You cannot copy content of this page
+91 94482 26377
Koramangala, Bengaluru

ಪ್ರಚಲಿತ ವಿದ್ಯಮಾನ - ಅಕ್ಟೋಬರ್ 16

17 Oct 2019

ಪ್ರಚಲಿತ ವಿದ್ಯಮಾನಗಳು – ಅಕ್ಟೋಬರ್ 16

ಬೆಂಗಳೂರಿಗೆ ಶೀಘ್ರ ಪ್ರತ್ಯೇಕ ಉಗ್ರ ನಿಗ್ರಹ ಪಡೆ…

   ಸುದ್ಧಿಯಲ್ಲಿ ಏಕಿದೆ ?

ದೇಶದ ಬೃಹತ್ ನಗರಗಳಾದ ದೆಹಲಿ, ಚೆನ್ನೈ ಮತ್ತು ಮುಂಬೈನಲ್ಲಿ ಪ್ರತ್ಯೇಕ ಉಗ್ರ ನಿಗ್ರಹ ಪಡೆಗಳು ಇವೆ. ಇದೆ ಮಾದರಿಯಲ್ಲಿ ಬೆಂಗಳೂರಿಗೆ ಪ್ರತ್ಯೇಕ ಎಟಿಎಸ್ ಘಟಕ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ.

 • ಭಯೋತ್ಪಾದಕರ ಹಿಟ್ ಲಿಸ್ಟ್​ನಲ್ಲಿರುವ ಬೆಂಗಳೂರಿಗೆ ಪ್ರತ್ಯೇಕ ‘ಉಗ್ರ ನಿಗ್ರಹ ಪಡೆ’ (ಎಟಿಎಸ್) ಸ್ಥಾಪಿಸಲು ಗೃಹ ಇಲಾಖೆ ಮುಂದಾಗಿದೆ.
 • ಈಗಾಗಲೇ ಸರ್ಕಾರ ಮುಂದೆ ಪ್ರಸ್ತಾವನೆ ಇದ್ದು, ಶೀಘ್ರವೇ ಎಟಿಎಸ್ ತೆರೆದು ಉಗ್ರರ ಹುಟ್ಟಡಗಿಸಲು ವಿಶೇಷ ತರಬೇತಿ ನೀಡಲು ಸರ್ಕಾರ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಶೇ.36 ಕ್ರೈಂ

 • ರಾಜ್ಯದಲ್ಲಿ ವರದಿಯಾಗುತ್ತಿರುವ ಅಪರಾಧ ಗಳ ಪೈಕಿ ಶೇ.36 ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗುತ್ತಿವೆ. ನಗರದಲ್ಲಿ ಎಲ್ಲಿಯೇ ಅಪರಾಧ ಎಸಗಿ ಒಂದೂವರೆ ತಾಸಿಗೆ ಕೇರಳ, ತಮಿಳುನಾಡು, ಆಂಧ್ರಕ್ಕೆ ತೆರಳಲು ಅವಕಾಶವಿದೆ.
 • ಬೆಂಗಳೂರು ಆರ್ಥಿಕವಾಗಿ ಬೆಳೆಯುತ್ತಿರುವ ಮತ್ತು ಸಂಪನ್ಮೂಲ ಭರಿತ ನಗರವಾದ ಕಾರಣ ಹೆಚ್ಚು ಅಪರಾಧ ಜರು ಗುತ್ತಿವೆ. ಇದನ್ನು ತಡೆಗಟ್ಟಬೇಕು ಎಂದು ಗೃಹ ಸಚಿವರು ಆದೇಶಿಸಿದರು. ಪ್ರಕರಣಗಳ ತನಿಖೆ ಕಾಲವಧಿ ನಿಗದಿ ಮಾಡುವಂತೆ, ಜೂಜಾಟ, ಬೆಟ್ಟಿಂಗ್, ಡ್ರಗ್ಸ್ ಮಾಫಿಯಾ ಮಟ್ಟಹಾಕುವಂತೆ ಹಾಗೂ ರೌಡಿ ನಿಗ್ರಹ ಪಡೆ ಸಕ್ರಿಯಗೊಳಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಭಯೋತ್ಪಾದನಾ ನಿಗ್ರಹ ದಳ

