You cannot copy content of this page
+91 94482 26377
Koramangala, Bengaluru

ಪ್ರಚಲಿತ ವಿದ್ಯಮಾನ - ಅಕ್ಟೋಬರ್ 14

14 Oct 2019

ಪ್ರಚಲಿತ ವಿದ್ಯಮಾನ – ಅಕ್ಟೋಬರ್ 14

ಅರ್ಥಶಾಸ್ತ್ರಜ್ಞ,JNU ವಿದ್ಯಾರ್ಥಿ ಅಭಿಜಿತ್ ಬ್ಯಾನರ್ಜಿಗೆ ನೊಬೆಲ್ ಪ್ರಶಸ್ತಿ!

ಸುದ್ದಿಯಲ್ಲಿ ಏಕಿದೆ?

2019ನೇ ಸಾಲಿನ ಅರ್ಥಶಾಸ್ತ್ರಜ್ಞ ಕ್ಷೇತ್ರದಲ್ಲಿನ ಸಾಧನೆಗೆ ಭಾರತೀಯ ಮೂಲದ ಅಮೆರಿಕ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸೇರಿ ಮೂವರು ಅರ್ಥಶಾಸ್ತ್ರಜ್ಞರು ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿವರಣೆ:

 • ಭಾರತೀಯ ಮೂಲದ ಅಮೆರಿಕ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಫೆಂಚ್-ಅಮೆರಿಕನ್ ಅರ್ಥಶಾಸ್ತ್ರಜ್ಞ ಎಸ್ತಾರ್ ಡೂಪ್ಲೋ ಮತ್ತು Iಅಮೆರಿಕದ ಮೈಕೆಲ್ ಕ್ರೆಮರ್ ಅವರಿಗೆ ಪ್ರಶಸ್ತಿ ದೊರೆತಿದೆ.
 • ಜಾಗತಿಕ ಬಡತನ ನಿವಾರಣೆಗೆ ಕೈಗೊಂಡ ಪ್ರಾಯೋಗಿಕ ಅಧ್ಯಯನ ಪರಿಗಣಿಸಿ, ಮೂವರಿಗೆ ಸ್ವಿಡೀಶ್ ಅಕಾಡೆಮಿ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇನ್ನು ನೊಬೆಲ್ ಪ್ರಶಸ್ತಿಯ ಮೊತ್ತವನ್ನು ಮೂವರು ಹಂಚಿಕೊಳ್ಳಲಿದ್ದಾರೆ.

ಅಭಿಜಿತ್ ಬ್ಯಾನರ್ಜಿ ಅವರ ಹಿನ್ನೆಲೆ:

58 ವರ್ಷದ ಅಭಿಜಿತ್ ಬ್ಯಾನರ್ಜಿ ಕೋಲ್ಕತ್ತಾ ಮೂಲದವರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪಡೆದಿದ್ದರು. ನಂತರ ಅಮೆರಿಕದ ಎಂಐಟಿಯಲ್ಲಿ ಅರ್ಥಶಾಸ್ತ್ರಜ್ಞ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೊಬ್ಬ ಪ್ರಶಸ್ತಿ ಪುರಸ್ಕೃತ 57 ವರ್ಷದ ಎಸ್ತಾರ್ ಡೂಪ್ಲೋ ಎಂಐಟಿಯಲ್ಲಿ ಪಿ.ಎಚ್.ಡಿ ಪಡೆದಿದ್ದು, ಅರ್ಥಶಾಸ್ತ್ರ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು 55 ವರ್ಷದ ಮೈಕೆಲ್ ಕ್ರೆಮರ್ ಕೂಡ ಎಂಐಟಿಯಲ್ಲಿ ಪಿ.ಎಚ್.ಡಿ ಪಡೆದಿದ್ದು, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 ಡಿ.10 ರವರೆಗೆ ಸೆಕ್ಷನ್ 144 ಜಾರಿ,ಅಂತಿಮ ಘಟ್ಟದಲ್ಲಿ ಅಯೋಧ್ಯೆ ತೀರ್ಪು!

ಸುದ್ದಿಯಲ್ಲಿ ಏಕಿದೆ?

ರಾಜಕೀಯವಾಗಿ ಸೂಕ್ಷ್ಮವಾಗಿರುವ ದಶಕಗಳ ಹಳೆಯ ಅಯೋಧ್ಯೆ ಪ್ರಕರಣದ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಅಂತಿಮ ಘಟ್ಟಕ್ಕೆ ತಲುಪಲಿದೆ. ಅಂತಿಮ ವಿಚಾರಣೆ ಮುಗಿಸಲು ಸುಪ್ರೀಂ ಕೋರ್ಟ್‌ ವಿಧಿಸಿಕೊಂಡಿರುವ ಆಕ್ಟೋಬರ್‌ 17ರ ಗಡುವು ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಕುತೂಹಲ ಮನೆ ಮಾಡಿದೆ.

ವಿವರಣೆ:

 • ವಿವಾದಿತ 2.77 ಎಕರೆ ಜಾಗವನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ ಮತ್ತು ರಾಮ್‌ ಲಲ್ಲಾ ನಡುವೆ ಸಮಾನವಾಗಿ ಹಂಚಬೇಕೆಂದು 2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ 14 ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು.
 •  ಆಗಸ್ಟ್‌ 6ರಿಂದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠ, ಪ್ರಕರಣವನ್ನು ನಿತ್ಯ ವಿಚಾರಣೆ ನಡೆಸುತ್ತಿದೆ. ಸೋಮವಾರ 38ನೇ ದಿನದ ವಿಚಾರಣೆ ನಡೆಯಲಿದ್ದು, ಗುರುವಾರ ಅದು ಅಂತ್ಯಗೊಳ್ಳುವ ನಿರೀಕ್ಷೆಯಿದೆ.

