿದಯಾ ಸಂಘಟನೆಗಳು ವಿಶ್ವದ ವಿವಿಧೆಡೆ ಸಸ್ಯಾಹಾರಿಗಳ ದಿನಕ್ಕೆ ಬೆಂಬಲಿಸಿದ್ದು, ಈ ದಿನದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿತು.
  • ಅಮೆರಿಕದ ವಿವಿಧ ಸಂಘಟನೆಗಳು ಅಕ್ಟೋಬರ್ ತಿಂಗಳನ್ನು ಮಂಥ್ ಆಫ್ ವೆಜಿಟೇರಿಯನ್ ಫುಡ್ ಎಂದೂ ಆಚರಿಸುವ ಪದ್ದತಿಯನ್ನು ಆರಂಭಿಸಿವೆ.
  • ಒಟ್ಟಾರೆ ಹೇಳಬೇಕೆಂದರೆ ಮಾಂಸಾಹಾರ ಮಾನವರ ಸ್ವಾಸ್ಥ್ಯ ಪಾಲನೆಗೆ ಅಲ್ಲ. ಸಸ್ಯಾಹಾರದಿಂದ ದೀರ್ಘಾಯುಷ್ಯ ಸಾಧ್ಯ ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮಾ ಗಾಂಧಿ ನಿತ್ಯ ನೆನಪು:

  • 1893ರಲ್ಲಿ ಪ್ರಿಟೋರಿಯಾಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಿಳಿಯನೊಬ್ಬನ ದೂರಿನ ಮೇರೆಗೆ ಕರಿಯನೆಂಬ ಕಾರಣಕ್ಕೆ ಮೋಹನದಾಸ್ ಕರಮಚಂದ್ ಗಾಂಧಿಯನ್ನು ಅಧಿಕಾರಿಗಳು ರೈಲಿನಿಂದ ಹೊರ ತಳ್ಳಿದ್ದರು.
  • ಇದು ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ದ ಮಹಾ ಹೋರಾಟಕ್ಕೆ ನಾಂದಿಯಾಯಿತು.
  • ಗಾಂಧಿಯೇ ಇದರ ನೇತೃತ್ವವಹಿಸಿದ್ದರು. ಈ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ ಸದಾ ಕಾಲವೂ ಗಾಂಧಿ ಅವರನ್ನು ಸ್ಮರಿಸುತ್ತದೆ.
  • ಅದೆಷ್ಟೋ ಪ್ರತಿಮೆ, ಪುತ್ತಳಿಗಳನ್ನು ನಿರ್ಮಿಸಿ ನಮಿಸುತ್ತಿದೆ. ಜೋಹಾನ್ಸ್‌ಬರ್ಗ್‌ನ ಪ್ರಧಾನ ಸಾರ್ವಜನಿಕ ಬಸ್ ವ್ಯವಸ್ಥೆಗೂ ಗಾಂಧಿ ಹೆಸರಿಡಲಾಗಿದೆ.
 ಪ್ರತಿಮೆ, ಪುತ್ಥಳಿ
  • ಜೋಹಾನ್ಸ್‌ಬರ್ಗ್ ವೃತ್ತದಲ್ಲಿ ಇಲ್ಲೇ ಸನಿಹದಲ್ಲಿ ಮೊದಲು ಕೋರ್ಟ್ ಕಟ್ಟಡವಿತ್ತು.
  • 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫೀನಿಕ್ಸ್ ನಲ್ಲಿ  ಪ್ರತಿಮೆ ಉದ್ಘಾಟಿಸಿದ್ದರು.
  • ಗಾಂಧಿ ಮತ್ತು ಮಂಡೇಲಾ ಜೈಲು ವಾಸ ಅನುಭವಿಸಿದ್ದ ಜೋಹಾನ್ಸ್‌ಬರ್ಗ್‌ನ ಸಂವಿಧಾನ ಬೆಟ್ಟದಲ್ಲಿ ರುಸ್ಟೆನ್‌ಬರ್ಗ್ ಪಟ್ಟಣದಲ್ಲಿ ಗಾಂಧಿ ಅವರ ದೇಹ ಗಾತ್ರದ ಪ್ರತಿಮೆ ಇದೆ.
  • ಜೋಹಾನ್ಸ್‌ಬರ್ಗ್‌ನ ಅತ್ಯಂತ ಜನಪ್ರಿಯ ಮತ್ತು ವಿಶಾಲ ಟೈಡ್ ರೂಟ್ ಮಾಲ್‌ನ ಒಳಗಡೆ. 2011ರಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸ್ಥಾಪಿಸಲಾಗಿದ್ದ ಇದನ್ನು ಕಾಯಂ ಮಾಡಲಾಯಿತು.
  • ಜೊಹಾನ್ಸ್‌ಬರ್ಗ್‌ನ ಗಾಂಧಿ ಹಾಲ್‌ನಲ್ಲಿ ಗಾಂಧಿ ಸ್ಮರಣ ಸಮಿತಿಯಿಂದ ಮಂಡೇಲಾ, ಗಾಂಧಿ ಪ್ರತಿಮೆ ಸ್ಥಾಪನೆ ಗಾಂಧಿ ಅವರನ್ನು ರೈಲಿನಿಂದ ಹೊರದಬ್ಬಿದ ಜಾಗದಲ್ಲಿ ಒಂದು ಫಲಕವನ್ನು ಸ್ಥಾಪಿಸಲಾಗಿದ್ದು, ಘಟನೆಯನ್ನು ನೆನಪಿಸಲಾಗಿದೆ.

ವಾಯುಪಡೆಗೆ ಭದೌರಿಯಾ:

ಸುದ್ಧಿಯಲ್ಲಿ ಏಕಿದೆ ? 

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅಧಿಕಾರ ಸ್ವೀಕರಿಸಿದ್ದಾರೆ.

  • ನಿರ್ಗಮಿತ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ ಎಸ್ ಧನೋವಾ ಅಧಿಕಾರ ಹಸ್ತಾಂತರಿಸಿದರು.
  • ಧನೋವಾ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಭದೌರಿಯಾ ಅವರನ್ನು ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಭದ್ರಿಯಾ 26 ರೀತಿಯ ಯುದ್ಧ ವಿಮಾನದಲ್ಲಿ ಹಾರಾಟ ಮಾಡಿದ ಅನುಭವ ಹೊಂದಿದ್ದಾರೆ.