 • ಮಹಾರಾಷ್ಟ್ರ, ಗುಜರಾತ್, ಕೇರಳ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಭಾರತದ ಹಲವಾರು ರಾಜ್ಯಗಳಲ್ಲಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ವಿಶೇಷ ಪೊಲೀಸ್ ಪಡೆಯಾಗಿದೆ.
 • ಮಹಾರಾಷ್ಟ್ರದಲ್ಲಿ ಇದು ಭಾರತೀಯ ಪೊಲೀಸ್ ಸೇವೆಯ ಹಿರಿಯರ ನೇತೃತ್ವದಲ್ಲಿದೆ. ಈ ತಂಡವು ದೇಶದಲ್ಲಿ ಹಲವಾರು ಭಯೋತ್ಪಾದಕ ದಾಳಿಯನ್ನು ನಿಲ್ಲಿಸಿದೆ.
 • ಎಟಿಎಸ್ ಅನ್ನು ಮಹಾರಾಷ್ಟ್ರದಲ್ಲಿ 1990 ರಲ್ಲಿ ಅಂದಿನ ಮುಂಬೈ ಪೊಲೀಸ್ ಹೆಚ್ಚುವರಿ ಆಯುಕ್ತ ಅಫ್ತಾಬ್ ಅಹ್ಮದ್ ಖಾನ್ (ಎ.ಎ. ಖಾನ್) ಆಧುನಿಕ-ದಿನದ ಭಯೋತ್ಪಾದನೆಯನ್ನು ಎದುರಿಸಲು ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರಗಳ (ಎಸ್‌ಎವಿಟಿ) ತಂಡಗಳ ವಿಧಾನಗಳಿಂದ ಅವರು ಸ್ಫೂರ್ತಿ ಪಡೆದರು.

 ಸಿಇಎನ್ ಠಾಣೆ ಆರಂಭ

 • ದಿನೇದಿನೆ ಹೆಚ್ಚಾಗುತ್ತಿರುವ ಸೈಬರ್ ಕ್ರೈಂ ತಡೆಯಲು ನಗರದ ಎಂಟು ಡಿಸಿಪಿ ವಿಭಾಗದಲ್ಲಿ ಸೈಬರ್, ಆರ್ಥಿಕ, ಮಾದಕ ದ್ರವ್ಯ(ಸಿಇಎನ್) ಠಾಣೆಗಳ ಸ್ಥಾಪನೆ ಕುರಿತು ಸರ್ಕಾರದ ಮುಂದೆ ಪ್ರಸ್ತಾವನೆ ಇದೆ.
 • ನವೆಂಬರ್ ಮೊದಲು ವಾರದ ಒಳಗಾಗಿ ಸ್ಥಾಪನೆ ಮಾಡುವುದಾಗಿ ಗೃಹ ಸಚಿವರು ಹೇಳಿದರು.

ಎಲೆಕ್ಟ್ರಾನಿಕ್ ಟೋಲ್ನಿಂದ ಆದಾಯ:

ಸುದ್ಧಿಯಲ್ಲಿ ಏಕಿದೆ ? 

ಮ್ಯಾನ್ಯುಯಲ್‌ ಪದ್ಧತಿಯಲ್ಲಿರುವ ರಾಜ್ಯ ಹೆದ್ದಾರಿಯ ಟೋಲ್‌ ಸೆಂಟರ್‌ಗಳನ್ನು ಎಲೆಕ್ಟ್ರಾ ನಿಕ್‌ ಕೇಂದ್ರಗಳಾಗಿಸಿ ಪರಿವರ್ತಿಸಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