ಪರಿಣಾಮಗಳು:

 •  ಕಕ್ಷಿದಾರರಲ್ಲಿಒಂದಾಗಿರುವ ಅಖಿಲ ಭಾರತ ಮುಸ್ಲಿಂ ಕಾನೂನು ಮಂಡಳಿಯು ಸಂಧಾನ ಪ್ರಸ್ತಾಪವನ್ನು ತಿರಸ್ಕರಿಸಿ, ಕೋರ್ಟ್‌ ತೀರ್ಪಿಗೆ ಬದ್ಧವಾಗಿರಲು ನಿರ್ಣಯ ಕೈಗೊಂಡಿದೆ. ವಿವಾದಿತ ಜಾಗವನ್ನು ಹಿಂದೂಗಳಿಗೆ ಒಪ್ಪಿಸುವಂತೆ ಮುಸ್ಲಿಂ ಸಮುದಾಯದ ಹಲವು ಬುದ್ಧಿಜೀವಿಗಳು ಮಾಡಿದ ಮನವಿಯನ್ನು ಮಂಡಳಿ ಶನಿವಾರ ನಡೆದ ಸಭೆಯಲ್ಲಿತಿರಸ್ಕರಿಸಿದೆ.
 • ಇನ್ನೊಂದೆಡೆ ರಾಮ ಜನ್ಮ ಭೂಮಿ ಬಗ್ಗೆ ಅಂತಿಮ ತೀರ್ಪು ಬರಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಡಿ.10 ವರೆಗೆ ಅಯೋಧ್ಯೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದೆ.
 • ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂಜು ಕುಮಾರ್ ಝಾ , ಜನರ ಸುರಕ್ಷತೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡ್ರೋಣ್ ಬಳಕೆ, ಚಿತ್ರೀಕರಣ ಮಾಡುವುದು, ಪಟಾಕಿ ಮಾರಾಟ, ಖರೀದಿ, ಮಾನವ ರಹಿತ ವೈಮಾನಿಕ ವಾಹನಗಳನ್ನು ದಂಡಾಧಿಕಾರಿ ಅನುಮತಿ ಇಲ್ಲದೇ ಬಳಸುವುದಕ್ಕೆ ಕೂಡ ನಿಷೇಧ ಹೇರಲಾಗಿದೆ. ಜೊತೆಗೆ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯಲು ಕೂಡ ನಿರ್ಬಂಧಿಸಲಾಗಿದೆ. 

ಪಿಎಂ ಮೋದಿ ಆಕ್ಯುಪ್ರೆಷರ್‌ ರೋಲರ್‌ ಬಳಸುತ್ತಿರೋದೇಕೆ? 

ಸುದ್ದಿಯಲ್ಲಿ ಏಕಿದೆ?

ತಮಿಳುನಾಡಿನ ಮಹಾಬಲಿಪುರಂ ಸಾಗರ ತೀರದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಹೆಕ್ಕುವ ಮೂಲಕ (ಪ್ಲಾಗಿಂಗ್‌) ಪ್ರಧಾನಿ ಮೋದಿ ದೇಶದ ಜನರ ಮೆಚ್ಚುಗೆಗೆ ಪಾತ್ರವಾಗಿದ್ದರು. ಆ ವೇಳೆಯಲ್ಲಿಪ್ರಧಾನಿ ಮೋದಿ ಅವರ ಕೈಯಲ್ಲಿದ್ದ ವಿಚಿತ್ರ ವಸ್ತುವೊಂದು ಕುತೂಹಲ ಮೂಡಿಸಿತ್ತು. ಪ್ರಧಾನಿ ಆ ವಸ್ತುವಿನ ಬಗ್ಗೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಭಾನುವಾರ ಮಾಹಿತಿ ಹಂಚಿಕೊಂಡಿದ್ದಾರೆ.

ಹಿನ್ನೆಲೆ:

”ಮಹಾಬಲಿಪುರಂ ಬೀಚ್‌ನಲ್ಲಿಪ್ಲಾಗಿಂಗ್‌ ಮಾಡುವಾಗ ನನ್ನ ಕೈಯ್ಯಲ್ಲಿದ್ದ ವಸ್ತು ಏನೆಂದು ಬಹಳಷ್ಟು ಮಂದಿ ಎರಡು ದಿನದಿಂದ ಪ್ರಶ್ನಿಸುತ್ತಿದ್ದಾರೆ. ಅದು ಆಕ್ಯುಪ್ರಷರ್‌ ರೋಲರ್‌. ನಾನು ಸದಾ ಅದನ್ನು ಬಳಸುತ್ತೇನೆ. ಅದು ನನಗೆ ತುಂಬಾ ಉಪಯುಕ್ತವಾಗಿದೆ,”  ಎಂದು ಮೋದಿ ಟ್ವೀಟಿಸಿದ್ದಾರೆ. ಬೀಚ್‌ನಲ್ಲಿ ತಾವು ಆಕ್ಯುಪ್ರೆಷರ್‌ ರೋಲರ್‌ ಹಿಡಿದಿರುವ ಚಿತ್ರವನ್ನೂ ಮೋದಿ ಅವರು ಪೋಸ್ಟ್‌ ಮಾಡಿದ್ದಾರೆ.

ಆಕ್ಯುಪ್ರಷರ್‌:

 • ಆಕ್ಯುಪ್ರಷರ್‌ ಥೆರಪಿ ಎಂಬುದು ಚೀನಿ ವೈದ್ಯಪದ್ಧತಿ. ಹಲಸಿನ ಹಣ್ಣಿನ ಮೇಲ್ಭಾಗದ ತೊಗಟೆಯಂತೆ ಮೊನಚಾದ ರಚನೆಗಳನ್ನು ಹೊಂದಿರುವ ಆಕ್ಯುಪ್ರೆಷರ್‌ ರೋಲರ್‌ (ದಂಡ)ನ್ನು ಎರಡೂ ಅಂಗೈಗಳ ನಡುವೆ ಹಿಡಿದು ಹೊರಳಿಸುವುದರಿಂದ ದೇಹದ ರಕ್ತಪರಿಚಲನೆ ಸುಗಮವಾಗಿಸುವುದರ ಜೊತೆಗೆ ಒತ್ತಡ ಮತ್ತು ಉದ್ವೇಗವನ್ನು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.
 • ಕೈ ಮತ್ತು ಕಾಲುಗಳಲ್ಲಿನ ಸಾವಿರಾರು ನರಗಳನ್ನು ಉತ್ತೇಜಿಸುವ ಮೂಲಕ ದೇಹದಲ್ಲಿನ ರಕ್ತದ ಹರಿವು ಹೆಚ್ಚಾಗುವಂತೆ ಇದು ನೆರವಾಗುತ್ತದೆ ಎಂದೂ ಹೇಳಲಾಗುತ್ತದೆ.

  ಮೋದಿ ಬರೆದ ಕವನ!