 • ಈ ಉದ್ದೇಶಕ್ಕೆ ರಾಜ್ಯ ಹೆದ್ದಾರಿ ವ್ಯಾಪ್ತಿಯ 32 ಟೋಲ್‌ ಕೇಂದ್ರಗಳನ್ನು ಎಲೆಕ್ಟ್ರಾನಿಕ್‌ ಟೋಲ್‌ ಕೇಂದ್ರಗಳಾಗಿ ಪರಿವರ್ತಿಸಲಾಗುವುದು. ಟೋಲ್‌ ಸೆಂಟರ್‌ಗಳನ್ನು ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಕ್ಕೆ ಪ್ರತಿ ಟೋಲ್‌ ಸೆಂಟರ್‌ಗೆ 20 ಲಕ್ಷ ರೂ. ವೆಚ್ಚವಾಗುವ ಅಂದಾಜಿದ್ದು ಈ ಪೈಕಿ ಶೇ.50ರಷ್ಟನ್ನು ಕೇಂದ್ರ ಭರಿಸಲಿದೆ. ಟೋಲ್‌ ಸೆಂಟರ್‌ ನಿರ್ವಹಣೆಗೂ ಶೇ.80ರಷ್ಟು ಖರ್ಚನ್ನು ಕೇಂದ್ರ ಕೊಡುತ್ತದೆ.
 • 2020ರ ಏಪ್ರಿಲ್‌ 1ರಿಂದಲೇ ದೇಶದಲ್ಲಿಏಕರೂಪ ಟೋಲ್‌ ಶುಲ್ಕ ಸಂಗ್ರಹ ವ್ಯವಸ್ಥೆ ಬರಲಿದೆ. ”ಹೊಸ ಆರ್ಥಿಕ ವರ್ಷದಿಂದ ದೇಶಾದ್ಯಂತ ಏಕರೂಪ ಟೋಲ್‌ ಶುಲ್ಕ ಸಂಗ್ರಹ ವ್ಯವಸ್ಥೆ ಜಾರಿಯಾಗಲಿದೆ.

ಆಟೊಮ್ಯಾಟಿಕ್‌ ಟೋಲ್‌ ಸೆಂಟರ್‌ ಪ್ರಯೋಜನಗಳು :

 • ”ಆಟೊಮ್ಯಾಟಿಕ್‌ ಟೋಲ್‌ ಸೆಂಟರ್‌ನಿಂದ ಹಲವು ಅನುಕೂಲವಿದೆ. ವಾಹನಗಳು ಸಾಲು ಹಚ್ಚಿ ಕಾಯುವುದು ನಿಲ್ಲಲಿದೆ. ಇಂಧನ ಉಳಿತಾಯವಾಗಲಿದೆ. ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ. ನೋಂದಣಿಯಾಗದ, ತೆರಿಗೆ ಹಾಗೂ ವಿಮಾ ಕಂತು ಪಾವತಿಸದ ವಾಹನಗಳು ಬಂದರೆ ಸುಲಭವಾಗಿ ಪತ್ತೆ ಹಚ್ಚಬಹುದು.
 • ದೇಶದ್ರೋಹಿಗಳು, ಗಂಭೀರ ಅಪರಾಧ ಮಾಡಿದವರು ವಾಹನ ಚಲಾಯಿಸಿಕೊಂಡು ಬಂದರೆ ಮುಖ ಚೆಹರೆ ಆಧರಿಸಿ ವಶ ಪಡೆಯಲು ಅನುಕೂಲವಾಗಲಿದೆ. ಜತೆಗೆ ಟೋಲ್‌ ಶುಲ್ಕ ಸಂಗ್ರಹದಲ್ಲಿನ ಸೋರಿಕೆಗೂ ಬ್ರೇಕ್‌ ಬೀಳಲಿದೆ.

ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಕೊರತೆ!

ಸುದ್ಧಿಯಲ್ಲಿ ಏಕಿದೆ ?

  ಆದರೆ, ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಕೊರತೆ ಕಾಡುತ್ತಿದ್ದು,ಇತ್ತೀಚಿನ ವರ್ಷಗಳಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ ಪೂರ್ಣ ಸಂಖ್ಯೆಯ ಜಡ್ಜ್‌ಗಳನ್ನು ಹೊಂದಿದೆ. ಬಾಕಿ ಉಳಿಯುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಕಾನೂನು ಸಚಿವಾಲಯವೇ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ಈ ಮಾಹಿತಿ ಬಹಿರಂಗಗೊಂಡಿದೆ.