 • ಮಹಾಬಲಿಪುರಂ ಬೀಚ್‌ನಲ್ಲಿ ಮಾರ್ನಿಂಗ್‌ ವಾಕ್‌ ಮಾಡಿದ ಮೋದಿ ಅವರು ಸಮುದ್ರದ ಬಗ್ಗೆ ಭಾವುಕರಾಗಿ ಕವನ ಬರೆದಿದ್ದಾರೆ.
 • ಎಂಟು ಪ್ಯಾರಾಗಳಲ್ಲಿರುವ ಮತ್ತು ಕೊನೆಯಲ್ಲಿ ತಮ್ಮ ಸಹಿಯನ್ನು ಒಳಗೊಂಡ ಹಿಂದಿ ಕವನವನ್ನು ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.
 • ಸೂರ್ಯ, ಅಲೆಗಳು ಮತ್ತು ಅದರ ನೋವಿನ ಸಂಬಂಧದ ಬಗ್ಗೆ ಕವನದಲ್ಲಿ ಅವರು ಭಾವುಕವಾಗಿ ಬರೆದಿದ್ದಾರೆ. ”ಸಮುದ್ರದೊಂದಿಗೆ ನಡೆದ ಈ ಸಂಭಾಷಣೆಯು ನನ್ನ ಭಾವನೆಗಳ ಜಗತ್ತನ್ನು ಒಳಗೊಂಡಿದೆ. ಈ ಭಾವನೆಗಳನ್ನು ನಾನು ಕವನದ ರೂಪದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ,” ಎಂದೂ ಪ್ರಧಾನಿ ಬರೆದಿದ್ದಾರೆ.

ಉಗ್ರನಿಗ್ರಹಕ್ಕೆ ನೆರವಾಗಲು ಪಾಕ್‌ಗೆ ಸೇನೆ ಕಳುಹಿಸಲು ರೆಡಿ!: ಇಮ್ರಾನ್‌ಗೆ ರಾಜನಾಥ್‌ ಸಿಂಗ್‌ ಟಾಂಗ್

ಸುದ್ದಿಯಲ್ಲಿ ಏಕಿದೆ?

ಉಗ್ರ ನಿಗ್ರಹದ ವಿಚಾರದಲ್ಲಿ ಪಾಕಿಸ್ತಾನ ಗಂಭೀರ ಪ್ರಯತ್ನ ನಡೆಸಿಲ್ಲ ಎಂದು ಆರೋಪಿಸಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ನೆರವಾಗಲು ಭಾರತೀಯ ಸೇನೆಯನ್ನು ಕಳುಹಿಸಲು ಸಿದ್ಧ ಎಂದು ಟಾಂಗ್‌ ನೀಡಿದ್ದಾರೆ.

ಹಿನ್ನೆಲೆ:

ಹರಿಯಾಣದ ಕರ್ನಾಲ್‌ನಲ್ಲಿ ಭಾನುವಾರ ಬಿಜೆಪಿಯ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, ‘‘ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ನಾನೊಂದು ಸಲಹೆ ನೀಡಲು ಇಚ್ಛಿಸುತ್ತೇನೆ. ಉಗ್ರ ನಿಗ್ರಹದ ವಿಚಾರದಲ್ಲಿ ನೀವು ಗಂಭೀರವಾಗಿರುವುದೇ ಆಗಿದ್ದಲ್ಲಿ ನಿಮಗೆ ನೆರವು ನೀಡಲು ನಾವು ಸದಾ ಸಿದ್ಧ. ನೀವು ನಮ್ಮ ಸೇನೆಯ ನೆರವು ಬಯಸಿದರೆ, ನಿಮಗಾಗಿ ನಮ್ಮ ಸೇನೆಯನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುತ್ತೇವೆ,’’ ಎಂದು ಹೇಳಿದರು.

‘‘1947ರಲ್ಲಿ ನೀವು ಭಾರತವನ್ನು ವಿಭಜಿಸಿದಿರಿ. ಆದರೆ 1971ರಲ್ಲಿ ನಿಮ್ಮ ದೇಶವೇ ಎರಡು ಹೋಳಾಯಿತು. ಪರಿಸ್ಥಿತಿ ಬಯಸಿದರೆ ಪಾಕಿಸ್ತಾನವು ಛಿದ್ರಛಿದ್ರವಾಗುವುದನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಾಗದು,’’ ಎಂದು ರಾಜನಾಥ್‌ ಸಿಂಗ್‌ ಎಚ್ಚರಿಸಿದರು. ದೇಶದ್ರೋಹಿಗಳನ್ನು ಮಟ್ಟಹಾಕಲು ಸರಕಾರ ಸಮರ್ಥವಾಗಿದೆ ಎಂದೂ ಇದೇ ವೇಳೆ ತಿಳಿಸಿದರು.

ರಾಷ್ಟ್ರೀಯ ಸಂಸ್ಕೃತ ಮಹೋತ್ಸವ

ಸಂಸ್ಕೃತಿ ಸಚಿವಾಲಯದ ಪ್ರಮುಖ ಮತ್ತು ಪ್ರಧಾನ ಉತ್ಸವ, ರಾಷ್ಟ್ರೀಯ ಸಂಸ್ಕೃತ ಮಹೋತ್ಸವವನ್ನು ಮಧ್ಯಪ್ರದೇಶದ ಜಬಲ್ಪುರದಲ್ಲಿ 2019 ರ ಅಕ್ಟೋಬರ್ 14 ರಂದು ನಡೆಸಲಾಗುವುದು. ಇದು ಏಕ್ ಭಾರತ್ ಶ್ರೇಷ್ಠ ಭಾರತ್ ಉಪಕ್ರಮದ ಒಂದು ಭಾಗವಾಗಿದ್ದು, ಇದು ಅಕ್ಟೋಬರ್ 14, 2019 ಮತ್ತು 21 ಅಕ್ಟೋಬರ್ 2019.

ಉತ್ಸವವು 2015 ರಲ್ಲಿ ಪ್ರಾರಂಭವಾಯಿತು. ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ. ಇದು ಶಾಸ್ತ್ರೀಯ ಮತ್ತು ಸಮಕಾಲೀನ ಕರಕುಶಲ ವಸ್ತುಗಳು, ಚಿತ್ರಕಲೆ, ಕಲೆ-ಜಾನಪದ, ಶಿಲ್ಪಕಲೆ ಇತ್ಯಾದಿಗಳನ್ನು ಒಳಗೊಂಡಿದೆ. ಇದು 22 ರಾಜ್ಯಗಳಿಂದ ಜಾನಪದ ಕಲಾ ಪ್ರಕಾರಗಳ ಸಂಯೋಜನೆಯನ್ನು ಒಳಗೊಳ್ಳುತ್ತದೆ ಮತ್ತು ಉದಯೋನ್ಮುಖ ಕೌಶಲ್ಯವನ್ನು ಅನುಭವಿಸಲು ಉತ್ತಮ ಅವಕಾಶವನ್ನು ನೀಡುತ್ತದೆ.