ಪ್ರಮುಖ ಅಂಕಿ-ಅಂಶಗಳು

 • ಹೈಕೋರ್ಟ್‌ಗಳಲ್ಲಿಹಾಲಿ ಕಾರ್ಯನಿರ್ವಹಿಸುತ್ತಿರುವ ಜಡ್ಜ್‌ಗಳು- 659
 • ಸುಪ್ರೀಂ ಕೋರ್ಟ್‌ಗೆ ಮಂಜೂರಾಗಿರುವ ಜಡ್ಜ್‌ಗಳ ಸಂಖ್ಯೆ- 35
 • ಹಾಲಿ ಕಾರ್ಯನಿರ್ವಹಿಸುತ್ತಿರುವ ಸುಪ್ರೀಂ ಕೋರ್ಟ್‌ ಜಡ್ಜ್‌ಗಳು- 35
 • ದೇಶದ 25 ಹೈಕೋರ್ಟ್‌ಗಳಲ್ಲಿಮಂಜೂರಾಗಿರುವ ಜಡ್ಜ್‌ಗಳ ಸಂಖ್ಯೆ- 1,079
 • 2019ರ ಅ.1ರ ಮಾಹಿತಿಯಂತೆ ಹೈಕೋರ್ಟ್‌ಗಳಲ್ಲಿಖಾಲಿ ಇರುವ ಜಡ್ಜ್‌ ಹುದ್ದೆಗಳು- 420
 • ಹೈಕೋರ್ಟ್‌ಗಳಲ್ಲಿವಿಚಾರಣೆ ಹಂತದಲ್ಲಿರುವ ಪ್ರಕರಣಗಳು- 43,00,000

ಕೊರತೆ ಹೆಚ್ಚಳಕ್ಕೆ ಕಾರಣಗಳು

 • ನಿವೃತ್ತಿ
 • ರಾಜೀನಾಮೆ
 • ಸುಪ್ರೀಂ ಕೋರ್ಟ್‌ ಜಡ್ಜ್‌ಗಳಾಗಿ ಬಡ್ತಿ
 • ಹೈಕೋರ್ಟ್‌ ಜಡ್ಜ್‌ ಹುದ್ದೆಗಳ ಸಂಖ್ಯೆ ಹೆಚ್ಚಳ

ನೇಮಕ ಪ್ರಕ್ರಿಯೆ ಹೇಗೆ?

 • ಹೈಕೋರ್ಟ್‌ ಕೊಲಿಜಿಯಂಗಳು ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ರವಾನಿಸುತ್ತದೆ. ಸಚಿವಾಲಯವು ಗುಪ್ತಚರ ಇಲಾಖೆ ಮೂಲಕ ಅಭ್ಯರ್ಥಿಗಳ ಹಿನ್ನೆಲೆ ಪರಿಶೀಲಿಸಿ, ಅದನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂಗೆ ರವಾನಿಸುತ್ತದೆ. ಸುಪ್ರೀಂ ಕೋರ್ಟ್‌ ಕೊಲಿಜಿಯಂ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ.

ಉತ್ತಮ ಶಿಕ್ಷಣ ಪಡೆದ ತಾಯಂದಿರಿಂದ ಮಕ್ಕಳಿಗೆ ಪೌಷ್ಟಿಕ ಆಹಾರ

ಸುದ್ಧಿಯಲ್ಲಿ ಏಕಿದೆ ? 

ಮಕ್ಕಳಲ್ಲಿ ಪೌಷ್ಟಿಕ ಆಹಾರದ ಕೊರತೆ ಕ್ರಮೇಣ ಕಡಿಮೆಯಾಗಿ, ಉತ್ತಮ ಪೌಷ್ಠಿಕ ಆಹಾರ ದೊರೆಯುತ್ತಿದೆ ಎಂಬುದು ಸಮೀಕ್ಷೆಯಿಂದ ಪತ್ತೆಯಾಗಿದೆ.

ವಿವರಣೆ:

 • ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ಯಾನ್​ ಇಂಡಿಯಾ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ಮಕ್ಕಳಿಗೆ ಉತ್ತಮ ಪೌಷ್ಠಿಕ ಆಹಾರ ದೊರೆಯುತ್ತಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಉತ್ತಮ ಶಿಕ್ಷಣ ಪಡೆದಿರುವ ತಾಯಂದಿರು ಮಕ್ಕಳಿಗೆ ಉತ್ತಮ ಪೌಷ್ಟಿಕ ಆಹಾರ ನೀಡಿ ಪೋಷಣೆ ಮಾಡುತ್ತಿದ್ದಾರೆ ಎಂಬ ಅಂಶಕೂಡ ಪತ್ತೆಯಾಗಿದೆ.
 • ಸಿಎನ್‌ಎನ್‌ಎಸ್ ಅಧ್ಯಯನದ ಮಾಹಿತಿ ಪ್ರಕಾರ ಹೆಚ್ಚಿನ ಶಿಕ್ಷಣ ಪಡೆದ ತಾಯಂದಿರಿಂದ ಮಕ್ಕಳು ಉತ್ತಮ ಆಹಾರ ಪಡೆದಿದ್ದಾರೆ. ಶೇ. 4 ರಷ್ಟು ಶಾಲಾ ಶಿಕ್ಷಣವಿಲ್ಲದ ತಾಯಂದಿರ ಮಕ್ಕಳು ಉತ್ತಮ ಆಹಾರ ಪಡೆದರೆ, ಶೇ.31.8 ರಷ್ಟು ದ್ವಿತೀಯ ಪಿಯುಸಿವರೆಗೆ ಶಿಕ್ಷಣ ಪಡೆದಿರುವ ತಾಯಂದಿರ ಮಕ್ಕಳು ಉತ್ತಮ ಆಹಾರ ಪಡೆದಿರುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
 • ಸಮಗ್ರ ರಾಷ್ಟ್ರೀಯ ಪೌಷ್ಠಿಕಾಂಶ ಸಮೀಕ್ಷೆ (ಸಿಎನ್‌ಎಸ್‌ಎಸ್) 2016 ಮತ್ತು 2018 ರ ನಡುವೆ 2 ಲಕ್ಷ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿತ್ತು. ಆಹಾರ ಸೇವನೆ, ಆಂಥ್ರೊಪೊಮೆಟ್ರಿಕ್ ಡೇಟಾ, ಸೂಕ್ಷ್ಮ ಪೋಷಕಾಂಶಗಳು, ರಕ್ತಹೀನತೆ, ಕಬ್ಬಿಣದ ಕೊರತೆ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳ ಗುರುತುಗಳನ್ನು ವಿಶ್ಲೇಷಣೆಗೆ ಒಳಪಡಿಸಿತು.

ಅಪೌಷ್ಟಿಕತೆಯನ್ನು ನಿಗ್ರಹಿಸಲು ಭಾರತ ಸರ್ಕಾರ ಕೈಗೊಂಡ ಕ್ರಮಗಳು:

 • 2017-18ರಲ್ಲಿ ಪ್ರಾರಂಭಿಸಲಾದ ಪೋಷಣ್ ಅಭಿಯಾನ್,ವಿವಿಧ ಕಾರ್ಯಕ್ರಮಗಳ ನಡುವೆ ಸಿನರ್ಜಿ ಮತ್ತು ಒಮ್ಮುಖದ ಮೂಲಕ ಸ್ಟಂಟಿಂಗ್, ಪೌಷ್ಠಿಕಾಂಶ, ರಕ್ತಹೀನತೆ ಮತ್ತು ಕಡಿಮೆ ಜನನ ತೂಕದ ಶಿಶುಗಳನ್ನು  ಕಡಿಮೆ ಮಾಡುವ ಗುರಿ ಹೊಂದಿದೆ, ಉತ್ತಮ ಮೇಲ್ವಿಚಾರಣೆ ಮತ್ತು ಸಮುದಾಯ ಸಜ್ಜುಗೊಳಿಸುತ್ತದೆ .
 • ಪ್ರಧಾನ್ ಮಂತ್ರಿ ಮಾತೃ ವಂದನ ಯೋಜನೆ (ಪಿಎಂಎಂವಿವೈ) ಅಡಿಯಲ್ಲಿ ಗರ್ಭಿಣಿಯರ ಹೆರಿಗೆಗೆ ಉತ್ತಮ ಸೌಲಭ್ಯಗಳನ್ನು ಪಡೆದುಕೊಳ್ಳಲು ರೂ .6,000 ಅನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
 • ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ), 2013, ಅದರ ಸಂಬಂಧಿತ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಹೆಚ್ಚು ದುರ್ಬಲರಿಗೆ ಆಹಾರ ಮತ್ತು ಪೌಷ್ಠಿಕಾಂಶದ ಸುರಕ್ಷತೆಯನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆ, ಆಹಾರದ ಪ್ರವೇಶವನ್ನು ಕಾನೂನುಬದ್ಧ ಹಕ್ಕಾಗಿದೆ.
 • ಮಿಡ್-ಡೇ ಮೀಲ್ (ಎಂಡಿಎಂ) ಯೋಜನೆಯು ಶಾಲಾ ಮಕ್ಕಳಲ್ಲಿ ಪೌಷ್ಠಿಕಾಂಶದ ಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ, ಇದು ಶಾಲೆಗಳಲ್ಲಿ ದಾಖಲಾತಿ, ಧಾರಣ ಮತ್ತು ಹಾಜರಾತಿಯ ಮೇಲೆ ನೇರ ಮತ್ತು ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಟಾಕ್ಸಿಬೋಟ್ ಬಳಸಿದ ವಿಶ್ವದ ಮೊದಲ ವಿಮಾನಯಾನ ಸಂಸ್ಥೆ ಎಂಬ ಕೀರ್ತಿಗೆ ಪಾತ್ರವಾದ ಏರ್​ ಇಂಡಿಯಾ