ಮಹೋತ್ಸವದ ಮಹತ್ವ

ವೈವಿಧ್ಯಮಯ ಸಂಸ್ಕೃತಿಯ ಜನರ ನಡುವೆ ಪರಸ್ಪರ ತಿಳುವಳಿಕೆ ಮತ್ತು ಬಂಧವನ್ನು ಹೆಚ್ಚಿಸಲು ವಿವಿಧ ರಾಜ್ಯಗಳು ಮತ್ತು ಯುಟಿಗಳ ನಿಶ್ಚಿತಾರ್ಥವನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಇದು ಭಾರತದ ಬಲವಾದ ಐಕ್ಯತೆ ಮತ್ತು ಸಮಗ್ರತೆಯನ್ನು ಭದ್ರಪಡಿಸುತ್ತದೆ.

ಏಕ್ ಭಾರತ್ ಶ್ರೇಷ್ಠ ಭಾರತ್

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 140 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಇದನ್ನು 2015 ರ ಅಕ್ಟೋಬರ್‌ನಲ್ಲಿ ಪ್ರಧಾನಿ ಮೋದಿ ಘೋಷಿಸಿದರು. ಕೆಳಗಿನವುಗಳು ಉಪಕ್ರಮದ ಮುಖ್ಯ ಉದ್ದೇಶಗಳಾಗಿವೆ

 • ರಾಷ್ಟ್ರದ ಏಕತೆ ಮತ್ತು ವೈವಿಧ್ಯತೆಯನ್ನು ಆಚರಿಸಲು
 • ರಾಷ್ಟ್ರೀಯ ಏಕೀಕರಣದ ಮನೋಭಾವವನ್ನು ಉತ್ತೇಜಿಸುವುದು
 • ದೇಶದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ತೋರಿಸಲು
 • ದೀರ್ಘಕಾಲೀನ ನಿಶ್ಚಿತಾರ್ಥಗಳನ್ನು ಸ್ಥಾಪಿಸಲು
 • ರಾಜ್ಯಗಳ ನಡುವೆ ಕಲಿಕೆಯನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸುವುದು

ಭಾರತ ಎಡಿಬಿ 190 ಮಿಲಿಯನ್ ಯುಎಸ್ಡಿ ಸಾಲಕ್ಕೆ ಸಹಿ ಹಾಕಿದೆ

ಸುದ್ದಿಯಲ್ಲಿ ಏಕಿದೆ?

ಅಕ್ಟೋಬರ್ 12, 2019 ರಂದು, ರಾಜಸ್ಥಾನ ರಾಜ್ಯದಲ್ಲಿ ರಸ್ತೆ ಸಾರಿಗೆಯನ್ನು ನವೀಕರಿಸಲು ಗೋಯಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಯೊಂದಿಗೆ 190 ಮಿಲಿಯನ್ ಯುಎಸ್ಡಿ ಸಾಲಕ್ಕೆ ಸಹಿ ಹಾಕಿತು. ಯೋಜನೆಯು 754 ಕಿ.ಮೀ ರಾಜ್ಯ ಹೆದ್ದಾರಿಗಳು, ಪ್ರಮುಖ ಜಿಲ್ಲಾ ರಸ್ತೆಗಳನ್ನು ಎರಡು ಪಥಗಳಿಗೆ ನವೀಕರಿಸುವುದು ಒಳಗೊಂಡಿದೆ. ಈ ಯೋಜನೆಯು ರಾಜಸ್ಥಾನದ 14 ಜಿಲ್ಲೆಗಳಲ್ಲಿ 26 ದಶಲಕ್ಷ ಜನರಿಗೆ ಅನುಕೂಲವಾಗಲಿದೆ.

ಹಿನ್ನೆಲೆ:

 • ಯೋಜನೆಯು 200 ಕ್ಕೂ ಹೆಚ್ಚು ಬಸ್ ನಿಲ್ದಾಣಗಳ ನಿರ್ಮಾಣ ಮತ್ತು 2 ಕಿ.ಮೀ ಎತ್ತರಿಸಿದ ಸೈಡ್ ವಾಕ್ ಅನ್ನು ಒಳಗೊಂಡಿದೆ.
 • 2017 ರಲ್ಲಿ, 1,000 ಕಿ.ಮೀ ರಸ್ತೆಯನ್ನು ನವೀಕರಿಸಲು ಬ್ಯಾಂಕ್ 220 ಮಿಲಿಯನ್ ಯುಎಸ್ಡಿ ಸಾಲವನ್ನು ನೀಡಿತು.
 • ಭಾರತ ಮತ್ತು ಎಡಿಬಿ
 • ಎಡಿಬಿಯ ಸ್ಥಾಪಕ ಸದಸ್ಯರಲ್ಲಿ ಭಾರತ ಕೂಡ ಒಂದು. ಇದು ಬ್ಯಾಂಕಿನ ನಾಲ್ಕನೇ ಅತಿದೊಡ್ಡ ಷೇರುದಾರ. 1980 ಮತ್ತು 1990 ರ ದಶಕಗಳಲ್ಲಿ ಬ್ಯಾಂಕ್ ಸರ್ಕಾರದ ಕೈಗಾರಿಕೀಕರಣ ಕಾರ್ಯಕ್ರಮವನ್ನು ಬೆಂಬಲಿಸಿತು.
 • ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳನ್ನು ಆಧುನೀಕರಿಸಲು ಭಾರತವು 1986 ರಲ್ಲಿ ಕೈಗಾರಿಕಾ ಸಾಲವಾಗಿ ಬ್ಯಾಂಕಿನಿಂದ ಮೊದಲ ಸಾಲವನ್ನು ಪಡೆಯಿತು.

ಎಡಿಬಿ ಬಗ್ಗೆ

ಬ್ಯಾಂಕ್ ಅನ್ನು 1966 ರಲ್ಲಿ ಸ್ಥಾಪಿಸಲಾಯಿತು. ಬ್ಯಾಂಕಿನ ಪ್ರಧಾನ ಕಚೇರಿ ಫಿಲಿಪೈನ್ಸ್‌ನಲ್ಲಿದೆ. ಬ್ಯಾಂಕನ್ನು ವಿಶ್ವಬ್ಯಾಂಕ್‌ಗೆ ಹತ್ತಿರದಲ್ಲಿ ರೂಪಿಸಲಾಯಿತು. ಪ್ರತಿ ವರ್ಷ ಎಡಿಬಿ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡುತ್ತದೆ, ಅದು ಸಾರ್ವಜನಿಕರ ಪರಿಶೀಲನೆಗಾಗಿ ತನ್ನ ಬಜೆಟ್, ಕಾರ್ಯಾಚರಣೆಗಳು ಮತ್ತು ಇತರ ವಸ್ತುಗಳನ್ನು ಸಂಕ್ಷಿಪ್ತಗೊಳಿಸುತ್ತದೆ.