ಸುದ್ಧಿಯಲ್ಲಿ ಏಕಿದೆ ?

ಪ್ರಯಾಣಿಕರಿದ್ದ ಏರ್​ಬಸ್​​ ಎ 320 ವಿಮಾನ ಎಳೆದೊಯ್ಯಲು ಟಾಕ್ಸಿಬೋಟ್​ ಬಳಸಿದ ವಿಶ್ವದ ಮೊದಲ ವಿಮಾನಯಾನ ಸಂಸ್ಥೆ ಎಂಬ ಕೀರ್ತಿಗೆ ಏರ್​ ಇಂಡಿಯಾ ಪಾತ್ರವಾಗಿದೆ.

 ಟಾಕ್ಸಿಬೋಟ್?

 • ಟಾಕ್ಸಿಬೋಟ್​​ ಒಂದು ಮಾದರಿಯ ರೋಬಾಟ್​ ಆಗಿದ್ದು, ವಿಮಾನವನ್ನು ಪಾರ್ಕಿಂಗ್ ಸ್ಥಳದಿಂದ ರನ್​ವೇಗೆ, ರನ್​ವೇಯಿಂದ ಪಾರ್ಕಿಂಗ್ ಸ್ಥಳಕ್ಕೆ ಎಳೆದೊಯ್ಯಲು ಬಳಕೆಯಾಗುತ್ತದೆ. ಮೊದಲಬಾರಿಗೆ ಪ್ರಯಾಣಿಕರಿದ್ದ ಎ 320 ವಿಮಾನ ಎಳೆದೊಯ್ಯಲು ಟಾಕ್ಸಿಬೋಟ್​​ ಬಳಸಲಾಗಿದೆ.
 • ಟಾಕ್ಸಿಬೋಟ್ ಪೈಲಟ್ ನಿಯಂತ್ರಿತ ಅರೆ ರೋಬಾಟ್​​ ಆಗಿದ್ದು, ವಿಮಾನವನ್ನು ಎಳೆದೊಯ್ಯುವ ಟ್ರಾಕ್ಟರ್​​ಗಳ ಲಭ್ಯವಿಲ್ಲದಿದ್ದಾಗ ವಿಮಾನವನ್ನು ಪಾರ್ಕಿಂಗ್ ಸ್ಥಳದಿಂದ ರನ್​ವೇಗೆ ಎಳೆದೊಯ್ಯಲು ಪರ್ಯಾಯವಾಗಿ ಬಳಸಲಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಸ್ವಚ್ಛ ಪರಿಸರ ಕಾಪಾಡಲು ಇದೊಂದು ಮಹತ್ತರ ಹೆಜ್ಜೆ
 • ಟಾಕ್ಸಿಬೋಟ್​​ಗಳು ಅಧಿಕ ಪ್ರಮಾಣದ ಇಂಧನ ಉಳಿಸುತ್ತವೆ. ರನ್​ವೇ ಪ್ರವೇಶಿಸಿದಾಗ ಮಾತ್ರ ವಿಮಾನದ ಇಗ್ನಿಷಿನ್ ಚಾಲನೆಗೊಳ್ಳುತ್ತದೆ. ಟಾಕ್ಸಿಬೋಟ್​ಗಳನ್ನು ಹಾರಾಟ ನಡೆಸಲು ಸಿದ್ದವಿರುವ ವಿಮಾನಗಳಿಗೆ ಮಾತ್ರ ಬಳಸಲಾಗುತ್ತದೆ. ಸಾಮಾನ್ಯವಾಗಿ ವಿಮಾನಗಳನ್ನು ಎಳೆದೊಯ್ಯಲು ಬಳಸುವ ಟ್ರಾಕ್ಟರ್​ಗಳಿಗಿಂತ ಶೇ.85 ಇಂಧನ ಕಡಿಮೆ ಬಳಸುತ್ತವೆ ಎಂದು ಏರ್​​ ಇಂಡಿಯಾ ವಕ್ತಾರರು ಹೇಳಿದ್ದಾರೆ.