ಎಡಿಬಿ ಯುಎನ್ ವೀಕ್ಷಕ. ಜಪಾನ್ ಮತ್ತು ಯುಎಸ್ 2016 ರ ಹೊತ್ತಿಗೆ ಬ್ಯಾಂಕಿನ ಅತಿದೊಡ್ಡ ಷೇರುಗಳನ್ನು ಹೊಂದಿವೆ. ಭಾರತ ಮತ್ತು ಆಸ್ಟ್ರೇಲಿಯಾ ನಂತರದ ಮೂರನೇ ಅತಿ ದೊಡ್ಡ ಷೇರುದಾರ ಚೀನಾ.

ಕರಾವಳಿ ಪ್ಯಾಕೇಜ್‌ ಯೋಜನೆ

ಸುದ್ಧಿಯಲ್ಲಿ ಏಕಿದೆ ?

ರಾಜ್ಯದ ಕರಾವಳಿ ಭಾಗದಲ್ಲಿ ಭತ್ತದ ಇಳುವರಿಯನ್ನು ಹೆಚ್ಚಿಸಲು ಕೃಷಿ ಇಲಾಖೆಯು ‘ಕರಾವಳಿ ಪ್ಯಾಕೇಜ್‌’ ಯೋಜನೆ ಜಾರಿಗೆ ಮುತುವರ್ಜಿ ವಹಿಸಿದೆ.

ಉದ್ದೇಶ

 • ಇತ್ತೀಚೆಗೆ ಕರಾವಳಿ ಹಾಗೂ ಮಲೆನಾಡಿನ ಪ್ರದೇಶದಲ್ಲಿ ಭತ್ತದ ಇಳುವರಿ ಕಡಿಮೆಯಾಗುತ್ತಿದೆ. ಆದಾಯ ಕೂಡ ಕಡಿಮೆಯಾಗುತ್ತಿರುವ ಕಾರಣ ಭತ್ತ ಬೆಳೆಗಾರರು ಅನ್ಯ ಬೆಳೆಯತ್ತ ಚಿತ್ತ ಹರಿಸಿದ್ದಾರೆ.
 • ಇದರಿಂದ ಭತ್ತದ ಪ್ರದೇಶ ವಿಸ್ತೀರ್ಣ ಕೂಡ ಕಡಿಮೆಯಾಗಿದೆ. ಪರಿಣಾಮ ಕರಾವಳಿ ಭಾಗದ ಜನಪ್ರಿಯ ಕೆಂಪಕ್ಕಿ ಸಹಿತ ಇತರ ಅಪರೂಪದ ಅಕ್ಕಿ ಮಾರುಕಟ್ಟೆಯಲ್ಲಿಕಡಿಮೆಯಾಗುತ್ತಿದ್ದು, ಅದರ ಬೆಲೆ ಗಗನಕ್ಕೇರಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕರಾವಳಿ ರೈತರನ್ನು ಗುರಿಯಾಗಿರಿಸಿಕೊಂಡು ಸರಕಾರ ಯೋಜನೆಯನ್ನು ಪ್ರಕಟಿಸಿದೆ.

ಯೋಜನೆ ಬಗ್ಗೆ

 • ಯೋಜನೆಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. 2500 ಮಿ.ಮೀ.ಗಿಂತ ಹೆಚ್ಚು ಮಳೆ ಬೀಳುವ ತಾಲೂಕುಗಳಿಗೆ ಆದ್ಯತೆ ಸಿಗಲಿದೆ. ಪ್ರತಿ ಹೆಕ್ಟೇರ್‌ಗೆ ಏಳು ಸಾವಿರ ರೂ. ಪ್ರೋತ್ಸಾಹಧನ ಸಿಗಲಿದ್ದು, ರೈತರು ಗರಿಷ್ಠ ಎರಡು ಎಕರೆವರೆಗೆ ಪ್ರಯೋಜನ ಪಡೆಯಲು ಅರ್ಹರಿರುತ್ತಾರೆ. ಕನಿಷ್ಠ ಒಂದು ಎಕರೆ ವಿಸ್ತೀರ್ಣವುಳ್ಳ ರೈತರಿಗೂ ಯೋಜ ನೆಯ ಲಾಭ ಸಿಗಲಿದೆ. ಒಟ್ಟು 20 ಸಾವಿರ ರೈತರಿಗೆ ಪ್ರೋತ್ಸಾ ಹಧನವನ್ನು ವಿತರಿಸಲು ಇಲಾಖೆ ಗುರಿ ಹೊಂದಿದೆ.
 • ಕರಿ ಕಗ್ಗ, ಬಿಳಿ ಕಗ್ಗ ಸಹಿತ ಸ್ಥಳೀಯ ತಳಿಗಳನ್ನು ಬೆಳೆಸುವಿಕೆ ಹಾಗೂ ನೇರ ಕೂರಿಗೆ, ಯಾಂತ್ರೀಕೃತ ನಾಟಿ ಅಂತಹ ಪದ್ಧತಿಯನ್ನು ಅಳವಡಿಸಿಕೊಳ್ಳಲು ಷರತ್ತು ವಿಧಿಸಲಾಗಿದೆ. ರೈತರು ಯೋಜನೆಯ ಲಾಭ ಪಡೆಯಲು ಜಿಲ್ಲಾಜಂಟಿ ನಿರ್ದೇಶಕರು, ತಾಲೂಕು ಕೃಷಿ ಅಧಿಕಾರಿ ಅಥವಾ ರೈತ ಸಂಪರ್ಕ ಕೇಂದ್ರ (ಆರ್‌ಎಸ್‌ಕೆ)ಗಳಲ್ಲಿಮಾಹಿತಿ ಪಡೆದು ಹೆಸರು ನೋಂದಾಯಿಸಿಕೊಳ್ಳಬಹುದು.

ರಾಜಧಾನಿಗೆ ಪ್ಲ್ಯಾನಿಂಗ್‌ನದೇ ಕೊರತೆ

ಸುದ್ಧಿಯಲ್ಲಿ ಏಕಿದೆ ?

ಪ್ರಸಕ್ತ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಡ್ಡಾದಿಡ್ಡಿ ಕಾಮಗಾರಿಗಳು, ಅದರಿಂದಾಧಿಗುತ್ತಿರುವ ಅಪಾರ ತೊಂದರೆಗಳಿಗೆ ಪ್ಲ್ಯಾನಿಂಗ್‌ ಕೊರತೆ ಕಾರಣ ಎಂಬ ದೂರಿದೆ.

 • ರಾಜಧಾನಿಯ ಯೋಜಿತ ಅಭಿವೃದ್ಧಿ ಮತ್ತು ದೂರದೃಷ್ಟಿಯ ಯೋಜನೆಗಳ ನೀಲ ನಕ್ಷೆ ರೂಪಿಸುವ ಉದ್ದೇಶದಿಂದ ರಚನೆಯಾಗಿರುವ ಬೆಂಗಳೂರು ಮಹಾನಗರ ಯೋಜನಾ ಸಮಿತಿ (ಬಿಎಂಪಿಸಿ) ಕಳೆದ ಐದು ವರ್ಷಗಳಲ್ಲಿ ನಡೆಸಿರುವುದು ಕೇವಲ ಎರಡು ಸಭೆ.

ಹೈಕೋರ್ಟ್‌ನಲ್ಲಿ ಅರ್ಜಿ ಬಾಕಿ

 • ಬಿಎಂಪಿಸಿ ರಚನೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್‌ನಲ್ಲಿ ಬಾಕಿ ಇದೆ. ಸರಕಾರವು ವಿಚಾರಣೆ ವೇಳೆ ಒಂದಲ್ಲಾ ಒಂದು ಕಾರಣ ನೀಡಿ ಅರ್ಜಿಯನ್ನು ಮುಂದೂಡಿಸಿಕೊಳ್ಳುತ್ತಿದೆ.

ಸಮಿತಿಯಲ್ಲಿ ಯಾರಿದ್ದಾರೆ:

 • ಸಿಎಂ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರು ಉಪಾಧ್ಯಕ್ಷ. ಬೆಂಗಳೂರಿನ ಎಲ್ಲ ಶಾಸಕರು, ಸಂಸದರು, ಪಾಲಿಕೆಯಿಂದ ಚುನಾಯಿತವಾದ 18 ಮಂದಿ ಸದಸ್ಯರು ಸೇರಿ ಒಟ್ಟು 88 ಮಂದಿ ಸದಸ್ಯರಿರುತ್ತಾರೆ.

ಚರ್ಚೆ ಆಗಬೇಕಿರುವ ಪ್ರಮುಖ ವಿಷಯ

 • ಬೆಂಗಳೂರು ಮಹಾನಗರ ಕ್ರಿಯಾ ಯೋಜನೆ 2031 ಅಂತಿಮ
 • ಮತ್ತೆ ಬಿಗಡಾಯಿಸಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ನಿವಾರಣೆ
 • ರಸ್ತೆ, ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವುದು.
 • ಸಂಚಾರ ದಟ್ಟಣೆ ತಪ್ಪಿಸಲು ಸಮಗ್ರ ಕಾರ‍್ಯಯೋಜನೆ ರೂಪಿಸುವುದು.
 • ಬೆಳ್ಳಂದೂರು ಕೆರೆ ನೊರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು

ಸಮಿತಿ ಕಾರ್ಯಗಳೇನು?

 • ಮಹಾನಗರದ ಆಡಳಿತ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಗಳ ನಡುವೆ ಸಮನ್ವಯತೆ ಸಾಧಿಸುವುದು
 • ನಗರ ಯೋಜನೆ ಸಂಬಂಧ ಪ್ರತಿ ಐದು ವರ್ಷಕ್ಕೊಮ್ಮೆ ಕರಡು ಅಭಿವೃದ್ಧಿ ಯೋಜನೆ ರೂಪಿಸುವುದು
 • ನಗರ ಯೋಜನೆಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವುದು
 • ನಗರಾಭಿವೃದ್ಧಿಯ ನೀಲನಕ್ಷೆ, ಮೂಲ ಸೌಕರ್ಯ ವೃದ್ಧಿ, ನಗರ ಸಾರಿಗೆ, ಮಾಲಿನ್ಯ ನಿಯಂತ್ರಣ
 • ನಗರದ ಅಭ್ಯುದಯಕ್ಕೆ ಅಗತ್ಯ ಯೋಜನೆಗಳನ್ನು ರೂಪಿಸುವುದು
 • ನಗರಾಡಳಿತ ಸಂಸ್ಥೆಗಳು ಸಲ್ಲಿಸುವ ಅಭಿವೃದ್ಧಿ ಯೋಜನೆಗಳನ್ನು ಪರಿಷ್ಕರಿಸಿ ಅಂತಿಮಗೊಳಿಸುವುದು
 • ಹಿಂದಿನ ಅಭಿವೃದ್ಧಿ ಯೋಜನೆಗಳ ಭೌತಿಕ ಮತ್ತು ಆರ್ಥಿಕ ಪ್ರಗತಿ ಪರಿಶೀಲನೆ ನಡೆಸುವುದು
 • ಸ್ಥಳೀಯ ಅಭಿವೃದ್ಧಿ ಯೋಜನೆಗಳಿಗಾಗಿ ನಗರಾಡಳಿತ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡುವ ಏಜೆನ್ಸಿ

ವಾಲ್ಮೀಕಿ ಪ್ರಶಸ್ತಿ

ಸುದ್ಧಿಯಲ್ಲಿ ಏಕಿದೆ ?

ಪರಿಶಿಷ್ಟ ಜನಾಂಗದ ಶ್ರೇಯೋಭಿವೃದಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಮೂವರು ಗಣ್ಯರನ್ನು ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಹೇಳಿದ್ದಾರೆ.

 • ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ. ಕಮಲಾ ಹಂಪನಾ, ಸಾಮಾಜಿಕ ಕ್ಷೇತ್ರದಲ್ಲಿ ಗುರುತರವಾಗಿ ಸೇವೆಸಲ್ಲಿಸುತ್ತಿರುವ ಓಬಳಪ್ಪ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ. ಜಿ. ರಂಗಯ್ಯ ಅವರನ್ನು ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ
 • ಪ್ರತಿ ಪ್ರಶಸ್ತಿಯು ತಲಾ 20 ಗ್ರಾಂ ಚಿನ್ನದ ಪದಕ ಹಾಗು 5 ಲಕ್ಷ ರೂ. ನಗದು ಒಳಗೊಂಡಿರುತ್ತದೆ.