5 ಟ್ರಿಲಿಯನ್‌ ಆರ್ಥಿಕತೆಗೆ ಪನಗಾರಿಯಾ ತ್ರಿವಳಿ ಸೂತ್ರ

ಸುದ್ಧಿಯಲ್ಲಿ ಏಕಿದೆ ?

ಭಾರತ 2024ರ ವೇಳೆಗೆ 5 ಲಕ್ಷ ಕೋಟಿ ಡಾಲರ್‌ ಮೌಲ್ಯದ ಬೃಹತ್‌ ಆರ್ಥಿಕತೆಯಾಗಿ ಹೊರಹೊಮ್ಮಬೇಕು ಎಂಬ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ. ಇದನ್ನು ಸಾಧಿಸಲು ಮೂರು ಸೂತ್ರಗಳ ಸಲಹೆಯನ್ನು ನೀಡಿದ್ದಾರೆ ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್‌ ಪನಗಾರಿಯಾ.

ತ್ರಿಸೂತ್ರಗಳು:

ಆದಾಯ ತೆರಿಗೆ ಕಡಿತಗೊಳಿಸಿ

 • ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕಾರ್ಪೊರೇಟ್‌ ತೆರಿಗೆಯನ್ನು ಶೇ. 35ರಿಂದ ಶೇ. 2ಕ್ಕೆ ಇಳಿಸಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇದರೊಂದಿಗೆ ಜಪಾನ್‌, ದಕ್ಷಿಣ ಕೊರಿಯಾ, ಚೀನಾ, ಇಂಡೊನೇಷ್ಯಾ ಇತ್ಯಾದಿ ದೇಶಗಳಲ್ಲಿನ ಕಾರ್ಪೊರೇಟ್‌ ತೆರಿಗೆಗೆ ಹೋಲಿಸಿದರೆ ಸಮಾನ ಅಥವಾ ಕಡಿಮೆ ಮಟ್ಟದಲ್ಲಿದೆ.
 • ಇದು ಹೂಡಿಕೆದಾರರನ್ನು ಆಕರ್ಷಿಸಲಿದೆ. ಉದ್ಯಮಗಳಿಗೆ ವಿನಾಯಿತಿಗಳನ್ನು ರದ್ದುಪಡಿಸುವ ಮೂಲಕ ಲಂಚದ ಮೂಲಗಳಿಗೆ ಕಡಿವಾಣ ಬಿದ್ದಿದೆ. ಇದೇ ಮಾದರಿಯಲ್ಲಿ ವೈಯಕ್ತಿಕ ಆದಾಯ ತೆರಿಗೆಯನ್ನೂ ಇಳಿಸಬೇಕು.