ಪ್ರಶಸ್ತಿ ಪುರಸ್ಕೃತರ ಪರಿಚಯ

 • ಡಾ. ಕಮಲಾ ಹಂಪನಾ ಅವರು ಕರ್ನಾಟಕದ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿದ್ದಾರೆ. ನಿರಂತರ ಪರಿಶ್ರಮ, ನಾಡುನುಡಿಯ ಬಗೆಗಿನ ಅನುಪಮ ಪ್ರೀತಿ, ಅವರ ಸಾಹಿತ್ಯಿಕ ಸಾಧನೆಯಿಂದಲೇ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯವರೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
 • ಓಬಳಪ್ಪ ಅವರು ನಿವೃತ್ತ ಕೃಷಿ ಅಧಿಕಾರಿಯಾಗಿದ್ದು, ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಆಡಳಿತಾಧಿಕಾರಿಯಾಗಿ ಹಾಗು ಹರಿಹರದ ವಾಲ್ಮೀಕಿ ಹಾಸ್ಟಲ್ ಸಮಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ. ವಾಲ್ಮೀಕಿ ಸಮಾಜದ ಮಕ್ಕಳಿಗೆ ಶಿಕ್ಷಣದ ಮೌಲ್ಯಗಳ ಬಗ್ಗೆ ಅರಿವು ಮೂಡಿಸಿ, ಉಚಿತ ಶಿಕ್ಷಣ ದೊರಕಿಸಿಕೊಡಲು ಅವಿರತವಾಗಿ ಶ್ರಮಿಸುತ್ತಿದ್ದಾರೆ.ಪರಿಶಿಷ್ಟ ವರ್ಗಗಳ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ.
 • ಡಾ. ಜಿ. ರಂಗಯ್ಯ ಅವರು ನರರೋಗ ತಜ್ಞರಾಗಿದ್ದಾರೆ. ಅವರು ವಿದೇಶದಲ್ಲಿ ನ್ಯೂಯಾರ್ಕ್ ಸಿಟಿ ಮೆಡಿಕಲ್ ಸೊಸೈಟಿ ಅಧ್ಯಕ್ಷರಾಗಿ, ಅಮೇರಿಕ ದೇಶದಲ್ಲಿರುವ ಇಂಡಿಯನ್ ನ್ಯೂರಾಲಜಿಸ್ಟ್ ಸಂಸ್ಥೆಯ ಕಾರ್ಯದರ್ಶಿಯಾಗಿ, ಇಂಡಿಯನ್ ನ್ಯೂರಾಲಜಿಸ್ಟ್ ನ್ಯಾಷನಲ್ ಅಸೋಸಿಯೇಷನ್ ಅಧ್ಯಕ್ಷರಾಗಿ, ನ್ಯೂಯಾರ್ಕ್‍ನ ಪ್ರತಿಷ್ಠಿತ ಸ್ಥಳಗಳಲ್ಲಿ ಸ್ಥಾಪಿಸಿರುವ ಮಹಾತ್ಮ ಗಾಂಧಿ ಪ್ರತಿಮೆಯ ಸ್ಥಾಪಕ ಸಮಿತಿ ಸದಸ್ಯರಾಗಿದ್ದಾರೆ. ರಾಷ್ಟದಲ್ಲಿ  ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದರು.

ವಿಶ್ವಬ್ಯಾಂಕ್ ದ್ವೈವಾರ್ಷಿಕ ವರದಿ

ಸುದ್ಧಿಯಲ್ಲಿ ಏಕಿದೆ ?

ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣ ಶೇ 6ಕ್ಕೆ ಕುಸಿಯಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ.

ವರದಿಯಲ್ಲಿ ಏನಿದೆ ?

 • ದಕ್ಷಿಣ ಏಷ್ಯಾ ರಾಷ್ಟ್ರಗಳ ಆರ್ಥಿಕತೆಯನ್ನು ಕೇಂದ್ರೀಕರಿಸಿ ವಿಶ್ವಬ್ಯಾಂಕ್ ದ್ವೈವಾರ್ಷಿಕ ವರದಿ ಸಿದ್ಧಪಡಿಸಲಾಗುತ್ತಿದ್ದು, 2018–19ನೇ ವಿತ್ತೀಯ ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರವು ಶೇ 9ರಷ್ಟು ದಾಖಲಾಗಿದೆ ಎನ್ನಲಾಗಿದೆ.
 • ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಜತೆಗಿನ ಸಭೆಯ ಹಿನ್ನೆಲೆಯಲ್ಲಿ ವಿಶ್ವಬ್ಯಾಂಕ್‌ ಈ ವರದಿ ಬಿಡುಗಡೆ ಮಾಡಿದೆ. 2017-18ನೇ ವತ್ತೀಯ ವರ್ಷದಲ್ಲಿ ಶೇ 2ರಷ್ಟಿದ್ದ ಆರ್ಥಿಕ ವೃದ್ಧಿ ದರವು 2018–19ರಲ್ಲಿ ಶೇ 6.8 ದಾಖಲಾಗಿದೆ.
 • ಉತ್ಪಾದನೆ ಮತ್ತು ನಿರ್ಮಾಣ ಚಟುವಟಿಕೆಗಳು ಚೇತರಿಸಿಕೊಂಡಿರುವುದರಿಂದ ಕೈಗಾರಿಕಾ ಉತ್ಪಾದನೆ ವೃದ್ಧಿ ದರ ಶೇ 9ಕ್ಕೆ ಏರಿಕೆ ಕಂಡಿದೆ. ಕೃಷಿ ಮತ್ತು ಸೇವಾ ವಲಯಗಳಲ್ಲಿನ ವೃದ್ಧಿ ದರವು ಕ್ರಮವಾಗಿ ಶೇ 2.9 ಮತ್ತು ಶೇ 7.5ರಷ್ಟು ಎಂದಿದೆ.
 • 2019–20ರ ಮೊದಲ ತ್ರೈಮಾಸಿಕದಲ್ಲಿ ಬೇಡಿಕೆ ಕುಸಿತದಿಂದಾಗಿ ಕೈಗಾರಿಕೆ ಮತ್ತು ಸೇವಾ ವಲಯದ ಪೂರೈಕೆ ವಲಯ ಕುಂಠಿತ ಕಂಡಿರುವುದಾಗಿ ವಿಶ್ವಬ್ಯಾಂಕ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
 • ಇನ್ನು ಅಮೆರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ 2018ರ ಮಾರ್ಚ್‌ನಿಂದ ಅಕ್ಟೋಬರ್‌ ವರೆಗೂ ಶೇ 1ರಷ್ಟು ಕುಸಿದಿತ್ತು. ಆದರೆ ಬಳಿಕ ಅಂದರೆ 2019ರ ಮಾರ್ಚ್‌ ವರೆಗೂ ಶೇ 7ರಷ್ಟು ಏರಿಕೆ ಕಂಡಿತ್ತು ಎಂದು ವರದಿಯಲ್ಲಿ ತಿಳಿಸಿದೆ.

ಆರ್‌ಟಿಐ

ಸುದ್ಧಿಯಲ್ಲಿ ಏಕಿದೆ ?

ದೇಶದ ನಾಗರಿಕರು ಯಾವುದೇ ವಿಷಯದ ಬಗ್ಗೆ ಮಾಹಿತಿ ಪಡೆಯಲು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಬೇಕಾದ ಅಗತ್ಯವೇ ಇಲ್ಲದಂತಹ ಆಡಳಿತವನ್ನು ನೀಡಲು ಕೇಂದ್ರ ಸರಕಾರ ಸರ್ವ ಪ್ರಯತ್ನ ಮಾಡುತ್ತಿರುವುದಾಗಿ ಮತ್ತು ಅತ್ಯಂತ ಪಾರದರ್ಶಕವಾಗಿ, ಆನ್‌ಲೈನ್ ಮೂಲಕ ಜನರಿಗೆ ಎಲ್ಲಾ ಮಾಹಿತಿ ದೊರೆಯುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಮಾಹಿತಿ ಹಕ್ಕಿನ ಬಗ್ಗೆ (ಆರ್‌ಟಿಐ)

 • ಭಾರತೀಯ ಸಂವಿಧಾನದ 19 (1) ನೇ ವಿಧಿಯು ಮಾಹಿತಿ ಹಕ್ಕು (ಆರ್‌ಟಿಐ) ಮೂಲಭೂತ ಹಕ್ಕುಗಳ ಒಂದು ಭಾಗವಾಗಿದೆ ಎಂದು ಸೂಚಿಸುತ್ತದೆ. ಪ್ರತಿಯೊಬ್ಬ ನಾಗರಿಕನಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಅದು ಹೇಳುತ್ತದೆ. 1976 ರಲ್ಲಿ, ರಾಜ್ ನರೈನ್ ಮತ್ತು ಯುಪಿ ರಾಜ್ಯದಲ್ಲಿ, ಜನರು ತಿಳಿದಿಲ್ಲದಿದ್ದರೆ ಮಾತನಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು . ಆದ್ದರಿಂದ ಮಾಹಿತಿ ಹಕ್ಕನ್ನು ಆರ್ಟಿಕಲ್ 19 ರಲ್ಲಿ ಸೇರಿಸಲಾಗಿದೆ . ಭಾರತೀಯ ಪ್ರಜಾಪ್ರಭುತ್ವದಲ್ಲಿ ಜನರು ಸರ್ಕಾರದ ಕಾರ್ಯವೈಖರಿಯ ಬಗ್ಗೆ ತಿಳಿದುಕೊಳ್ಳುವ ಹಕ್ಕನ್ನುಪಡೆಯಲು ಈ ಕಾಯ್ದೆ ಸೂಕ್ತ ಎಂದು ಇದೇ ಸಂದರ್ಭದಲ್ಲಿ ಹೇಳಲಾಗಿದೆ. ಆರ್‌ಟಿಐ ಕಾಯ್ದೆ ಈ ಮೂಲಭೂತ ಹಕ್ಕನ್ನು ಚಲಾಯಿಸಲು ಕಾರ್ಯ ಸಾಧನವನ್ನು  ಒದಗಿಸುತ್ತದೆ.
 • ಆರ್‌ಟಿಐ ಕಾಯ್ದೆ 2005 ರ ಪ್ರಕಾರ, ಪ್ರತಿಯೊಬ್ಬ ನಾಗರಿಕನು ಸರ್ಕಾರದ ಕಾರ್ಯವೈಖರಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗಾಗಿ ಸರ್ಕಾರದಿಂದ ಸಮಯೋಚಿತ ಪ್ರತಿಕ್ರಿಯೆ ಪಡೆಯುವ ಹಕ್ಕನ್ನು ಹೊಂದಿರುತ್ತಾನೆ.

ಆರ್‌ಟಿಐ ಮೂಲ ಉದ್ದೇಶ

 • ನಾಗರಿಕರ ಸಬಲೀಕರಣ
 • ಸರ್ಕಾರದ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸುವುದು
 • ಭ್ರಷ್ಟಾಚಾರ ತಡೆಗಟ್ಟುವಿಕೆ ಮತ್ತು ನಿರ್ಮೂಲನೆ
 • ಪ್ರಜಾಪ್ರಭುತ್ವ ಜನರಿಗೆ ಅದರ ನೈಜ ಅರ್ಥದಲ್ಲಿ ಕೆಲಸ ಮಾಡುವುದು.
 • ತಿಳುವಳಿಕೆಯುಳ್ಳ ನಾಗರಿಕನು ಸರ್ಕಾರದ ಆಡಳಿತವನ್ನು ಹೆಚ್ಚು ಜವಾಬ್ದಾರಿಯುತವಾಗಿಸುವ ಸಲುವಾಗಿ ಆಡಳಿತದ ಸಾಧನಗಳ ಬಗ್ಗೆ ಜಾಗರೂಕತೆಯನ್ನು ಹೊಂದಲು ಉತ್ತಮವಾಗಿದೆ. ಸರ್ಕಾರದ ಚಟುವಟಿಕೆಗಳ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡುವಲ್ಲಿ ಆರ್‌ಟಿಐ ಮಹತ್ವ  ಅಧಿಕವಾಗಿದೆ.
 • ಆರ್‌ಟಿಐ ಪ್ರಕ್ರಿಯೆಯನ್ನು ಸುಗಮಗೊಳಿಸುವ ಸಲುವಾಗಿ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು ಆರ್‌ಟಿಐ ಪೋರ್ಟಲ್ ಅನ್ನು ರಚಿಸಿದೆ. ಆರ್‌ಟಿಐಗೆ ಸಂಬಂಧಿಸಿದ ಮಾಹಿತಿಯ ಪ್ರವೇಶದ ಜೊತೆಗೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಡಿಯಲ್ಲಿ ವಿವಿಧ ಸಾರ್ವಜನಿಕ ಪ್ರಾಧಿಕಾರಗಳು ಪ್ರಕಟಿಸಿದ ಪ್ರಕಟಣೆಗಳು, ಮೊದಲ ಮೇಲ್ಮನವಿ ಪ್ರಾಧಿಕಾರಗಳು, ತತ್ವ ಮಾಹಿತಿ ಅಧಿಕಾರಿಗಳು ಇತ್ಯಾದಿಗಳ ವಿವರಗಳ ಬಗ್ಗೆ ಮಾಹಿತಿ ಪಡೆಯಲು ಇದು ಒಂದು ದ್ವಾರವಾಗಿ ಕಾರ್ಯನಿರ್ವಹಿಸುತ್ತದೆ.

 

 

 

  
KPSC ಪರೀಕ್ಷಾರ್ಥಿಗಳಿಗಾಗಿ ವಿಶೇಷ ತರಗತಿಗಳು.
ಲೈವ್ ಸಂವಾದಾತ್ಮಕ ( interactive ) ತರಗತಿಗಳು
21-11-2019 ಮತ್ತು 24-11-2019 
7.00 PM ನಿಂದ 9.00 PM ವರೆಗೆ 

ಇಂದೇ ನೋಂದಾಯಿಸಿರಿ 
Register Now!!
close-link