ಕಾರ್ಮಿಕ ಸಂಪನ್ಮೂಲದ ಬಳಕೆಗೆ ನೀತಿ ಸುಧಾರಣೆ

 • ಭಾರತದ ಉತ್ಪಾದನಾ ವಲಯದಲ್ಲಿ ಬಂಡವಾಳದ ಸಮಸ್ಯೆ ಇರಬಹುದು. ಆದರೆ ಕಾರ್ಮಿಕ ಸಂಪನ್ಮೂಲಕ್ಕೆ ಕೊರತೆ ಇಲ್ಲ. ಕಾರ್ಪೊರೇಟ್‌ ಕಂಪನಿಗಳು ಭಾರಿ ವೇತನದ ಸಮಸ್ಯೆ ಎದುರಿಸಿದ ನಿದರ್ಶನ ಇಲ್ಲ. ಹೀಗಿದ್ದರೂ, ಕಂಪನಿಗಳು ಹೆಚ್ಚು ಬಂಡವಾಳ ಬೇಡುವ ಉದ್ದಿಮೆ, ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುತ್ತವೆ.
 • ಉದಾಹರಣೆಗೆ ಆಟೊಮೊಬೈಲ್‌ ವಲಯದಲ್ಲಿ ಮ್ಯಾನೇಜಿಂಗ್‌ ಡೈರೆಕ್ಟರ್‌ನಿಂದ ವಾಚ್‌ಮೆನ್‌ ತನಕ ವೇತನ ವೆಚ್ಚ ಒಟ್ಟು ವೆಚ್ಚಕ್ಕೆ ಹೋಲಿಸಿದರೆ ಶೇ. 5ಕ್ಕೂ ಕಡಿಮೆ. ಆದ್ದರಿಂದ ಕಾರ್ಮಿಕ ಕಾನೂನುಗಳನ್ನು ಸುಧಾರಿಸುವ ಮೂಲಕ ಕಾರ್ಪೊರೇಟ್‌ ಕಂಪನಿಗಳ ಬಂಡವಾಳದ ಸಮಸ್ಯೆಗೆ ಪರಿಹಾರವಾಗಿ ಕಾರ್ಮಿಕ ಸಂಪನ್ಮೂಲದ ಬಳಕೆಯನ್ನು ವಿಸ್ತರಿಸಲು ಸಹಕರಿಸಬಹುದು. ಇದರಿಂದ ಉದ್ಯೋಗ ಸೃಷ್ಟಿಯೂ ಆಗುತ್ತದೆ.

ಗುಜರಾತ್‌ ಮಾದರಿ ಉಪಯುಕ್ತ

 • ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೆ ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗ ಜಾರಿಗೊಳಿಸಿದ್ದ ಮಾದರಿಯನ್ನು ರಾಷ್ಟ್ರವ್ಯಾಪಿ ಅನುಸರಿಸಬಹುದು. 2004ರಲ್ಲಿ ಗುಜರಾತ್‌ ಸರಕಾರ ವಿಶೇಷ ವಿತ್ತ ವಲಯಗಳಲ್ಲಿ ಕಂಪನಿಗಳಿಗೆ ನಿರ್ದಿಷ್ಟ ಷರತ್ತುಗಳ ಮೇರೆಗೆ ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸುವ ಅಧಿಕಾರ ಕೊಟ್ಟಿತ್ತು. ಅಂದರೆ ಉದ್ಯೋಗಿ ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ ತಲಾ 45 ದಿನಗಳ ಲೆಕ್ಕದ ವೇತನವನ್ನು ಕೊಟ್ಟು ವಜಾ ಮಾಡಬಹುದಿತ್ತು.

ಸಾರ್ವಜನಿಕ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆತ

 • ಸರಕಾರ ಹೆದ್ದಾರಿ, ಏರ್‌ಪೋರ್ಟ್‌, ಬಂದರು, ರೈಲ್ವೆ ನಿಲ್ದಾಣ ಇತ್ಯಾದಿ ಸಾರ್ವಜನಿಕ ಆಸ್ತಿಗಳ ವಿಕ್ರಯ, ಬಳಕೆಯಲ್ಲಿ ಇಲ್ಲದ ಸರಕಾರಿ ಆಸ್ತಿಗಳ ಮಾರಾಟ, ಬಂಡವಾಳ ಹಿಂತೆಗೆತ, ಖಾಸಗೀಕರಣ ಮೂಲಕ ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳಬಹುದು.

  
KPSC ಪರೀಕ್ಷಾರ್ಥಿಗಳಿಗಾಗಿ ವಿಶೇಷ ತರಗತಿಗಳು.
ಲೈವ್ ಸಂವಾದಾತ್ಮಕ ( interactive ) ತರಗತಿಗಳು
21-11-2019 ಮತ್ತು 24-11-2019 
7.00 PM ನಿಂದ 9.00 PM ವರೆಗೆ 

ಇಂದೇ ನೋಂದಾಯಿಸಿರಿ 
Register Now!!
close-link